ಸಂಜು ಬರ್ತ್‍ಡೇಗೆ ಕೆಜಿಎಫ್ ಫಸ್ಟ್ ಲುಕ್..ಯಶ್ ಮನೆಗೆ ಬಂದ ಹೊಸ ಅತಿಥಿ..!

yash with sanjaya dutt kgf

ಸಿನಿಮಾ ರಂಗದಲ್ಲಿ ಒಂದಿಲ್ಲೊಂದು ವಿಚಾರಗಳು,ನ್ಯೂಸ್‍ಗಳು ಹೊರ ಬಿಳ್ತಾನೆ ಇರ್ತಾವೆ..ಅದೇ ರೀತಿ ಈಗ ಸ್ಯಾಂಡಲ್‍ವುಡ್ ಅಂಗಳದಿಂದ ಬಿಸಿಬಿಸಿ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಸಿನಿಮಾ, ಈ ಸಿನಿಮಾ ನೋಡಿದ ಮೇಲೆ ಸಿನಿರಸಿಕ ಕೆಜಿಎಫ್ ಚಾಪ್ಟರ್ 2ಗಾಗಿ ಕಾದುಕುಳಿತಿದ್ದಾರೆ. ಇನ್ನು ಅಕ್ಟೋಬರ್‍ನಲ್ಲಿ ಕೆಜಿಎಫ್ 2 ಚಿತ್ರ ರಿಲೀಸ್ ಮಾಡೇ ಮಾಡ್ತೀವಿ ಅಂತ ಚಿತ್ರತಂಡ ಹೇಳ್ತಾ ಇದ್ರು, ಲಾಕ್‍ಡೌನ್‍ನಿಂದಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋದ್ರು ಆಶ್ಚರ್ಯವಿಲ್ಲ. ಇನ್ನು ಚಾಪ್ಟರ್ 2 ಬಗ್ಗೆ ಹೆಚ್ಚು ಕುತೂಹಲ ಎಲ್ಲರಲ್ಲೂ ಮನೆಮಾಡಿದ್ದು.

ಚಿತ್ರತಂಡ ಮಾತ್ರ ಕೆಜಿಎಫ್ 2 ಬಗ್ಗೆ ಯಾಜವುದೇ ಮಾಹಿತಿಗಳನ್ನು ಮಾತ್ರ ಬಿಟ್ಟುಕೊಡ್ತಾ ಇಲ್ಲ. ಇತ್ತಿಚೆಗೆ ಯಶ್ ಅವರ ಒಂದು ಫೋಟೋ ಕೆಜಿಎಫ್ 2 ಚಿತ್ರದ ಲುಕ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಇನ್ನು ಆ ಫೋಟೋ ನೋಡಿದ ಯಶ್ ಅಭಿಮಾನಿಗಳು ಸಖತ್ ಫಿದಾ ಕೂಡ ಆಗಿದ್ರು, ಹೀಗಿರುವಾಗಲೇ ಈಗ ಕೆಜಿಎಫ್ ಚಿತ್ರತಂಡದಿಂದ ಹೊಸದೊಂದು ಸುದ್ದಿ ಹೊರ ಬರ್ತಾ ಇದೆ.

yash with sanjaya dutt kgf

ಅದೇನು ಅಂದ್ರೆ ಜುಲೈ 29ರಂದು ಸಂಜು ಬಾಬಾ ತಮ್ಮ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾ ಇದ್ದು, ಈ ನಿಟ್ಟಿನಲ್ಲಿ ಕೆಜಿಎಫ್‍ನಲ್ಲಿ ಅಧೀರನಾಗಿ ಮಿಂಚಲು ರೆಡಿಯಾಗಿರೋ ಸಂಜು ಬಾಬಾ ಅವರ ಫಸ್ಟ್ ಲುಕ್ ಅನ್ನು ಆದಿನ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಳ್ತಾ ಇದ್ಯಂತೆ, ಆ ಮೂಲಕ ಸಂಜು ಬಾಬಾ ಮತ್ತು ಅವರ ಅಭಿಮಾನಿಗಳಿ ಬರ್ತ್‍ಡೇ ಗಿಫ್ಟ್ ನೀಡಲು ಮುಂದಾಗಿದೆ ಚಿತ್ರತಂಡ.

ಇನ್ನು ಕಳೆದ ವರ್ಷ ಬಿಡುಗಡೆಯಾಗಿದ್ದ ಸಂಜುಬಾಬಾ ಅಧೀರನ ಫಸ್ಟ್ ಲುಕ್‍ನೋಡಿ ತಿಂಗಳು ಗಟ್ಟಲೆ ಫೋಟೋವನ್ನು ಟ್ರೆಂಡ್ ಮಾಡಿದ್ದ ಅಭಿಮಾನಿಗಳು , ಈ ಬಾರಿ ಬಿಡುಗಡೆಯಾಗುವ ಅಧೀರನ ಲುಕ್ ಯಾವ ಮಟ್ಟದಲ್ಲಿ ಟ್ರೆಂಡ್ ಮಾಡಲಿದ್ದಾರೆ ಕಾದುನೋಡ ಬೇಕು.

ಯಶ್ ಮನೆಗೆ ಮತ್ತೊಬ್ಬ ಅಥಿತಿಯ ಎಂಟ್ರಿ..!

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ, ಕಾರಣ ಯಶ್ ಮನೆಗೆ ಈಗ ಮತ್ತೊಬ್ಬ ಅಥಿತಿಯ ಎಂಟ್ರಿಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಈಗಾಗಲೇ ಎರಡು ಪುಟಾಣಿಗಳ ಆಗಮನದಿಂದ ಸಂತೋಷದಲ್ಲಿದ್ದು, ಹೀಗಿರುವಾಗಲೇ ಈಗ ಮನೆಗೆ ಇನ್ನೊಂದು ಮಗುವಿನ ಆಗಮನವಾಗಿದೆ, ಹಾಗಂತ ಈ ಬಾರಿ ಯಶ್ ಮತ್ತು ರಾಧಿಕಾಗೆ ಮಕ್ಕಳಾಗಿಲ್ಲ, ಯಶ್ ಅವರ ಪ್ರೀತಿಯ ಸಹೋದರಿ ನಂದಿನಿ ಎರಡನೇ ಬಾರಿ ತಾಯಿಯಾಗಿದ್ದು,ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಈಗ ಯಶ್ ಮನೆಯಲ್ಲಿ ಸಂಭ್ರಮವಿದ್ದು, ಯಶ್ ಈಗ ಮತ್ತೊಮ್ಮೆ ಮಾವ ಆದ ಖುಷಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top