ಸರ್ಕಾರದ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್..! 8 ಗ್ರಾಂ ಚಿನ್ನ ಜೊತೆಗೆ 15000

sarakaaradinda saamuhika maduve

ರಾಜ್ಯ ಸರ್ಕಾರದ ಅನೇಕ ಯೋಜನೆಗಳಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮವೂ ಸಹ ಒಂದು.. ಈಗ ಈ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಮದುವೆ ಡೇಟ್ ಕೂಡ ಫಿಕ್ಸ್ ಮಾಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮತ್ತು‌ ಯಾವುದೇ ಜಾತಿ ಭೇದವಿಲ್ಲದೇ ಹಿಂದೂ‌ ಸಂಪ್ರದಾಯದಂತೆ ಸಾಮೂಹಿಕ‌ ಮದುವೆ ಮಾಡಿಸಲು ಮುಜರಾಯಿ ಇಲಾಖೆ ಈ ಹೊಸ ಯೋಜನೆಗೆ ನಿರ್ಧಾರ ಕೈಗೊಂಡಿದೆ‌. ಇದರ ಅನ್ವಯ ಮದುವೆ ಆಗ ಬಯಸುವವರು ಮೂವತ್ತು ದಿನಗಳ ಮುಂಚೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ಪೋಷಕರ ಸ್ವಯಂ ಘೋಷಿತ ಪತ್ರವನ್ನು ಸಲ್ಲಿಸಬೇಕು. ಇದನ್ನು ಪರಿಶೀಲನೆ ನಡೆಸಿದ ಬಳಿಕ ಮದುವೆ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.

uchita maduve

ಇನ್ನು ಈ ಸಾಮೂಹಿಕ ಮದುವೆಯಲ್ಲಿ 8 ಗ್ರಾಂ ಚಿನ್ನದ ತಾಳಿ ಸರ ಜೊತೆಗೆ 15000 ವಧುವುಗೆ ಸೀರೆಗಾಗಿ ಹಣವನ್ನು ನೀಡಲಾಗುವುದು, ವರನಿಗೆ 21ವರ್ಷ ಮತ್ತು ವಧುವಿಗೆ 18ವರ್ಷ ತುಂಬಿರಬೇಕು, ಅಲ್ಲದೇ ಪ್ರೀತಿಸಿದವರಾಗಿದ್ರೆ ಅವರ ಪೋಷಕರು ಒಪ್ಪಿಗೆ ಇರಬೇಕು. ಇನ್ನು ಈ ಸಾಮೂಹಿಕ‌ ಮದುವೆ ಕಾರ್ಯವನ್ನು ಏಪ್ರಿಲ್ 26 ಮತ್ತು ಮೇ 24ರಂದು ನಡೆಯಲಿದ್ದು ವರ್ಷದಲ್ಲಿ ಎರಡು‌ ದಿನ. ಸರ್ಕಾರದ ವತಿಯಿಂದ ಈ ಸಾಮೂಹಿಕ ವಿವಾಹ ನಡೆಯಲಿದೆ. ಈ ವಿವಾಹ ಕಾರ್ಯಕ್ರಮಕ್ಕಾಗಿ ದೇವಸ್ಥಾನಗಳನ್ನು ನಿಗದಿ ಮಾಡಿದ್ದು, ಮಲೆ ಮಹದೇಶ್ವರ, ನಂಜನಗೂಡು ನಂಜುಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಸೇರಿದಂತೆ ರಾಜ್ಯದ ನೂರಕ್ಕೂ ಹೆಚ್ಚು ದೇವಾಲಯಗಳ‌ನ್ನು ನಿಗದಿಮಾಡಲಾಗಿದೆ. ಈ ಮೂಲಕ ಹೊಸ ಯೋಜನೆಗೆ ರಾಜ್ಯಸರ್ಕಾರ ಅಣಿ ಇಡಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top