ಬನ್ನಿ ಕೈ ಜೋಡಿಸೋಣ ಭೂಮಿತಾಯಿಯ ಸೇವೆ ಮಾಡೋಣ.

ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ

ಕೆಲವು ದಿನಗಳ ಹಿಂದೆ ಪ್ರವಾಸಕ್ಕೆಂದು ಕಾಫಿನಾಡು ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಗೆ ಭೇಟಿ ನೀಡಿದ್ದೆ. ಕಣ್ಣು ಹಾಯಿಸದಲ್ಲೆಲ್ಲಾ ಹಚ್ಚಹಸಿರಿನ ಸೀರೆಯನ್ನುಟ್ಟು ಕಂಗೊಳಿಸುತ್ತಿರುವ ಭೂಮಿ ತಾಯಿಯ ನೋಡಿ ಆನಂದದ ಜೊತೆಗೆ ಬೇಸರವೂ ಆಯಿತು.

malenadu rakshisi

ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಪರ್ವತಗಳೆಂದು ಕರೆಯುತ್ತಾರೆ. ಇದು ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನುದ್ದಕ್ಕೂ ಹಬ್ಬಿವೆ. ಇದರ ಉದ್ದ ಸುಮಾರು ೧೬೦೦ ಕಿ.ಮೀ. ಇವು ಮಹರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸುಮಾರು 6000 ಚ.ಕಿ.ಮೀ ಹಬ್ಬಿವೆ. ಈ ಶ್ರೇಣಿಯ ಅರ್ಧ ಭಾಗದಷ್ಟು ಪ್ರದೇಶ ನಮ್ಮ ರಾಜ್ಯದಲ್ಲೇ ಕಂಡು ಬರುತ್ತದೆ. ಅತಿ ಸಂಕೀರ್ಣ ನದಿ ವ್ಯವಸ್ಥೆಯ ಮೂಲವಾಗಿರುವ ಈ ಘಟ್ಟಗಳ ಸರಾಸರಿ ಎತ್ತರ 1200 ಕಿ.ಮೀ.

ಈ ಪಶ್ಚಿಮ ಘಟ್ಟಗಳು ವಿಶ್ವದ ಅತ್ಯಂತ ಸಕ್ರಿಯ ಜೀವ ವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ಉಭಯವಾಸಿಗಳ ನೆಲೆಯಾಗಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.
Read : KGF-2 ಸಿನಿಮಾದಲ್ಲಿ ನೀವೂ ಆ್ಯಕ್ಟ್ ಮಾಡ್ಬೇಕಾ ಇಲ್ಲಿದೆ ಅವಕಾಶ..!

western ghats
pic credit : manjunath bhat

ಇಂತಹ ಅಮೂಲ್ಯ ಪ್ರಕೃತಿಯನ್ನು ಮಾನವನು ತನ್ನ ಲಾಭಕ್ಕೋಸ್ಕರ ನಿರಂತರವಾಗಿ ಶೋಷಿಸುತ್ತಿದ್ದಾನೆ. ಇದು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಎಗ್ಗಿಲ್ಲದೇ ಈ ಘಟ್ಟಗಳ ಮೇಲೆ ಮಾನವ ಕ್ರೌರ್ಯ ಎಸಗುತಿದ್ದಾನೆ. ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಬೆಟ್ಟಕ್ಕೆ ಹೋಗುವಾಗ ಕಂಡುಬರುವ ಕಾಂಕ್ರೀಟ್ ರಸ್ತೆಗಳು ಭೂಮಿತಾಯಿಯ ಮೈಗೆ ಎಳೆದಿರುವ ಬರೆಗಳಂತೆ ಕಂಡುಬರುತ್ತವೆ. ಬೆಟ್ಟದ ಮೇಲೆ ಕಂಡಕಂಡಲ್ಲಿ ತಿಂದು ಬಿಸಾಕಿರುವ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ವಸ್ತುಗಳು ಪ್ರಕೃತಿಯ ಮೇಲಿನ ಶೋಷಣೆಗೆ ಸಾಕ್ಷಿಯಾಗಿವೆ. ಮನುಷ್ಯ ತನ್ನ ಮೋಜು ಮಸ್ತಿಗಾಗಿ ಆ ಹಸಿರು ಘಟ್ಟಗಳ ಮೇಲೆ ಮೂಡಿಸಿರುವ ಒಂದೊಂದು ಹೆಜ್ಜೆಗಳು ತನ್ನ ವಿನಾಶಕ್ಕೆ ತಾನೆ ಸಿದ್ಧಪಡಿಸಿಕೊಂಡಿರುವ ಶವಪೆಟ್ಟಿಗೆಗಳು. ಹಲವಾರು ಜನ ಪ್ರಕೃತಿ ಪ್ರಿಯರು ಪಶ್ಚಿಮ ಘಟ್ಟಗಳ ಮೇಲಿನ ಈ ನಿರಂತರ ಶೋಷಣೆಯ ವಿರುದ್ಧ ಧ್ವನಿ ಎತ್ತಿದರೂ ಅಲ್ಲಿನ ಜನಪ್ರತಿನಿಧಿಗಳ ಅಸಡ್ಡೆಯಿಂದ ದಿನದಿಂದ ದಿನಕ್ಕೆ ಅಲ್ಲಿನ ಪರಿಸರ ಹಾಳಾಗುತ್ತಿದೆ.
Read : ಶ್ರೀಲಂಕಾ ಬಾಂಬ್ ದಾಳಿ ಕರ್ನಾಟಕದ 5 ಜನ ಸಾವು 9 ಜನ ಮಿಸ್ಸಿಂಗ್..!

ಎಪ್ರೀಲ್ 22 ವಿಶ್ವ ಭೂದಿನ. ನಮಗೆ ಜನ್ಮವನಿತ್ತ ಹೆತ್ತ ತಾಯಿಯನ್ನು ಪ್ರೀತಿಸಿ, ಪೋಷಿಸಿದಂತೆ ಜನ್ಮದಾತೆಯಷ್ಟೇ ಪೂಜ್ಯಳಾದ ಭೂಮಾತೆಯನ್ನು ಪ್ರೀತಿಸಿ ಅದನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡೋಣ. ಇದಕ್ಕಾಗಿ ಗಿಡಮರಗಳ ನೆಟ್ಟು,ಮನೆಯಲ್ಲಿ ಹಾಗೂ ಹೊರಸಂಚಾರ ಹೋದಾಗ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಯುವಜನತೆಯೇ ದೇಶದ ಆಸ್ತಿ ಹಾಗಾಗಿ ಪ್ರತಿಯೊಬ್ಬ ಯುವಕ-ಯುವತಿಯರು ಪ್ರಕೃತಿಯ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲಬೇಕು. ಬನ್ನಿ ಕೈ ಜೋಡಿಸೋಣ ಭೂಮಿತಾಯಿಯ ಸೇವೆ ಮಾಡೋಣ.

✍️ ಶೆಕ್ಷಾವಲಿ ಮಣಿಗಾರ್
ಶಿಕ್ಷಕರು,ಕೂಡ್ಲಿಗಿ
ಬಳ್ಳಾರಿ.

ನೀವೂ ಒಳ್ಳೆಯ ಕಥೆ ಬರೆಯಬೇಕೆಂದರೆ ನಮಗೆ ಈ-ಮೇಲ್ ಮಾಡಿ

ಅಥವಾ ವಾಟ್ಸ್ ಆಪ್ ಮಾಡಿ – 82963 01915
email maadi – [email protected]

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top