ಕಾಫಿ ದೊರೆ ಸಿದ್ಧಾರ್ಥ್ ನಿಧನಕ್ಕೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಕಂಬನಿ..!

ಕಾಫಿ ದೊರೆ ಉದ್ಯಮಿ ಸಿದ್ಧಾರ್ಥ್ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ, ಸಿದ್ಧಾರ್ಥ್ ನಿಧನಕ್ಕೆ ಉದ್ಯಮಿಗಳು ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ, ಇನ್ನು ಸ್ಯಾಂಡಲ್‍ವುಡ್‍ನ ದಿಗ್ಗಜರು ಸಹ ಉದ್ಯಮಿ ಸಿದ್ಧಾರ್ಥ್ ಅವರ ನಿಧನಕ್ಕೆ ಕಂಬನಿಯನ್ನು ಮಿಡಿದಿದ್ದಾರೆ, ಪುನೀತ್ ರಾಜ್‍ಕುಮಾರ್ ಕಾಫಿ ಉದ್ಯಮದ ಮೂಲಕ ಹಲವು ಜನರಿಗೆ ಉದ್ಯೋಗ ಸೃಷ್ಟಿಸಿದವರು ಅಂತ ಹೇಳಿದ್ರೆ, ಗಣೇಶ್ ಕೂಡ ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ, ಇನ್ನು ಉಪೇಂದ್ರ ನಮ್ಮ ಕರುನಾಡಿನ ಕಾಫಿಯನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿದ ಒಡೆಯನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ ಅಂತ ಟ್ವೀಟ್ ಮಾಡಿದ್ರೆ, ನವರಸನಾಯಕ ಜಗ್ಗೇಶ್ ಸಿದ್ಧಾರ್ಥ ಅವರ ಸಹಾಯವನ್ನು ನೆನೆದು ಕಂಬನಿ ಮಿಡಿದಿದ್ದಾರೆ, ನಾನು 2004 ಚುನಾವೆಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿಬಂದು ಚುನಾವಣೆಗೆ ಸಹಾಯ ಮಾಡಿ ಹೋದರು.. ಅನೇಕಬಾರಿ ದೂರವಾಣಿ ಮೂಲಕ ನನ್ನ ವಿನಂತಿಗೆ ತನ್ನ ಅನೇಕ ಹಿಂಬಾಲಕರಿಗೆ ಕಾಫಿಡೇ ನಲ್ಲಿ ಕೆಲಸ ಕೊಟ್ಟವರು ಅಂತ ಟ್ವೀಟ್ ಮಾಡಿ ಸಿದ್ಧಾರ್ಥ್ ಅವರನ್ನು ನೆನಸಿಕೊಂಡಿದ್ದಾರೆ. ಇನ್ನು ಸುಮಲತಾ ಮತ್ತು ರಾಗಿಣಿ ದ್ವಿವೇದಿ ಕೂಡ ತಮ್ಮ ಟ್ವೀಟರ್ ಮೂಲಕ ಸಿದ್ಧಾರ್ಥ್ ಅವರ ಕಂಬನಿ ಮಿಡಿದಿದ್ದಾರೆ. ಒಟ್ಟಿನಲ್ಲಿ ಕಾಫಿ ಲೋಕದಲ್ಲಿ ಹೊಸ ಆಯಾಮವನ್ನು ಬರೆದು 50000 ಕುಟುಂಬಗಳಿಗೆ ದಾರಿ ದೀಪವಾಗಿದ್ದ ಕಾಫಿ ದೊರೆ ಇಲ್ಲ ಎಂಬುದು ಕರುನಾಡಿಗೆ ತುಂಬಲಾರದ ನಷ್ಟವೇ ಸರಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top