ಪರಭಾಷಾ ಬಿಗ್ ಚಿತ್ರಗಳಿಗೆ ಅಪ್ಪಟ ಕನ್ನಡ ಸಿನಿಮಾ ಸವಾಲ್ .?

savarna dheergha sandhi

ಪ್ರತಿ ವರ್ಷ ದಸರಾ ಸೀಸನ್ ಗೆ ಸಾಲು ಸಾಲು ದೊಡ್ಡ ಸಿನಿಮಾಗಳು ರಿಲೀಸ್ ಆಗೋದು ವಾಡಿಕೆ. ಅದ್ರಂತೆ, ಈ ವರ್ಷ ಕೂಡ ಅಕ್ಟೋಬರ್ ತಿಂಗಳಲ್ಲಿ, ಗಾಂಧಿ ಜಯಂತಿಯಿಂದ ಹಿಡಿದು ದಸರಾವರೆಗೂ ತುಂಬಾ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರೆದುರಿಗೆ ಬರೋದಕ್ಕೆ ಸನ್ನದ್ಧವಾಗಿವೆ.. ಈ ಪೈಕಿ ಬಹುಭಾಷೆಯಲ್ಲಿ ತೆರೆಗೆ ಸಿದ್ದವಾಗಿರೋ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಮೊದಲಿಗೆ ಬರಲಿದೆ. ಸೈರಾ ಜೊತೆಗೆ ಬಾಲಿವುಡ್ ನ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ವಾರ್ ಸಿನಿಮಾ ಕೂಡ ಅಕ್ಟೋಬರ್ 2ನೇ ತಾರೀಖು ಗಾಂಧಿ ಜಯಂತಿ ಪ್ರಯುಕ್ತ ವರ್ಲ್ಡ್ ವೈಡ್ ವಿವಿಧ ಭಾಷೆಯಲ್ಲಿ ಥಿಯೇಟರ್ ಗೆ ಬರ್ತಿದೆ.

ಇವರೆಡೂ ಕೂಡ ನೂರಾರು ಕೋಟಿ ವೆಚ್ಚದ ಬಹುತಾರಾಗಣದ ಬಹುಭಾಷೆಯ ಸಿನಿಮಾಗಳಾಗಿದ್ದು, ವಿಶ್ವದಾದ್ಯಂತ ಈ ಚಿತ್ರಗಳ ಮೇಲೆ ಅತಿದೊಡ್ಡ ನಿರೀಕ್ಷೆ ಇದೆ.. ಜೊತೆಗೆ ಈಗಾಗ್ಲೇ ಈ ಸಿನಿಮಾಗಳು ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲವನ್ನ ಹುಟ್ಟಿಸಿವೆ. ಇಂತಹ ಸಂದರ್ಭದಲ್ಲಿ, ಕನ್ನಡದ ವಿಶೇಷ ಸಿನಿಮಾವೊಂದು ಈ ದೊಡ್ಡ ಚಿತ್ರಗಳ ನಡುವೆ ನಾವು ಯಾರಿಗೇನು ಕಮ್ಮಿಯಿಲ್ಲ ಅಂತ ಧೈರ್ಯವಾಗಿ ಥಿಯೇಟರ್ ಗೆ ಬರೋದಕ್ಕೆ ಸಜ್ಜಾಗ್ತಿದೆ.

savarna dheerga sandhi kannada movie

ಹೌದು ಅಪ್ಪಟ ಕನ್ನಡ ಟೈಟಲ್ ನೊಂದಿಗೆ ಕನ್ನಡದ ಸೊಗಡಿನಲ್ಲಿ, ಕನ್ನಡತನ ತುಂಬಿರೋ ಮಸ್ತ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ವೊಂದು ಪ್ರೇಕ್ಷಕರೆದುರಿಗೆ ಬರೋದಕ್ಕೆ ಸಜ್ಜಾಗಿದೆ.. ಅದೇ ಸವರ್ಣ ದೀರ್ಘ ಸಂಧಿ. ಈಗಾಗ್ಲೇ ಟ್ರೈಲರ್ ನಿಂದ ಸಿನಿಪ್ರಿಯರ ಗಮನ ಸೆಳೆದಿರೋ ಈ ಸಿನಿಮಾದ ಹಾಡುಗಳು ಒಂದೊಂದಾಗಿ ರಿಲೀಸ್ ಆಗ್ತಿದ್ದು, ಪ್ರತಿ ಹಾಡು ಇಂಪ್ರೆಸ್ ಮಾಡ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top