100% ಕಾಮಿಡಿ 200% ಮಜಾ ಸಖತ್ತಾಗಿದೆ ಸವರ್ಣ ದೀರ್ಘ ಸಂಧಿ..!!!

savarna dheerga sandhi review

ದೀಪಾವಳಿ ಹಬ್ಬದ ಪ್ರಯುಕ್ತ ಈ ವಾರ ರಾಜ್ಯಾದಾದ್ಯಂತ ರಿಲೀಸ್ ಆಗಿರೋ ಕನ್ನಡದ ನಿರೀಕ್ಷಿತ ಚಿತ್ರ ಸವರ್ಣದೀರ್ಘ ಸಂಧಿ, ಸಾಕಷ್ಟು ವಿಚಾರಗಳಿಂದ ಸದ್ದು ಸುದ್ದಿ ಮಾಡಿದ್ದ ಈ ಚಿತ್ರವನ್ನ ಸಿನಿಪ್ರಿಯರು ಅಪ್ಪಿದ್ದಾರೆ.. ಒಪ್ಪಿದ್ದಾರೆ..ಚಪ್ಪಾಳೆ ತಟ್ಟಿದ್ದಾರೆ. ಯಾಕಂದ್ರೆ, ಕನ್ನಡ ಅನ್ನೋ ಮೂರು ಅಕ್ಷರದ ಪ್ರೀತಿ, ಸವರ್ಣದೀರ್ಘ ಸಂಧಿ ಅನ್ನೋ ವ್ಯಾಕರಣದ ಮಂತ್ರ ಅಂತಹ ಜಾದುವನ್ನ ಮಾಡಿದೆ..


ಸವರ್ಣ ದೀರ್ಘ ಸಂಧಿ ತುಳು ಚಿತ್ರರಂಗದ ಸೂಪರ್ ಹಿಟ್ ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶಿಸಿರೋ ಸಿನಿಮಾ.. ಹಾಗಂತ ಕಥೆಯೇನೂ ತುಂಬಾ ಕ್ಲಿಷ್ಟಕರ ಕಥೆಯೇನಲ್ಲ.. ಸಾಧಾರಣ ಕಥೆಯನ್ನಿಟ್ಟುಕೊಂಡು, ಅದ್ಭುತ ಸಿನಿಮಾ ವ್ಯಾಕರಣದಲ್ಲಿ, ಹಾಸ್ಯಗವನದ ರೂಪದಲ್ಲಿ, ರಮಿಸೋ ಕವಿತೆಯ ರೂಪದಲ್ಲಿ, ನಲಿಸೋ ಸಾಹಿತ್ಯದ ಚಂದದಲ್ಲಿ, ಈ ತಲೆಮಾರಿಗೆ ಭಾಷೆಯ ಅರಿವು ಮೂಡಿಸೋ, ಪಾಸಿಟೀವ್ ದರ್ಪದಲ್ಲಿ ಸಮಾಜಿಕ ಕಳಕಳಿಯನ್ನ ಬಂಬಿಸೋ ಒಂದು ವೀಶಿಷ್ಠ ಪ್ರಯತ್ನ ಇದಾಗಿದೆ..
ಈ ಚಿತ್ರದಲ್ಲಿ ಬಹುಮುಖವಾಗಿ ನಿರ್ದೇಶಕ, ನಟ, ವೀರೇಂದ್ರ ಶೆಟ್ಟಿ ಇಷ್ಟವಾಗ್ತಾರೆ.. ಇವ್ರ ಸಂಭಾಷಣೆ ನಿರೂಪಣೆ ನಟನೆ ಬೊಂಬಾಟ್. ನಾಯಕಿ ಕೃಷ್ಣ ಮೊದಲ ಸಿನಿಮಾದಲ್ಲೇ ನಮ್ಮುಡುಗಿ ಅನ್ನಿಸೋವಷ್ಟು ಭಾವಾಭಿನಯವನ್ನ ಮಾಡಿದ್ದಾರೆ.. ಉಳಿದೆಲ್ಲಾ ಪಾತ್ರಗಳೂ ಇಷ್ಟವಾಗ್ತಾವೆ.. ಚಿತ್ರಕ್ಕೆ ಲೋಕನಾಥ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನ ಗಮನ ಸೆಳೆಯುತ್ತೆ..

100% ಕಾಮಿಡಿ 200% ಮಜಾ  ಸಖತ್ತಾಗಿದೆ ಸವರ್ಣ ದೀರ್ಘ ಸಂಧಿ..!!!

ಮನೋಮೂರ್ತಿಯವರ ಸಂಗೀತ ಸವರ್ಣ ದೀರ್ಘ ಸಂಧಿ ಚಿತ್ರಕ್ಕೆ ಮುಕುಟ. ಹಾಡುಗಳೆಲ್ಲಾವೂ ನೆನಪಲ್ಲಿ ಉಳಿತಾವೆ.. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಟೆಕ್ನಿಕಲಿ ಈ ಸಿನಿಮಾ ತುಂಬಾ ಅದ್ಧೂರಿಯಾಗಿ ಮೂಡಿ ಬಂದಿದ್ದು, ಹಾಸ್ಯ ಪ್ರಧಾನವಾಗಿ , ಪ್ರೀತಿ ಪ್ರಧಾನವಾಗಿ, ಭಾಷೆ ಪ್ರಧಾನವಾಗಿ, ಎಲ್ಲಾ ಆಂಗಲ್ ನಿಂದ್ಲೂ ಸಿನಿಮಾ ನಗಿಸುತ್ತೆ, ಅಳಿಸುತ್ತೆ… ಪ್ರೀತಿ ತೋರಿಸುತ್ತೆ.. ಓವರ್ ಆಲ್ ಆಗಿ ಕಾಸ್ ಕೊಟ್ಟು ಥಿಯೇಟರಿಗೆ ಬೋರ ಪ್ರೇಕ್ಷಕರಿಗೆ ಮೋಸ ಮಾಡ್ದೇ ರಂಜಿಸುತ್ತೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top