ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಬಳಸುವವರು ಯಾರು ಇಲ್ಲ -ರಾಕ್‍ಲೈನ್

ಸ್ಯಾಂಡಲ್‍ವುಡ್‍ನಲ್ಲಿ ಬಿಸಿಬಿಸಿ ಚರ್ಚೆ ಅಂದ್ರೆ ಅದು ಡ್ರಗ್ಸ್ ವಿಚಾರವಾಗಿ, ಸ್ಯಾಂಡಲ್‍ವುಡ್‍ನಲ್ಲಿ ನಟ ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ವಿ ಅಂತ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು, ಇದಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ನನಗೆ ಗೊತ್ತಿರುವ ಹಾಗೆ ಅಂತವರು ಯಾರು ಇಲ್ಲ. ಡ್ರಗ್ಸ್ ಬೇಕು ಅನ್ನುವವರು ಯಾರು ಇಲ್ಲ,ಬೇರೆ ಚಿತ್ರರಂಗದಲ್ಲಿ ಡ್ರಗ್ಸ್ ಯೂಸ್ ಮಾಡುತ್ತಾರೆ ಅನ್ನೋ ಸುದ್ದಿ ಆಗಿದೆ. ಆದ್ರೆ ನಮ್ಮ ಚಿತ್ರರಂಗದಲ್ಲಿ ಯಾರು ಇಲ್ಲ ಎಂದು ಹೇಳಿದ್ದಾರೆ.

ಇಂದು ಸುಮಲತಾ ಹುಟ್ಟುಹಬ್ಬದ ಹಿನ್ನೆಲೆ ಅಂಬಿ ಸಮಾಧಿಗೆ ಸುಮಲತಾ ಮತ್ತು ರಾಕ್‍ಲೈನ್ ವೆಂಕಟೇಶ್ ಭೇಟಿ ನೀಡಿದ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top