ಅಕ್ಟೋಬರ್ 18ಕ್ಕೆ ಸವರ್ಣ ದೀರ್ಘ ಸಂಧಿ ನಿಮ್ಮುಂದೆ…!

ಟ್ರೈಲರ್ ರಿಂದ ಸುದ್ದಿಯಾದ ಸವರ್ಣ ದೀರ್ಘ ಸಂಧಿ ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್ ಆಗಿ ಸಿನಿಪ್ರಿಯರಲ್ಲಿ ಸಿನಿಮಾ ಮೇಲೆ ವಿಶೇಷ ಕುತೂಹಲವನ್ನ ಹುಟ್ಟಿಸ್ತಿವೆ. ಅದ್ರಂತೆ, ಇದೀಗ ಕೊಳಲಾದೇ ನಾ ಹಾಡಿನ ವಿಡಿಯೋ ವರ್ಶನ್ ನ ಸಂಗೀತ ನಿರ್ದೇಶಕ ಮನೋಮೂರ್ತಿಯವರ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ಈ ಹಾಡಿದಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ತಿದೆ.

ಅಲ್ಲದೆ ಸವರ್ಣ ದೀರ್ಘ ಸಂಧಿ ಚಿತ್ರದ ಹಾಡುಗಳು ಟಿಕ್ ಟಾಕ್ ನಲ್ಲಿ ಮಿಲಿಯನ್ ಗಟ್ಟಲೇ ರೀಚ್ ಆಗ್ತಿರೋದು ಚಿತ್ರತಂಡಕ್ಕೆ ಸಂತಸ ತಂದಿದೆ.. ಅಂದ್ಹಾಗೆ ವಿಡಿಯೋ ವಿಡಿಯೋ ಹಾಡಿನ ಜೊತೆಗೆ ಸವರ್ಣ ದೀರ್ಘ ಸಂಧಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಹೌದು, ಈ ಹಿಂದೆ ಅಕ್ಟೋಬರ್ ಮೊದಲ ವಾರದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿವಿ ಅಂತ ಹೇಳಿದ್ದ ಚಿತ್ರತಂಡ, ಇದೀಗ ಅಕ್ಟೋಬರ್ ಮೂರನೇ ವಾರ ಅಂದ್ರೆ ಅಕ್ಟೋಬರ್ 18ಕ್ಕೆ ಪ್ರೇಕ್ಷಕರೆದುರಿಗೆ ಬರೋದಕ್ಕೆ ದಿನವನ್ನ ಫಿಕ್ಸ್ ಮಾಡಿಕೊಂಡಿದೆ.. ಸದ್ಯ ಪ್ರಚಾರದ ಕಾರ್ಯ ಶುರುಮಾಡಿರೋ ಚಿತ್ರತಂಡ, ಬರ್ತಿರುವಂತ ಪರಭಾಷಾ ದೊಡ್ಡ ಸಿನಿಮಾಗಳೆದುರು ಗಟ್ಟಿಯಾಗಿ ನಿಲ್ಲೋ ಪ್ಲಾನ್ ಮಾಡಿಕೊಳ್ತಿದೆ.

ಅಂದ್ಹಾಗೆ ಸವರ್ಣ ದೀರ್ಘ ಸಂಧಿ ಸಿನಿಮಾವನ್ನ ವೀರೇಂದ್ರ ಶೆಟ್ಟಿ ಡೈರೆಕ್ಟ್ ಮಾಡಿದ್ದು, ಚಿತ್ರದಲ್ಲಿ ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜರಾವ್ ಸೇರಿ ಪ್ರತಿಭಾವಂತ ತಾರಾಬಳಗವಿದೆ. ಮನೂಮೂರ್ತಿ ಸಂಗೀತದ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top