ನನ್ನ ಅಂತ್ಯಕ್ರಿಯೆಗೆ ಹೋಗಬೇಕಾಗಿದೆ ನನಗೆ ಅರ್ಧ ದಿನ ರಜೆಕೊಡಿ..!

ನೀವೂ ಕೆಲಸ ಮಾಡುವ ಸಂಸ್ಥೆ ಅಥವಾ ನೀವೂ ಓದುತ್ತಿರುವ ಶಾಲೆಯಲ್ಲಿ ನೀವೂ ರಜೆ ಪಡೆಯಬೇಕಾದ್ರೆ ಯಾರಾದ್ರೂ ನಿಮ್ಮ ಅಜ್ಜ, ಅಜ್ಜಿ, ಚಿಕ್ಕಪ್ಪ, ಮಾವ ಹೀಗೆ ಯಾರನ್ನಾದರೂ ಸಾಯಿಸಿ ರಜ ತೆಗೆದುಕೊಳ್ಳೋದು ಕಾಮನ್ ಆದ್ರೆ ಇಲ್ಲಿ‌ ನಡೆದಿರೋ ಘಟನೆಯನ್ನು ನೋಡಿದ್ರೆ ನೀವೂ ಒಮ್ಮೆ ಶಾಕ್ ಆಗೋದು ಗ್ಯಾರಂಟಿ.

ಹೌದು ಕಾನ್ಪುರದ 9ನೇ ತರಗತಿ ಓದುತ್ತಿರೋ ವಿಧ್ಯಾರ್ಥಿ ತಾನು ಸತ್ತಿದ್ದೇನೆ ನನ್ನ ಅಂತ್ಯಕ್ರಿಯೆಗೆ ದಯವಿಟ್ಟು ಅರ್ಧದಿನ ರಜೆಕೊಡಿ‌ ಎಂದು ರಜೆ ಚೀಟಿ ಬರೆದು ರಜೆ ಮಂಜೂರು ಮಾಡಿಸಿಕೊಂಡ ಘಟನೆ ನಡೆದಿದೆ. ಸದ್ಯ ಈ ರಜೆ ಚೀಟಿ ಈಗ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ,

ಘಟನೆ ನಡೆದಿದ್ದಿಷ್ಟೇ 9ನೇ ತರಗತಿ ಓದುತ್ತಿದ್ದ ವಿಧ್ಯಾರ್ಥಿ ನಮ್ಮ ಅಜ್ಜಿ ಸತ್ತಿದ್ದಾರೆ ಅಂತ್ಯಕ್ರಿಯೆಗೆ ಹೋಗಬೇಕು ಅರ್ಧದಿನ ರಜೆಕೊಡಿ ಎಂದು ಕೇಳಿದಾಗ ತರಗತಿ‌ ಶಿಕ್ಷಕರು ಅರ್ಧದಿನ ಆದ್ದರಿಂದ ಪ್ರಿನ್ಸಿಪಲ್ ಬಳಿ ಕೇಳಿ ಪಡೆದುಕೊ ಅಂತ ಹೇಳಿದ್ದಾರೆ, ಆ ವಿಧ್ಯಾರ್ಥಿ ಪ್ರಿನ್ಸಿಪಲ್ ಬಳಿ ರಜೆ ಮಂಜುರಾತಿ ಮಾಡಿಸಿಕೊಂಡು ಬಂದಿದ್ದಾನೆ, ಆದ್ರೆ ಆತ ತನ್ನ ರಜೆ ಚೀಟಿಯಲ್ಲಿ ‘ನಾನು ಸತ್ತಿದ್ದೇನೆ ಅದಕ್ಕಾಗಿ‌ ನನ್ನ ಅಂತ್ಯಕ್ರಿಯೆಗೆ ಅರ್ಧದಿನ ರಜೆ ಕೊಡಿ’ ಎಂದು‌ ನಮೂದಿಸಿದ್ದಾನೆ ಆದರೆ ಇದ್ಯಾವುದನ್ನು ನೋಡದ ಪ್ರಿನ್ಸಿಪಲ್ ರಜೆ ಮಂಜೂರು ಮಾಡಿ ಕಳುಹಿಸಿದ್ದಾರೆ. ಮರುದಿನ ಶಾಲೆಗೆ ಬಂದ ಆ ವಿಧ್ಯಾರ್ಥಿ ನಕಲು ರಜೆ ಚೀಟಿಯನ್ನು ಹಿಡಿದು ತಾನು ರಜೆ ಪಡೆಯಲು ಬರೆದಿದ್ದ ವಿಷಯವನ್ನು ಹೇಳಿ ಸ್ನೇಹಿತರ ಬಳಿ ಬಡಾಯಿಕೊಂಚಿಕೊಂಡಿದ್ದಾನೆ. ಇನ್ನು ಈ ವಿಚಾರವಾಗಿ‌ ಶಾಲಾ ಆಡಳಿತ ಮಂಡಳಿ ಆತ ಪ್ರಿನ್ಸಿಪಲ್ ಬಳಿ ರಜೆ ಕೇಳುವಾಗ ಅಜ್ಜಿ ಸತ್ತಿರುವಿದಾಗಿ‌ ರಜೆ ಕೇಳಿದ್ದಾನೆ ಆದ್ರೆ ರಜೆ ಚೀಟಿಯಲ್ಲಿ ಹೀಗೆ ಬರೆದಿರುವುದ ಪ್ರಿನ್ಸಿಪಲ್ ಗಮನಿಸಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸದ್ಯ ರಜೆ ಅರ್ಜಿ ಎಲ್ಲಾ ಕಡೆ ವೈರಲ್ ಆಗಿದ್ದು‌ ಏನ್ ಗುರು ರಜೆಗಾಗಿ ಈ‌ ರೀತಿ ಮಾಡ್ತಾರಾ ಅಂತ ಹೇಳ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top