ಸೂರಿ ಅಣ್ಣ Song, ಜನವರಿ 6ಕ್ಕೆ ಸಲಗ ಗಾನ ಬಜಾನ!

salaga suri anna song

ದುನಿಯಾ ವಿಜಯ್‌ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡ್ತಾ ಇರೋ ಸಿನಿಮಾ ʻಸಲಗʼ ಈಗಾಗಲೇ ಚಿತ್ರದ ಪೋಸ್ಟರ್‌ ಮತ್ತು ಮೇಕಿಂಗ್‌ ವಿಡಿಯೋ ಮೂಲಕ ಸಖತ್‌ ಸೌಂಡ್‌ ಮಾಡ್ತಾ ಇದ್ದು, ಚಿತ್ರದ ಶೂಟಿಂಗ್‌ ಮುಗಿಸಿ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.. ಇದರ ಜೊತೆಗೆ ಈಗ ಸಲಗ ಚಿತ್ರತಂಡ ತಮ್ಮ ಅಭಿಮಾನಿಗಳಿಗೆ ಹೊಸದೊಂದು ಸುದ್ದಿಯನ್ನು ನೀಡಿದೆ. ಹೌದು ಸಲಗ ಚಿತ್ರದ ಗಾನಬಜಾನ ಇದೇ ಜನವರಿ 6ರಿಂದ ಶುರುವಾಗಲಿದೆ. ನವೀನ್‌ ಸಜ್ಜು ಮತ್ತು ಚರಣ್‌ರಾಜ್‌ ಸಂಗೀತದಲ್ಲಿ ʻಸಲಗ ʼ ಚಿತ್ರದ ಹಾಡುಗಳು ಮೂಡಿ ಬರ್ತಾ ಇದ್ದು. ಸದ್ಯ ಚಿತ್ರದ ಒಂದು ಹಾಡನ್ನು 6ನೇ ತಾರೀಖು ರಿಲೀಸ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ʻಸೂರಿ ಅಣ್ಣಾʼ ಅನ್ನೋ ಹಾಡನ್ನು ಚಿತ್ರತಂಡ ಮೊದಲು ರಿಲೀಸ್‌ ಮಾಡೋ ಪ್ಲಾನ್‌ ಮಾಡಿಕೊಂಡಿದ್ದು ಅದಕ್ಕಾಗಿ ಈಗಾಗಲೇ ಸಖತ್‌ ಆಗಿ ಪ್ಲಾನ್‌ ಮಾಡಿಕೊಂಡಿದ್ದಾರೆ.

ಚಿತ್ರತಂಡ ಈಗಾಗಲೇ ಚಿತ್ರದ ಹಾಡಿನ ಪ್ರಮೋಷನ್‌ ವಿಡಿಯೋ ಮಾಡಿದ್ದು ಇದರಲ್ಲಿ ಟಗರು ಖ್ಯಾತಿಯ ಆಂಟೋನಿ ದಾಸ್‌ ಹಾಡು ಹೇಳಿ ಡ್ಯಾನ್ಸ್‌ ಮಾಡಿರೋದನ್ನು ರಿಲೀಸ್‌ ಮಾಡಿ ಪ್ರಮೋಷನ್‌ ಮಾಡ್ತಾ ಇದ್ದಾರೆ. ಸಲಗದ ಸೂರಿ ಅಣ್ಣಾ ಹಾಡಿಗೆ ಆಂಟೋನಿ ದಾಸ್‌ ಧ್ವನಿ ನೀಡಿದ್ದು. ಈ ಹಿಂದೆ ಟಗರು ಚಿತ್ರದ ಟೈಟಲ್‌ ಸಾಂಗ್‌ ಹಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ರು. ಟಗರು ಹಿಟ್‌ ರೀತಿಯಲ್ಲಿಯೇ ಈ ಹಾಡು ಕೂಡ ಹಿಟ್‌ ಆಗಲಿದೆ ಅನ್ನೋ ನಂಬಿಕೆಯಲಿದ್ದಾರೆ.

ಇನ್ನು ಈ ಚಿತ್ರಕ್ಕೆ ದುನಿಯಾ ವಿಜಿ ಡೈರೆಕ್ಷನ್‌ ಹೇಳ್ತಾ ಇದ್ರೆ, ಚಿತ್ರಕ್ಕೆ ಕೆಪಿ ಶ್ರೀಕಾಂತ್‌ ಅವರು ಬಂಡವಾಳ ಹೂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top