ಮತ್ತೆ ಭೈರತ್ತಿ ರಣಗಲ್ ಆದ ಶಿವಣ್ಣ..!

ಸ್ಯಾಂಡಲ್‌ವುಡ್ ಚಕ್ರವರ್ತಿ ‌ಡಾ.ಶಿವರಾಜ್ ಕುಮಾರ್ ರವರ ಸಾಲು ಸಾಲು ಸಿನಿಮಾಗಳು ಬರ್ತಾ ಇವೆ.. ಒಂದರ ಹಿಂದೆ ಒಂದತೆ ಹಿಟ್ ಸಿನಿಮಾಗಳನ್ನು ನೀಡ್ತಾ ಇರೋ ಶಿವಣ್ಣ ಈಗ ಮತ್ತೆ ಭೈರತ್ತಿ ರಣಗಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ.. ಹೌದು ಶಿವಣ್ಣ ಮತ್ತು ಮುರುಳಿ ಜೊತೆಯಾಗಿ‌ ನಟಿಸಿದ್ದ ಮಫ್ತಿ ಚಿತ್ರ ದೊಡ್ಡ ಹಿಟ್ ಪಡೆದು ಬಾಕ್ಸಾಫಿಸ್ ನಲ್ಲಿ ದೊಡ್ಡ ಕಲೆಕ್ಷನ್ ಕಂಡಿತ್ತು.. ಜೊತೆಗೆ ನರ್ತನ್ ಎಂಬ ಹೊಸ ನಿರ್ದೇಶಕನಿಗೆ ಸ್ಟಾರ್ ಡೈರೆಕ್ಟರ್ ‌ಅನ್ನೋ ಪಟ್ಟ ತಂದು ಕೊಟ್ಟಿತು.. ಈಗ ಅದೇ ನಿರ್ದೇಶಕನ ನಿರ್ದೇಶನದಲ್ಲಿ ಶಿವಣ್ಣ ಭೈರತ್ತಿ‌ ರಣಗಲ್ ಆಗಿ ಕಾಣಿಕೊಳ್ಳಲಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಭೈರತ್ತಿ ಕಣಗಲ್ ಅನ್ನೋ ಟೈಟಲ್ ಅಲ್ಲಿ ಸಿನಿಮಾ ಬರ್ತಾ ಇದೆ.. ಇನ್ನು ನರ್ತನ್ ನಿರ್ದೇಶನದ ಮಫ್ತಿ ಸಿನಿಮಾದಲ್ಲಿ ಶಿವಣ್ಣ ಭೈರತ್ತಿ ರಣಗಲ್ ಪಾತ್ರದಲ್ಲಿ ಸಖತ್ ಮಿಂಚಿದ್ದ ಶಿವಣ್ಣ ಈಗ ಅದೇ ಪಾತ್ರದ ಹೆಸರು ಈಗ ಟೈಟಲ್ ಆಗಿದ್ದು ಚಿತ್ರದ ಸ್ಕ್ರಿಪ್ಟ್ ವರ್ಕ್ ನಲ್ಲಿ ನಿರತರಾಗಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಶಿವಣ್ಣ ನಿರ್ಮಾಣದ ಜವಬ್ದಾರಿಯ‌ನ್ನು ಹೊತ್ತಿದ್ದು ಚಿತ್ರ ಆರಂಭವಾಗೋಕೆ ಇನ್ನು ಕೆಲವು ತಿಂಗಳು ಕಾಯಲೇಬೇಕು..

ಈಗಾಗ್ಲೇ ರುಸ್ತುಂ, ಕವಚ ಮತ್ತು‌ ದ್ವಾರಕೀಶ್ ನಿರ್ಮಾಣದ ಆನಂದ್ ಮತ್ತು ತಮ್ಮ ಸಂಬಂಧಿ ನಿರ್ದೇಶನದ SRK ಸಿನಿಮಾ ಮುಕ್ತಯವಾದ ಮೇಲೆ ಭೈರತ್ತಿ‌ ರಣಗಲ್ ಸಿನಿಮಾ ಸೆಟ್ಟೇರಲಿದೆ ಅನ್ನೋ ಮಾಹಿತಿ‌ ಗಾಂಧಿನಗರದ ಅಡ್ಡದಿಂದ ಬರ್ತಾ ಇರೋ ಲೇಟೆಸ್ಟ್ ಅಪ್ ಡೇಟ್..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top