ಇದೇ 18ಕ್ಕೆ ಬರಲಿದೆ ದುನಿಯಾ ವಿಜಿ, ಡಾಲಿ ಕಾಂಬಿನೇಷನ್ ನ ಸಲಗ ಮೇಕಿಂಗ್ ವಿಡಿಯೋ

ಮೊದಲ ಬಾರಿಗೆ ಸಲಗ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ದುನಿಯಾ ವಿಜಿ, ನಟನೆಯೊಂದಿಗೆ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸಿನಿಮಾ ಸಲಗ. ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ಈ ಚಿತ್ರದ ಮೇಕಿಂಗ್ ಗ್ಲಿಂಸ್ ಅಂದ್ರೆ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಡೇಟ್ ಫಿಕ್ಸ್ ಮಾಡಿದೆ. ಹೌದು ಇದೇ ತಿಂಗಳ 18ನೇ ತಾರೀಖು ಬೆಳಿಗ್ಗೆ 10 ಗಂಟೆ ಸಲಗ ಚಿತ್ರದ ಮೇಕಿಂಗ್ ವಿಡಿಯೋನ ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತಿದೆ. ದುನಿಯಾ ವಿಜಯ್, ಡಾಲಿ ಧನಂಜಯ ಸೇರಿ ಅಪ್ರತಿಮಾ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ಟಗರು ಕೆ.ಪಿ.ಶ್ರೀಕಾಂತ್ ರ ಅದ್ಧೂರಿ ನಿರ್ಮಾಣವಿದೆ. ವಿಶಿಷ್ಠ ಕಥಾಹಂದರ ರಾ ರೌಡಿಸಂ ಹಿನ್ನೆಲೆ ಇರೋ ಸಲಗ ಚಿತ್ರ ಔಟ್ ಅಂಡ್ ಔಟ್ ಮಾಸ್ ಎಂಟ್ರಟೈನರ್ ಅಂತಲೇ ಹೇಳಲಾಗ್ತಿದ್ದು, ಮೇಕಿಂಗ್ ವಿಡಿಯೋ ಮೂಲಕ ಚಿತ್ರದಲ್ಲಿನ ಒಂದಷ್ಚು ವಿಶೇಷತೆಗಳನ್ನ ಬಿಟ್ಟುಕೊಡೋ ಧಾವಂತದಲ್ಲಿದೆ ಚಿತ್ರತಂಡ. ಕ್ಲಾಸ್, ಮಾಸ್, ಕಾಮಿಡಿ, ಎಮೋಷನ್ ಎಲ್ಲಾ ಬಗೆಯ ಅಂಶಗಳ ಅನಾವರಣ ಆ ವಿಡಿಯೋದಲ್ಲಿರಲಿದೆಯಂತೆ.

ಎಲ್ಲದಕ್ಕಿಂತ ಹೆಚ್ಚಾಗಿ ದುನಿಯಾ ವಿಜಯ್ ಅವ್ರ ಚೊಚ್ಚಲ ನಿರ್ದೇಶನವಿರೋ ಈ ಚಿತ್ರದ ಮೇಕಿಂಗ್ ವಿಶೇಷ ಕಥೆಯೊಂದನ್ನ ಹೇಳಲಿದೆಯಂತೆ. ಚರಣ್ ರಾಜ್ ಸಂಗೀತ ಸಂಯೋಜನೆ ಇರೋ ಸಲಗ ಚಿತ್ರದ ಫಸ್ಟ್ ಸೌಂಡ್ ಝಲಕ್ ಮೇಕಿಂಗ್ ವಿಡಿಯೋದಲ್ಲಿದ್ದು, ಸಲಗ ಸೌಂಡೇ ಕನ್ನಡ ಸಿನಿಪ್ರಿಯರಿಗೆ ಹೊಸ ಕಿಕ್ ಕೊಡಲಿದೆಯಂತೆ. ಸಿಕ್ಕಾಪಟ್ಟೆ ಸ್ಪೆಷಲಾಟೀಸ್ ಜೊತೆಗೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಲು ಅಂಶಗಳಿರೋ ಸಲಗ ಚಿತ್ರದ ಮೇಕಿಂಗ್ ವಿಡಿಯೋ 18ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಸಲಗ ಚಿತ್ರದ ಇನ್ನಷ್ಟು ವಿಶೇಷ ವಿಚಾರಗಳನ್ನ ಚಿತ್ರತಂಡ ಆಮೇಲೆ ಹಂಚಿಕೊಳ್ಳಲಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top