ಸಲಗ ಸಿನಿಮಾ ಹಿಟ್ ಆಗಲು ಅಭಿಮಾನಿಗಳಿಂದ ವಿವಿಧೆಡೆ ಹರಕೆ ಪೂಜೆ..!

ದುನಿಯಾ ವಿಜಿ ಪ್ರಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಸಲಗ' ಈಗಾಗಲೇ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಚಿತ್ರದ ಮೇಕಿಂಗ್ ವಿಡಿಯೋ, ಟೀಸರ್ ಮತ್ತು ಸೂರಿ ಅಣ್ಣ ಹಾಡು ಸಖತ್ ವೈರಲ್ ಆಗಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕ್ಯೂರ್ಯಾಸಿಟಿ ಹುಟ್ಟಿಸಿದೆ, ದುನಿಯಾ ವಿಜಿ ಜೊತೆ ಡಾಲಿ ಮಂಕಿ ಸೀನ ಖ್ಯಾತಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿ ಅಬ್ಬರಿಸಲು ರೆಡಿಯಾಗ್ತಾ ಇದೆ. ಹೀಗಿರುವಾಗಲೇ ಈಗ ಚಿತ್ರ ದೊಡ್ಡ ಸಕ್ಸಸ್ ಕಾಣಲಿ ಎಂದು ದುನಿಯಾ ವಿಜಿ ಅಭಿಮಾನಿಗಳು ಮತ್ತು ಸಲಗ ಚಿತ್ರದ ಅಭಿಮಾನಿಗಳು ಹಲವೆಡೆ ದೇವಸ್ಥಾನದಲ್ಲಿ ಹರಕೆ ಕಟ್ಟಿಕೊಳ್ಳುವ ಮೂಲಕ ಪೂಜೆಗಳನ್ನು ಮಾಡಿಸುತ್ತಿದ್ದು, ಚಿತ್ರಕ್ಕೆ ಇನ್ನಷ್ಟು ಬಲವನ್ನು ತಂದುಕೊಟ್ಟಿದೆ.

ಸಲಗ ಸಿನಿಮಾ ಹಿಟ್ ಆಗಲು ಅಭಿಮಾನಿಗಳಿಂದ ವಿವಿಧೆಡೆ ಹರಕೆ ಪೂಜೆ..!

ಸಲಗ ಸಿನಿಮಾ ಹಿಟ್ ಆಗಲು ಅಭಿಮಾನಿಗಳಿಂದ ವಿವಿಧೆಡೆ ಹರಕೆ ಪೂಜೆ..!#Salaga #DuniyaVijay #Daali #Dhananjay

Posted by Kannada News on Thursday, 5 March 2020

ಅಷ್ಟೇ ಅಲ್ಲದೇ ಚಿತ್ರ ಶುರುವಾದಾಗಲಿಂದಲೂ ಸೌಂಡ್ ಮಾಡ್ತಾ ಇದ್ದು, ಚಿತ್ರದ ಸಕ್ಸಸ್‍ಗಾಗಿ ಅಭಿಮಾನಿಗಳು ಮಾಡುತ್ತಿರುವ ಈ ಒಂದು ವಿಭಿನ್ನ ಕಾರ್ಯಕ್ರಮ ಈಗಸಲಗ’ ಚಿತ್ರಕ್ಕೆ ಇನ್ನಷ್ಟು ಶಕ್ತಿಯನ್ನು ತಂದುಕೊಟ್ಟಿದೆ. ಸದ್ಯದರಲ್ಲೇ ತೆರೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿರೋ `ಸಲಗ’ ಚಿತ್ರಕ್ಕ ನಮ್ ಕಡೆಯಿಂದಲೂ ಆಲ್ ದಿ ಬೆಸ್ಟ್.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top