ತಮ್ಮ ಹುಚ್ಚು ಅಭಿಮಾನಿಗಳಿಗೆ ಸ್ವಲ್ಪ ಬುದ್ಧಿ ಹೇಳಿ ಯಶ್‌..! ನಟಿ ಸಂಗೀತಾ ಭಟ್‌ ಪ್ರಶ್ನೆ..!

sangeetha bhat on yash fans

ರಾಕಿಂಗ್‌ ಸ್ಟಾರ್‌ ಯಶ್‌ಗೆ ನಿಮ್ಮ ಅಭಿಮಾನಿಗಳಿಗೆ ಸ್ವಲ್ಪ ಬುದ್ಧಿ ಹೇಳಿ ಅಂತ ನಟಿ ಸಂಗೀತಾ ಭಟ್‌ ಹೇಳಿದ್ದಾರೆ, ಇತ್ತೀಚೆಗೆ ಯಶ್‌ ಅಭಿಮಾನಿಗಳು ಅಂತ ಹೇಳಿಕೊಂಡು ನಟಿ ಸಂಗೀತಾ ಭಟ್‌ ಮತ್ತು ಅಕೆಯ ಪತಿ ಸುದರ್ಶನ್‌ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ಮತ್ತು ಆಶ್ಲೀಲವಾಗಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ, ಇದಕ್ಕೆಲ್ಲಾ ಕಾರಣ ಸಂಗೀತಾ ಭಟ್‌ ಪತಿ ಸುದರ್ಶನ್‌ ಒಬ್ಬ ಹವ್ಯಾಸಿ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಆಗಿದ್ದು ಎರಡು ವರ್ಷಗಳ ಹಿಂದೆ ಒಂದು ಶೋನಲ್ಲಿ ಯಶ್‌ ʻಬಿಲ್ಡಪ್‌ ಡೈಲಾಗ್‌ʼ ಹೇಳ್ತಾರೆ ಅಂತ ಕಾಲೆಳೆದಿದ್ದ ವಿಡಿಯೋ ಈಗ ವೈರಲ್‌ ಆಗಿತ್ತು, ಆ ವಿಡಿಯೋ ನೋಡಿದ ಯಶ್‌ ಅಭಿಮಾನಿಗಳು ಸಿಟ್ಟಾಗಿದ್ದು ಯಶ್‌ ಅಭಿಮಾನಿಗಳು, ಸುದರ್ಶನ್‌ ಮತ್ತು ಸಂಗೀತಾ ಭಟ್‌ ಬಗ್ಗೆ ಅವಹೇಳನಕಾರಿ ಮತ್ತು ಅಶ್ಲೀಲವಾಗಿ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಈ ವಿಚಾರವಾಗಿ ಇತ್ತೀಚೆಗೆ ಸುದರ್ಶನ್‌ ಕೂಡ ಬೇಸರ ವ್ಯಕ್ತಪಡಿಸಿದ್ರು, ಈಗ ಸುದರ್ಶನ್‌ ಮತ್ತು ತನ್ನ ಬಗ್ಗೆ ಅವಹೇಳನ ಮತ್ತು ಅಶ್ಲೀಲ ಪದಗಳನ್ನು ಬಳಸುತ್ತಿರುವುದನ್ನು ಕಂಡ ನಟಿ ಸಂಗೀತಾ ಭಟ್‌ ಯಶ್‌ ಅವರಿಗೆ ಪ್ರಶ್ನೇ ಹಾಕಿದ್ದಾರೆ. ತಮ್ಮ ಬಗ್ಗೆ ಅಶ್ಲೀಲವಾಗಿ ಮೆಸೇಜ್‌ಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸಿಸುತ್ತಿರುವ ಯಶ್‌ ಅಭಿಮಾನಿಗಳ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಸಂಗೀತಾ ಭಟ್‌ ನೇರವಾಗಿ ಯಶ್‌ಗೆ ದೂರು ನೀಡಿದ್ದಾರೆ. ಹೆಣ್ಣಿನ ಬಗ್ಗೆ ಅಶ್ಲೀಲವಾಗಿ ಮೆಸೇಜ್‌ ಮಾಡುವುದು ಎಷ್ಟು ಸರಿ ಎಂದು ಯಶ್‌ಗೆ ಪ್ರಶ್ನೆ ಹಾಕಿದ್ದಾರೆ. ʻಇನ್ಸ್ಟಾಗ್ರಾಂನಲ್ಲಿ ಸಂಗೀತಾ ಭಟ್‌ ʻ ಯಶ್‌ ಅವರು ತಮ್ಮನ್ನು ಹುಚ್ಚಾಗಿ ಪ್ರೀತಿಸುವ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕುʼ ಅಂತ ಪೋಸ್ಟ್‌ ಮಾಡಿ ಇದನ್ನು ಯಶ್‌ ಮತ್ತು ರಾಧಿಕಾ ಪಂಡಿತ್‌ ಇಬ್ಬರಿಗೂ ಟ್ಯಾಗ್‌ ಮಾಡಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ನಟಿ ಸಂಗೀತಾ ಭಟ್‌. ಈ ವಿಚಾರವಾಗಿ ನಾನು ಹೆಚ್ಚಾಗಿ ತಲೆ ಕಡೆಸಿಕೊಂಡಿರಲಿಲ್ಲ ಆದ್ರೆ ಇತ್ತಿಚೆಗೆ ಇದು ಮಿತಿಮೀರಿ ಬೆಳೆಯುತ್ತಿದೆ, ಈ ಪೋಸ್ಟ್‌ಗಳೆ ನಿಮಗೆ ಎಲ್ಲಾ ಹೇಳುತ್ತದೆ , ಇದನ್ನು ನೋಡಿ ಯಶ್‌ ಅವರು ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳುತ್ತಾರೋ ಅಥವಾ ಸುಮ್ಮನಿರುತ್ತಾರೋ ನನಗೆ ಗೊತ್ತಿಲ್ಲ, ಈ ಬಗ್ಗೆ ಅವರೇ ಯೋಚಿಸಲಿ ಅಂತಾ ನಟಿ ಸಂಗೀತಾ ಭಟ್‌ ಬರೆದುಕೊಂಡಿದ್ದಾರೆ.

**ಬಹಿರಂಗ ಪತ್ರ**ನಮಸ್ಕಾರ ರಾಕಿಂಗ್ ಸ್ಟಾರ್ ಯಶ್ ಬಾಸ್ ಅಭಿಮಾನಿ ಗೆಳೆಯರೆಲ್ಲಾರಿಗೂ… ಕಳೆದೆರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ…

Posted by Worldwide Yash Fans on Thursday, 24 October 2019

ಇನ್ನು ಇದೇ ವೇಳೆ ಯಶ್‌ ಅಭಿಮಾನಿ ಬಳಗ ಕೂಡ ಬಹಿರಂಗವಾಗಿ ಪತ್ರ ಬರೆದಿದ್ದು, ನಾವು ಯಶ್‌ ಬಾಸ್‌ ಬಗ್ಗೆ ಅಪಹಾಸ್ಯ ಮಾಡಿವುದನ್ನು ಖಂಡಿಸೋಣ ಆದ್ರೆ ಒಬ್ಬ ಹೆಣ್ಣು ಮಗಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸುವುದು ಸರಿಯಲ್ಲಾ ಅಂತ ಮನವಿಯನ್ನು ಸಹ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top