ಶಿವರಾಜ್ ಕೆ.ಆರ್.ಪೇಟೆ ಕೊಟ್ಟ ಸರ್ಪ್ರೈಜ್ ಏನು..?

ಇಂದು, ಅಂದ್ರೆ 18.01.2020 ಸಂಜೆ 6.30 ಗೆ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡೋದಾಗಿ ಚಿತ್ರ ತಂಡ ಅನೌನ್ಸ್ ಮಾಡಿತ್ತು. ಆದ್ರೆ ಕಾರಣಾಂತರದಿಂದ ಟ್ರೈಲರ್ ಬಿಡುಗಡೆ ಒಂದು ದಿನ ಮುಂದಕ್ಕೆ ಹೋಗಿದೆ ಎಂದು ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ಚಿತ್ರತಂಡ ತಿಳಿಸಿದೆ. ನಾಳೆ ಸಂಜೆ ಅಂದ್ರೆ ಭಾನುವಾರ ಸಂಜೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಸಿನಿಮಾದ ಟ್ರೈಲರ್ ಬಿಡುಗಡೆಗೊಳ್ಳಲಿದೆ.

ವಿಶೇಷ ಅಂದ್ರೆ ಲೇಟಾದ್ರು ಲೇಟೆಸ್ಟಾಗಿ ಚಿತ್ರರಸಿಕರಿಗೆ ಒಂದು ಸರ್ಪ್ರೈಸ್ ಕೊಡೋಕೆ ರೆಡಿಯಾಗಿದೆ. ಆ ಸರ್ಪ್ರೈಜ್ ಏನೂ ಎಂಬ ಗುಟ್ಟನ್ನ ಚಿತ್ರತಂಡ ಬಿಟ್ಟುಕೊಡದೇ ಸಸ್ಪೆನ್ಸ್ ಉಳಿಸಿಕೊಂಡಿದೆ. ಏನೂ ಆ ಸರ್ಪ್ರೈಜ್ ಎಂಬುದನ್ನ ತಿಳಿದುಕೊಳ್ಳ ಭಾನುವಾರ ಸಂಜೆವರೆಗೂ ಕಾಯಲೇ ಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top