ಅಭಿಮಾನಿಗಳಿಗೆ ಸಿಹಿಸುದ್ದಿ ಮೇಲೆ ಸುದ್ದಿ ನೀಡ್ತಿರೋ ಕೆಜಿಎಫ್ ಚಿತ್ರತಂಡ.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ, ಕೆಜಿಎಫ್ ಪಾರ್ಟ್ 1 ದಾಖಲೆ ಮೇಲೆ ದಾಖಲೆ ಬರೆದ ಹಿನ್ನೆಲೆ ಪಾರ್ಟ್ 2 ಮೇಲು ಬೆಟ್ಟದಷ್ಟು ನಿರೀಕ್ಷೆ ಇರೋದು ಖಂಡಿತ, ಇತ್ತಿಚೆಗೆ ಚಿತ್ರ ತಂಡ ಗುಡ್‍ನ್ಯೂಸ್ ಕೊಡುವುದಾಗಿ ಹೇಳಿ ಚಿತ್ರ ಪೋಸ್ಟರ್ ರಿಲೀಸ್ ಮಾಡಿ ಸಿಹಿ ಸುದ್ದಿ ನೀಡಿತ್ತು, ಅಲ್ಲದೇ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿಯೂ ಅಭಿಮಾನಿಗಳಿಗೆ ಹೇಳಿದೆ, ಕೆಜಿಎಫ್ 2 ಚಿತ್ರದ ಎರಡು ಕೈ ಮತ್ತು ಕೈನಲ್ಲಿ ಉಂಗುರ ಇರುವ ಪೋಸ್ಟರ್ ರಿಲೀಸ್ ಮಾಡಿ ಮತ್ತೊಂದು ಬಿಗ್ ನ್ಯೂಸ್‍ಗೆ ಕಾಯುವಂತೆ ಅಭಿಮಾನಿಗಳಿ ತಿಳಿಸಿದೆ.

sanjay dutt in kgf2

ಜುಲೈ 29ರಂದು ಚಿತ್ರದ ಪ್ರಮುಖ ಪಾತ್ರಧಾರಿ ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದೆ, ಇನ್ನು ಕೆಜಿಎಫ್ 1ರಲ್ಲಿ ಅಧೀರನ ಪಾತ್ರವೇ ಪ್ರಮುಖ ಜೀವಾಳವಾಗಿದ್ದು, 29ರಂದು ಆ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ, ಒಂದು ಮೂಲಗಳ ಪ್ರಕಾರ ಅಧೀರನ ಪಾತ್ರಕ್ಕೆ ಸಂಜಯ್ ದತ್ ಆಯ್ಕೆಯಾಗಿದ್ದಾರೆ ಅನ್ನೋ ಮಾತುಗಳಿವೆ, ಅಲ್ಲದೇ ಜುಲೈ 29ರಂದು ಸಂಜಯ್ ದತ್ ಹುಟ್ಟುಹಬ್ಬವಿದ್ದು ಅಂದು ಅಧೀರನ ಪೋಸ್ಟರ್ ರಿಲೀಸ್ ಮಾಡಿ ಸಂಜು ಬಾಬಾಗೆ ಹುಟ್ಟುಹಬ್ಬದ ಗಿಫ್ಟ್ ಜೊತೆಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡೋ ಪ್ಲ್ಯಾನ್‍ನಲ್ಲಿದೆ ಕೆಜಿಎಫ್ ಚಿತ್ರ ತಂಡ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top