ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದ ಸ್ಯಾಂಡಲ್‍ವುಡ್ ಯುವರಾಜ.!

sandalwood yuvaraja

ಸ್ಯಾಂಡಲ್‍ವುಡ್‍ನ ಯುವರಾಜ ನಿಖಿಲ್ ಕುಮಾರಸ್ವಾಮಿ, ಸದ್ಯ ಸಿಂಪಲ್ ಆಗಿ ಮದುವೆಯಾಗಿ, ತನ್ನ ಪತ್ನಿ ಜೊತೆ ಜಾಲಿಮೂಡ್‍ನಲ್ಲಿ ಇದ್ದಾರೆ. ಲಾಕ್‍ಡೌನ್,ಕೊರೋನಾ ಎಫೆಕ್ಟ್‍ನಿಂದಾಗಿ ಹೊರಗೆ ಎಲ್ಲೂ ಹೋಗದೆ ಇರೋ ನಿಖಿಲ್ ಮತ್ತು ಪತ್ನಿ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ನಿಖಿಲ್ ದಂಪತಿಯ ಕ್ಯೂಟ್ ಆದ ಫೋಟೋಗಳು ವೈರಲ್ ಕೂಡ ಆಗುತ್ತಿವೆ, ಆದ್ರೆ ನಿಖಿಲ್ ಮದುವೆ ಖುಷಿಯಲ್ಲಿ ಜಾಲಿ ಮೂಡ್‍ನಲ್ಲಿ ಇರದೇ, ಅದರ ಜೊತೆಯಲ್ಲಿ ಸಿನಿಮಾದ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿ ಈಗಾಗಲೇ ಅನೇಕ ಕಥೆಗಳನ್ನು ಕೇಳಿದ್ದು, ಅದರಲ್ಲಿ ಎರಡನ್ನು ಓಕೆ ಮಾಡಿ ಸಿನಿಮಾಗೆ ಸಹಿ ಕೂಡ ಹಾಕಿದ್ದಾರಂತೆ.

ಜಾಗ್ವಾರ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ, ನಿಖಿಲ್ ಸೀತಾರಾಮ ಕಲ್ಯಾಣ ನಡೆಸಿ, ಅಭಿಮನ್ಯು ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಿರುವಾಗಲೇ ಈಗ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಾಹಸಕ್ಕೆ ನಿಖಿಲ್ ಕುಮಾರಸ್ವಾಮಿ ಕೈ ಹಾಕುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಇನ್ನು ಮುಂದೆ ನಟನೆಯ ಜೊತೆಯಲ್ಲಿ ನಿರ್ಮಾಣದ ಜವಬ್ದಾರಿಯನ್ನು ಸಹ ಹೊರಲಿದ್ದಾರಂತೆ.ಹೌದು ಎನ್‍ಕೆ ಪ್ರೊಡಕ್ಷನ್ ಅನ್ನೋ ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಮುಂದಾಗಿದ್ದು, ಈ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಲಿದ್ದಾರಂತೆ.

ಈಗಾಗಲೇ ಈ ವಿಚಾರವಾಗಿ ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಎನ್‍ಕೆ ಪ್ರೊಡಕ್ಷನ್‍ನ ಮೊದಲ ಸಿನಿಮಾಗೆ ಹಂಬಲ್ ಪೊಲಿಟೀಶಿಯನ್ ನೋಗ್ರಾಜ್ ಸಿನಿಮಾ ಡೈರೆಕ್ಟರ್ ಸಾದ್ ಖಾಗ್‍ಗೆ ಚಾನ್ಸ್ ಸಿಕ್ಕಿದೆ.

ಇನ್ನು ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ `ಸಂಗೀತ್’ ಅಂತ ಟೈಟಲ್ ಕೂಡ ಫೈನಲ್ ಆಗಿ. ಆದ್ರೆ ಈ ಚಿತ್ರದಲ್ಲಿ ಯಾವೆಲ್ಲ ನಟರಿರ್ತಾ ಅನ್ನೋ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲಿ. ಈಗಾಗಲೇ ಚಿತ್ರ ತಯಾರಿಗಳನ್ನು ಮಾಡಿಕೊಂಡಿದ್ದು, ಅಕ್ಟೋಬರ್ ತಿಂಗಳಿನಿಂದ ಎಕ್‍ಕೆ ಪ್ರೊಡಕ್ಷನ್‍ನ ಮೊದಲ ಸಿನಿಮಾದ ಶೂಟಿಂಗ್ ಕೊಡಗು ಮತ್ತು ಮಡಿಕೇರಿ ಸುತ್ತಮುತ್ತ ನಡೆಯಲಿದೆಯಂತೆ.

ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರ ತಂದೆ ಹೆಚ್.ಡಿ ಕುಮಾರಸ್ವಾಮಿ ಚೆನ್ನಾಬಿಂಕ ಫಿಲ್ಸಂ ನಿರ್ಮಾಣ ಸಂಸ್ಥೆಯ ಮೂಲಕ ಕನ್ನಡಕ್ಕೆ ಮಾಸ್ಟರ್ ಫೀಸ್ ಸಿನಿಮಾಗಳನ್ನು ನೀಡಿದ್ದು, ಈಗ ನಿಖಿಲ್ ಕುಮಾರಸ್ವಾಮಿ ತಮ್ಮದೇ ಆದ ಎನ್‍ಕೆ ಎಂಟರ್‍ಟೈನ್ಮೆಂಟ್ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಸ್ಯಾಂಡಲ್‍ವುಡ್‍ಗೆ ಸದಭಿರುಚಿ ಸಿನಿಮಾಗಳನ್ನು ನೀಡಲು ಮುಂದಾಗುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top