ದರ್ಶನ್,ಯಶ್ ನಟನೆ ಚಿತ್ರರಂಗಕ್ಕೆ ಸೀಮಿತವಾಗಿರಲಿ ರಾಜಕೀಯಕ್ಕೆ ಬೇಡ : ಶಿವರಾಮೇಗೌಡ ಕಿಡಿ..!

darshan yash

ಮಂಡ್ಯ ಜೋಡೆತ್ತುಗಳು ಮಂಡ್ಯ ಲೋಕಸಭಾ ಚುನಾವಣೆಯಾದ ಮೇಲೆ ಅಡ್ರಸ್ಸಿಗೆ ಇಲ್ಲ ಎಂದು ಈ ಹಿಂದೆ ಕಿಡಿಕಾರಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಈಗ ಮತ್ತೊಮ್ಮೆ ದರ್ಶನ್, ಯಶ್ ಮೇಲೆ ಕಿಡಿಕಾರಿದ್ದಾರೆ. ಚಿತ್ರನಟರು ಯಾವಾಗಲೂ ಚಿತ್ರರಂಗದಲ್ಲಿದ್ದರೆ ಚೆನ್ನಾ ಅವರು ರಾಜಕೀಯಕ್ಕೆ ಬರಬಾರದು, ಹಾಗೇ ದರ್ಶನ್ ಮತ್ತು ಯಶ್ ನಟನೆ ಚಿತ್ರರಂಗಕ್ಕೆ ಸೀಮಿತವಾಗಿರಬೇಕು ಅದನ್ನು ಬಿಟ್ಟು ರಾಜಕೀಯಕ್ಕೆ ಬೇಡ ಎಂದು ಶಿವರಾಮೇಗೌಡ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿವರಾಮೇಗೌಡ ಸಿನಿಮಾದವರ ಹಣೆಬರಹ ನನಗೆ ಗೊತ್ತಿದೆ,ಸಿನಿಮಾದಲ್ಲಿ ಅವರ ನಟನೆ ನೋಡಲು ಅಷ್ಟೇ ಚೆಂದ ಅದು ರಾಜಕೀಯದಲ್ಲಿ ಆಗೋಲ್ಲ ಎಂದು ದರ್ಶನ್ ಮತ್ತು ಯಶ್ ವಿರುದ್ಧ ಕಿಡಿಕಾರಿದ್ರು.
ಅಂಬರೀಶ್ ಅವರು ರಾಜಕೀಯದಲ್ಲಿ ಇದ್ದರು ಅವರು ಯಾವತ್ತು ಜನರಿಗೆ ಸುಳ್ಳು ಭರವಸೆಯನ್ನು ನೀಡಿರಲಿಲ್ಲ, ಜೋಡೆತ್ತುಗಳ ತರಹ ಊರೂರು ತಿರುಗಿ ತಮಟೆ ಬಾರಿಸಿಕೊಂಡು ನಾವಿದ್ದೀವಿ ನಿಮ್ಮ ಎಲ್ಲಾ ಕಷ್ಟ ನಿವಾರಣೆ ಮಾಡುತ್ತೇವೆ ಅಂತ ಹೇಳಲಿಲ್ಲ, ಲೋಕಸಭಾ ಚುನಾವಣೆ ವೇಳೆ ಊರೂರು ಸುತ್ತಿ ಸುಮಲತಾ ಪರ ಪ್ರಚಾರ ನಡೆಸಿದ್ದ ದರ್ಶನ್ ಮತ್ತು ಯಶ್ ಕಾಲೆಳೆದ್ರು ಶಿವರಾಮೇಗೌಡ.
ಇನ್ನು ಸಿನಿಮಾದವರಿಗೆ ಗೌರವ ಕೊಡೋಣ, ಅವರ ಸಿನಿಮಾವನ್ನು ದುಡ್ಡು ಕೊಟ್ಟು ನೋಡೋಣ, ಆದ್ರೆ ಸಿನಿಮಾ ನಟರು ರಾಜಕೀಯಕ್ಕೆ ಬೇಡ ಅವರ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರಲಿ ಅನ್ನೋದನ್ನ ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಜನಗಳ ಕಷ್ಟಕ್ಕೆ ಸಿನಿಮಾದವರು ಬರೋದಿಲ್ಲ, ಜನಗಳ ಕಷ್ಟಕ್ಕೆ ಕೊನೆಗೆ ನಾವೇ ಹೋಗಬೇಕು ಎಂದು ಜನರಿಗೆ ಅರ್ಥವಾಗಬೇಕು ಎಂದು ದರ್ಶನ್ ಮತ್ತು ಯಶ್ ವಿರುದ್ಧ ಕಿಡಿಕಾರಿದ್ರು.

ಅಷ್ಟೇ ಅಲ್ಲದೇ ಸುಮಲತಾ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗೆ ಭೇಟಿಕೊಟ್ಟದ್ದನ್ನು ಸಹ ವ್ಯಂಗ್ಯವಾಡಿದ್ದ ಮಾಜಿ ಸಂಸದರು ಸುಮಲತಾ ಜೆಡಿಎಸ್ ಕಚೇರಿಗೂ ಕರೆದರೆ ಬರುತ್ತೇನೆ ಎಂದು ಪ್ರತಿಕ್ರಿಯಿಸಿದ್ರು, ಆದ್ರೆ ಜೆಡಿಎಸ್ ಕಚೇರಿಗೆ ನಿಮ್ಮನ್ನು ಯಾರು ಕರೆಯೋದಿಲ್ಲ ಬಿಡಿ ಎಂದು ಶಿವರಾಮೇಗೌಡ್ರು ತಿರುಗೇಟು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top