ಕೊರೋನಾದಿಂದ ಆದಷ್ಟು ಬೇಗ ಮುಕ್ತಿ ಸಿಗಲಿ – ಸಲಗ ಚಿತ್ರದಿಂದ ವಿಶೇಷ ಪೂಜೆ

salaga release

ದುನಿಯಾ ವಿಜಿ ಮೊದಲ ಬಾರಿಗೆ ನಿರ್ದೇಶನ ಮಾಡಿ ನಾಯಕನಾಗಿ ನಟಿಸ್ತಾ ಇರೋ ಚಿತ್ರ ʻಸಲಗʼ ಸ್ಯಾಂಡಲ್ವುಡ್‌ನಲ್ಲಿ ಬಹುನಿರೀಕ್ಷೆಯ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಎಲ್ಲಿಲ್ಲದ ಕುತೂಹಲ ಮನೆಮಾಡಿದೆ. ಸದ್ಯ ಚಿತ್ರಪ್ರದರ್ಶನಕ್ಕೆ ಅನುಮತಿಗಾಗಿ ಕಾಯ್ತಾ ಇರೋ ಚಿತ್ರತಂಡ ಇಂದು ಕೊರೋನಾದಿಂದ ಆದಷ್ಟು ಬೇಗ ಮುಕ್ತಿ ಸಿಗಲಿ, ಎಲ್ಲಾ ಕಷ್ಟಗಳು ನಿವಾರಣೆಯಾಗಲಿ, ಚಲನಚಿತ್ರದ ಕೆಲಸಕಾರ್ಯಗಳು ಮತ್ತೆ ಎಂದಿನಂತೆ ಆಗುವಂತೆ ಆಗಲಿ, ಜನ ಜೀವನ ಪರಿಸ್ಥಿತಿ ಯಥಾಸ್ಥಿತಿಗೆ ಬರಲಿ ಎಂದು ಬಂಡಿಮಾಕಾಳಮ್ಮ ದೇವರಿಗೆ ಇಂದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಕೊರೋನಾದಿಂದ ಎಲ್ಲರಿಗೂ ಮುಕ್ತಿ ಸಿಗಲಿ ಎಂದು ಪೂಜೆ ಮಾಡಿಸಿದ್ದು, ಈ ವೇಳೆ ದುನಿಯಾ ವಿಜಿ ಮತ್ತು ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಸೇರಿದಂತೆ ಚಿತ್ರತಂಡದ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top