ರಾ ರೌಡಿಸಂನ ಮತ್ತೊಂದು ಮಾಸ್ ಅಧ್ಯಾಯ ಸಲಗ..!!! ಇದು ಮೇಕಿಂಗ್ ವಿಡಿಯೋ ಹೇಳಿದ ಕಥೆ..!!!

salaga making video

ಭಾರಿ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ ಸಲಗ ಮೇಕಿಂಗ್ ವಿಡಿಯೋ ನಿಗದಿಯಂತೆ ಇಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ನಾಯಕ, ನಿರ್ದೇಶಕ ದುನಿಯಾವಿಜಯ್ ಮನೆಯಂಗಳದಲ್ಲಿ, ಎ2 ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಲಗ ಮೇಕಿಂಗ್ ವಿಡಿಯೋ ಲೋಕಾರ್ಪಣೆಯಾಗಿದೆ. ಸಲಗ ಮೇಕಿಂಗ್ ವಿಡಿಯೋಗೆ ಅನ್ ಲೈನ್ ನಲ್ಲಿ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಸಲಗ ಮೇಕಿಂಗ್ ವಿಡಿಯೋಗೇನೇ ಕನ್ನಡ ಸಿನಿಪ್ರಿಯರಿಂದ ಶಿಳ್ಳೆ, ಚಪ್ಪಾಳೆಯ ಸುರಿ ಮಳೆ ಸುರಿತಿದೆ.
ಮಿಂಚು ಹರಿಸಿದ ಸಲಗ ಮೇಕಿಂಗ್ ವಿಡಿಯೋ


ಇದೊಂದು ಮೇಕಿಂಗ್ ವಿಡಿಯೋ ಸಲಗ ಸಿನಿಮಾದ ರೇಂಜ್ ಏನು ಅನ್ನೋದನ್ನ ಹೇಳ್ತಿದೆ. ಹಸಿದ ಸಿಂಹದಂತೆ ದುನಿಯಾ ವಿಜಯ್ ಮೈಕೆಡವಿಕೊಂಡು, ಇದು ನನ್ನ ಫ್ಲೇವರ್, ಇದು ನನ್ನ ಖದರ್, ಇದು ನನ್ನ ಸಿನಿಮಾ, ನನ್ನ ಕನ್ನಡ ಸಿನಿಪ್ರಿಯರು ನೋಡಬಯಸುವಂತಹ ಸಿನಿಮಾ. ಅಂತ ಗ್ರೌಂಡ್ ಗಿಳಿದು, ಹೋಂ ವರ್ಕ್ ಮಾಡಿ, 100 ಪರ್ಸೆಂಟ್ ಗೆಲ್ಲೋ ಸೂತ್ರದಲ್ಲಿ, ಮೆಗಾ ಹಿಟ್ ಕಾಂಬಿನೇಷನ್ ನಲ್ಲಿ ಮಾಡಿರೋ ಸಿನಿಮಾ ಸಲಗ. ಟೈಟಲ್ಲೇ ಹೇಳುವಂತೆ ಸಲಗ ಬಲದಲ್ಲಿ, ಛಲದಲ್ಲಿ ಮಾಡಿರುವಂತಹ ಸಿನಿಮಾ. ನಡೆದದ್ದೇ ದಾರಿ ಅನ್ನೋ ಟ್ಯಾಗ್ ಲೈನ್ ಇರೋ ಸಲಗ ಚಿತ್ರದ ಮೇಕಿಂಗ್ ಆ ಅಟಿಟ್ಯೂಡ್ ನ ತೋರಿಸ್ತಿದೆ.
ಮೆಗಾ ಕಾಂಬಿನೇಷನ್ ನ ದೊಡ್ಡ ಸಿನಿಮಾ ಸಲಗ

ಖಾಕಿ ತೊಟ್ಟ ಡಾಲಿ V/S ಮಚ್ಚಿಡಿದ ಬ್ಲಾಕ್ ಕೋಬ್ರಾ
ಟಗರು ಅಂತಹ ಮೆಗಾ ಹಿಟ್ ಸಿನಿಮಾ ಕೊಟ್ಟಂತಹ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ದುನಿಯಾ ವಿಜಯ್ ಮತ್ತು ಟಗರು ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದ ಡಾಲಿ ಧನಂಜಯ ಕಾಂಬಿನೇಷನ್ ನಲ್ಲಿ ತಯಾರಾಗ್ತಿರೋವಂತಹ ಸಿನಿಮಾ. ಟ್ರೆಂಡಿ ಡೈಲಾಗ್ಸ್ ಗೇ ಕೇರ್ ಆಫ್ ಅಡ್ರೆಸ್ ಆಗಿರೋ ಮಾಸ್ತಿ ಮಂಜು ಡೈಲಾಗ್ಸ್ ಸಲಗ ಚಿತ್ರಕ್ಕಿದ್ದು, ಶಿವಸೇನ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಪ್ರತಿಭಾವಂತ ನಟಿ ಸಂಜನಾ ಆನಂದ್ ಅಭಿನಯಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ್, ಯಶ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ಚಿತ್ರದಲ್ಲಿ ಟಗರು ಖ್ಯಾತಿಯ ಕಾಕ್ರೋಚ್ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ಖಾಕಿ ತೊಟ್ಟು ಮಿಂಚಿರೋದು ಸಲಗ ಹೈಲೈಟ್ ಗಳಲ್ಲೊಂದಾಗಿದೆ. ಮೇಕಿಂಗ್ ವಿಡಿಯೋ ಹುಟ್ಟಿಸಿದೆ ದೊಡ್ಡ ಭರವಸೆ, ಅತಿದೊಡ್ಡ ನಿರೀಕ್ಷೆ ಸಲಗ ಚಿತ್ರದ ಮೇಕಿಂಗ್ ವಿಡಿಯೋ ತುಂಬಾ ದೊಡ್ಡ ನಿರೀಕ್ಷೆಯ ಜೊತೆಗೆ ಭರವಸೆಯನ್ನ ಹುಟ್ಟಿಸಿದೆ.

ಸಲಗ ಮೇಕಿಂಗ್ ವಿಡಿಯೋದಲ್ಲಿರೋ ಫ್ಲೇವರ್ ಚಿತ್ರದ ಅಸಲಿಯತ್ತನ್ನ ತೋರಿಸ್ತಿದೆ. ಶ್ರೀಕಾಂತ್ ದುಬಾರಿಯಾಗಿ ಸಿನಿಮಾವನ್ನ ನಿರ್ಮಿಸಿರೋದು ಎದ್ಧು ಕಾಣ್ತಿದೆ. ದುನಿಯಾ ವಿಜಯ್ ಆಕ್ಟರ್ ಆಗಿ ಡೈರೆಕ್ಟರ್ ಆಗಿ ಡಬಲ್ ರೋಲ್ ಪ್ಲೇ ಮಾಡಿದ್ದು, ಮೇಕಿಂಗ್ ವಿಡಿಯೋನಲ್ಲಿ ವಿಜಯ್ ಸಿನಿಮಾ ಮೇಕಿಂಗ್ ಟೇಸ್ಟ್ ಹೈಲೈಟ್ ಆಗಿ ಕಾಣ್ತಿದೆ. ಮಾಸಿಗೆ ಮಾಸ್, ಕ್ಲಾಸಿಗೆ ಕ್ಲಾಸ್ ಆಗಿ ಸಿನಿಮಾ ಮೂಡಿ ಬಂದಿರುವಂತೆ ಕಾಣ್ತಿದೆ, ಎಸ್ಪೆಷಲ್ ಭೂಗತ ಲೋಕದ ಸೀನ್ಸ್, ಸ್ಟಂಟ್ಸ್ ಹೊಸ ಆಯಾಮದಲ್ಲಿ ಕಾಣ್ತಿದೆ. ಫ್ರೆಶ್ ಎನ್ನಿಸುವಂತೆ ಕಾಣ್ತಿದೆ.

ಅದ್ರಲ್ಲೂ ವಿಶೇಷವಾಗಿ ಈ ಚಿತ್ರದ ಕ್ಯಾರೆಕ್ಟರ್ ಗಳು ಇಂಟ್ರೆಸ್ಟಿಂಗ್ ಆಗಿ ಅಟ್ರ್ಯಾಕ್ಟ್ ಮಾಡ್ತಿವೆ. ಮೇಕಿಂಗ್ ವಿಡಿಯೋ ತುಂಬೆಲ್ಲಾ ಬರೀ ಮಾಸ್ ಎಲಿಮೆಂಟ್ಸ್ ತುಂಬಿದ್ದು, ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಕೊಡೋ ಸೂಚನೆ ಕೊಡ್ತಿದೆ ಸಲಗ ಟೀಮ್.

ಇದು ಟಗರು ಟೀಮ್ ನ ಮತ್ತೊಂದು ಮೆಗಾಹಿಟ್ ಪ್ರಯತ್ನ..!!!
ಚರಣ್ ರಾಜ್ ಸಂಗೀತದ ಝಲಕ್ ಮೇಕಿಂಗ್ ವಿಡಿಯೋದಲ್ಲೇ ಝೇಂಕರಿಸಿದೆ. ಈ ಚಿತ್ರದ ಕಥೆ, ಮೇಕಿಂಗ್, ಸ್ಟಾರ್ ಕಾಸ್ಟ್ ಜೊತೆಗೆ ಮ್ಯೂಸಿಕ್ ಕೂಡ ತುಂಬಾ ದೊಡ್ಡ ರೋಲ್ ಪ್ಲೇ ಮಾಡ್ತಿದೆಯಂತೆ. ನಾಯಕ, ನಿರ್ದೇಶಕ, ನಾಯಕಿ ಮತ್ತು ಕೆಲವರು ಬಿಟ್ಟರೇ, ಬಹುತೇಕ ಟಗರು ಟೀಮೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ಒಂದು ದೊಡ್ಡ ಹಿಟ್ ಕೊಟ್ಟಿರೋ ತಂಡ ಅದೇ ರಿಧಮ್ ನಲ್ಲಿ ಅದಕ್ಕಿಂತ ಒಂದು ಪಟ್ಟು ಜಾಸ್ತಿ ಎಫರ್ಟ್ ಹಾಕಿ, ಅದಕ್ಕಿಂದ ಬೆಸ್ಟ್ ಪಿಚ್ಚರ್ ಮಾಡೋ ಪ್ರಯತ್ನ ಮಾಡಿದೆ.

ಅದು ಮೇಕಿಂಗ್ ವಿಡಿಯೋದಲ್ಲಿ ಕಾಣ್ತಿದೆ ಕೂಡ. ಅಂದ್ಹಾಗೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋ ಮೂಲಕ ಅಧಿಕೃತವಾಗಿ ಪ್ರಚಾರ ಕಾರ್ಯ ಶುರುಮಾಡಿರೋ ಸಲಗ ಚಿತ್ರತಂಡ ಇಲ್ಲಿಂದ ಚಿತ್ರದ ಒಂದೊಂದೇ ವಿಶೇಷತೆಯನ್ನ, ಹಾಡುಗಳನ್ನ ರಿಲೀಸ್ ಮಾಡುತ್ತೆ ಪ್ರಚಾರವನ್ನ ಮುಂದುವರೆಸೋ ಧಾವಂತದಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top