ಸೆಪ್ಟೆಂಬರ್ 1ರಿಂದ ಎಟಿಎಂ ಕಾರ್ಡ್ ಮೇಲೆ ಹೊಸ ನಿಯಮ ಜಾರಿ..!

september 1 new bank rules

ಬ್ಯಾಂಕಿಂಗ್ ವ್ಯವಹಾರದಲ್ಲಿ ಎಟಿಎಂ ಒಂದು ಪ್ರಮುಖವಾದ ಅಂಶ, ಎಟಿಎಂ ಬಂದ ಮೇಲೆ ಕ್ಯಾಶ್ ವಿತ್ ಡ್ರಾ ಸಮಸ್ಯೆಗೆ ಒಂದು ಪರಿಹಾರ ಸಿಕ್ಕಂತ್ತಾಗಿತ್ತು, ಆದ್ರೆ ಎಟಿಎಂ ಮೂಲಕ ಹಣ ಕಳೆದುಕೊಂಡವರು ಅದೆಷ್ಟೋ ಜನರಿದ್ದಾರೆ, ನೀವೂ ಎಟಿಎಂನಲ್ಲಿ ಹಣ ಪಡೆದುಕೊಳ್ಳುವಾಗ ನಿಮ್ಮ ಪಿನ್‍ಕೋಡ್ ನಂಬರ್ ಕದ್ದು ಹಣ ಪಡೆದು ವಂಚನೆಗೆ ಒಳಗಾದ ಅದೆಷ್ಟೋ ಉದಾಹರಣೆಗಳಿವೆ, ಇನ್ನು ಮುಂದೆ ಹಾಗೇ ಆಗುವುದಿಲ್ಲ, ಸೆಪ್ಟೆಂಬರ್ ಒಂದರಿಂದ ನೀವು ಬಳಸುವ ಎಟಿಎಂ ಕಾರ್ಡ್‍ಗೆ ಹೊಸದೊಂದು ನಿಯಮ ಬರಲಿದೆ ಈ ಮೂಲಕ ನಿಮ್ಮ ಹಣಕ್ಕೆ ಸೇಪ್ಟಿ ಸಿಗಲಿದೆ ಅದೇನೆಂದರೆ ನೀವೂ ಎಟಿಎಂನಲ್ಲಿ 10 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡುವುದಾದರೆ ಇನ್ನು ಮುಂದೆ ರಿಜಿಸ್ಟರ್ ನಂಬರ್ ಗೆ ಒಂದು ಓಟಿಪಿ ಬರಲಿದೆ ಆ ಓಟಿಪಿ ನಂಬರ್ ಹಾಕಿದರೆ ಮಾತ್ರ ಹಣ ವಿತ್‍ಡ್ರಾ ಮಾಡಲು ಸಾಧ್ಯ ಇಲ್ಲವಾದರೆ ಆಗುವುದಿಲ್ಲ, ಈ ನಿಯಮವನ್ನು ಸದ್ಯ ಸೆಪ್ಟೆಂಬರ್ 1 ರಿಂದ ಕೆನರಾ ಬ್ಯಾಂಕ್ ಮೊದಲು ಪರಿಚಯಿಸಲಿದ್ದು, ನಂತರದ ದಿನಗಳಲ್ಲಿ ಎಲ್ಲಾ ಬ್ಯಾಂಕ್ ಎಟಿಎಂಗಳು ಈ ನಿಯಮವನ್ನು ಅನುಸರಿಸಲಿವೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top