ಡಿವೋರ್ಸ್ ಕೇಳಿದ ಪತಿಯಿಂದಲೇ ಇನ್ನೊಂದು ಮಗು ಬೇಕೆಂದ ಪತ್ನಿ !

ನಮ್ಮ ದೇಶದಲ್ಲಿ ಹಿಂದೆಲ್ಲಾ ಒಮ್ಮೆ ಮದುವೆ ಆದರೆ ಅದು ಏಳೇಳು ಜನುಮದ ಸಂಬಂಧ ಎಂದೆಲ್ಲಾ ಹೇಳುತ್ತಿದ್ದರು. ಸಾಮಾನ್ಯವಾಗಿ ಎಷ್ಟೇ ಕಷ್ಟಗಳು, ಭಿನ್ನಾಭಿಪ್ರಾಯಗಳು ಬರಲಿ ಡೈವೋರ್ಸ್ ಬಹು ದೂರದ ಮಾತು.


ಇಂದಿಗೂ ಹಳ್ಳಿಗಳಲ್ಲಿ ವಿಚ್ಚೇದನ ಎಂಬುದು ತೀರಾ ಕಡಿಮೆ ಆದರೆ ಮಹಾನಗರಗಳಲ್ಲಿ ಇದು ಮಾಮೂಲು ಆಗಿ ಬಿಟ್ಟಿದೆ. ವೆಸ್ಟರ್ನ್ ಕಲ್ಚರ್ಗೆ ಮಾರು ಹೋಗಿ ಬಟ್ಟೆ ಬದಲಿಸಿದಂತೆ ತಮ್ಮ ಲೈಫ್ ಪಾರ್ಟ್‍ನರ್ ಬದಲಿಸುವ ಕಲ್ಚರ್ ಶುರುವಾಗಿದೆ. ಚಿಕ್ಕ ಪುಟ್ಟ ಭಿನ್ನಭಿಪ್ರಾಯ ಬಂದರೂ ಡೈವೋರ್ಸ್ ಅಂತ ಬೇರೆ ಆಗಿಬಿಡ್ತಾರೆ.

ಇಲ್ಲಿ ವಿಷಯ ಬರಿ ಡಿವೋರ್ಸ್‍ದು ಆಗಿದ್ದರೆ ಇಷ್ಟು ಸುದ್ದಿ ಆಗ್ತಿರಲಿಲ್ಲ, ಡಿವೋರ್ಸ್‍ಗೆ ಮೊದಲು ಮಗು ಬೇಕೆಂಬ ಮಹಿಳೆಯ ಕೋರಿಕೆ ಸಾಕಷ್ಟು ಸುದ್ದಿಯಾಗಿದೆ.

ಹೌದು 2017ರಲ್ಲಿ ಪತ್ನಿಯ ಕಾಟ ತಡೆಯಲಾಗುತ್ತಿಲ್ಲ ಅಂತ ಮಹಾರಾಷ್ಟ್ರದ ನಾಂದೇಡ್‍ನಲ್ಲಿ ವ್ಯಕ್ತಿಯೊಬ್ಬ ಕೋರ್ಟ್‍ನಲ್ಲಿ ಡಿವೋರ್ಸ್ ಬೇಕೆಂದು ಅರ್ಜಿ ಸಲ್ಲಿಸಿದ್ದ. ವಿಚ್ಚೇದನಕ್ಕೆ ಪತಿ ಅರ್ಜಿ ಸಲ್ಲಿಸಿದ್ದಾಗ ನಮ್ಮನ್ನು ಒಗ್ಗೂಡಿಸಬೇಕೆಂದು ಮಹಿಳೆ ಕೋರ್ಟ್ ಗೆ ಮನವಿ ಮಾಡಿದ್ದರು. ಈಗ ಈ ಮಹಿಳೆಗೆ 35 ವರ್ಷವಾಗಿದ್ದು ಈಗಾಗಲೇ ಒಂದು ಮಗುವಿದೆ, ತನ್ನ ದೇಹದ ಗರ್ಭಧಾರಣೆ ಶಕ್ತಿ ಕುಂದುವ ಮೊದಲೇ ತನ್ನ ಗಂಡನಿಂದ ಮತ್ತೊಂದು ಮಗು ಬೇಕೆಂದು ಕೌಟುಂಬಿಕ ನ್ಯಾಯಲಯದ ಮೊರೆ ಹೋಗಿದ್ದಾಳೆ.

ಹೆಂಡತಿ ಕೇಳುವುದೇನೆಂದರೆ ಆಕೆಯ ಋತು ಚಕ್ರ ನಿಲ್ಲುವುದಕ್ಕೂ ಮುನ್ನ ದೇಹ ಗರ್ಭದಾರಣೆಗೆ ಸಶಕ್ತವಾಗಿರುವ ಸಮಯದಲ್ಲಿ ದೈಹಿಕ ಸಂಬಂಧ ಹೊಂದಿ ಮಗು ಪಡೆಯಬೇಕು, ಒಂದು ವೇಳೆ ಇದು ಸಾಧ್ಯವಾಗದ ಸಂದರ್ಭದಲ್ಲಿ ಗಂಡನ ವೀರ್ಯವನ್ನು ಸಂಗ್ರಹಿಸಿ ಪ್ರನಾಳ ಶಿಶು ಪಡೆಯಬೇಕೆಂಬುದಾಗಿದೆ. ಇದಕ್ಕೆ ಈ ಮಹಿಳೆಯ ಪತಿ ಇದು ಕಾಲ್ಪನಿಕ ಸಂಗತಿ ಹಾಗೂ ಸಾಮಾಜಿಕ ನಿಯಮಗಳಿಗೆ ವಿರುದ್ಧವಾಗಿದೆ, ನನಗೆ ಅವಳ ಜೊತೆ ಜೀವನ ಬೇಡವೆಂದೇ ಡಿವೋರ್ಸ್ ಕೊಡಿಸಿ ಎಂದಾಗ, ಈಗ ನನ್ನಿಂದಲೇ ಮಗು ಏಕೆ ಎಂದು ಪ್ರಶ್ನೆಸಿದ್ದಾನೆ.

ಆದರೆ ಕೋರ್ಟ್ ಮಾತ್ರ, ಮಹಿಳೆಗೆ ಗರ್ಭ ಧರಿಸಲು ಹಕ್ಕಿದೆ, ಆದರೆ ಕೋರ್ಟ್‍ಗೆ ತನ್ನದೇ ಆದ ಮಿತಿಗಳಿವೆ. ಆದರೂ ಮಹಿಳೆಯ ಕೋರಿಕೆ ಈಡೇರಿಸಲು ಪ್ರಯತ್ನಿಸುತ್ತಿದ್ದು, ಗಂಡ-ಹೆಂಡತಿ ನಡುವೆ ಸಮಾಲೋಚನೆ ಸಭೆ ನಡೆಸಲು ತೀರ್ಮಾನಿಸಿದೆ, ಮುಂದೇನಾಗುತ್ತೋ ಕಾದು ನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top