ನಾನೇಕೆ ‘ಬಜ್ಜಿ’ ಹುಡ್ಕೊಂಡು ಆರ್ ಟಿ ನಗರಕ್ಕೆ ಹೋಗ್ತೀನಿ ಗೊತ್ತಾ?

ಇದನ್ನು ಓದಿದ ಮೇಲೆ ಖಂಡಿತಾ ನೀವೂ ಹೋಗ್ತೀರಿ‌…!

ನನಗಿನ್ನೂ ನೆನಪಿದು…ಆಗತಾನೆ ಮಲೆನಾಡಿನ ನಮ್ಮೂರಿಂದ ಬೆಂಗಳೂರಿಗೆ ಬಂದಿದ್ದೆ‌‌.‌ ಎಂ.ಜಿ ರಸ್ತೆಯಲ್ಲಿ ನಮ್ಮ ಆಫೀಸ್. ಒಂದು ದಿನ ಇದ್ದಕ್ಕಿದ್ದಂತೆ ಮಳೆ ಶುರುವಾಯ್ತು. ಆಫೀಸ್ ಮುಗಿಸಿ ಮನೆಗೆ ಹೋಗುವ ಟೈಮದು.
ಆಫೀಸ್ ಕ್ಲೋಸ್ ಮಾಡಿ ಮಳೆ ನಿಲ್ಲಲಿ ಎಂದು ಕಾದು ಕಾದು ಚಳಿ ಹಿಡಿದಿತ್ತು…!
ನಾನು ಬಸ್ ಹಿಡಿದೇ ಮನೆ ಸೇರ ಬೇಕಿತ್ತು. ನನ್ನ ಬಳಿ ಬೈಕ್ ಇರಲಿಲ್ಲ.
ನಾನಿದ್ದುದು ಮಲ್ಲೇಶ್ವರಂನಲ್ಲಿ. ನನ್ನ ಗೆಳೆಯರೊಬ್ಬರು ಇದ್ದುದು ಆರ್ ಟಿ ನಗರದಲ್ಲಿ.‌ ಅವತ್ತು ಅವರ ಪತ್ನಿ ಊರಿಗೆ ಹೋಗಿದ್ದರು. ‘ಇನ್ನೇನು ಬಸ್ ಗೆ ಕಾದು ಮನೆಗೆ ಹೋಗ್ತೀಯ?’ ಸುಮ್ಮನೇ ನಮ್ ಮನೆಗೆ ಬಂದ್ ಬಿಡು. ಮನೆಯಲ್ಲಿ ಯಾರೂ ಇಲ್ಲ ಬೋರ್ ಹೊಡೆಯುತ್ತೆ…ಮಾತಾಡಣ ಬಾ ಅಂತ ನನ್ನ ಆ ಗೆಳೆಯ ಮನೆಗೆ ಆಹ್ವಾನವಿತ್ತರು‌ .‌
ಮಳೆ ಕಡಿಮೆಯಾಯಿತು. ಪಿರಿ ಪಿರಿ ಮಳೆಯಲ್ಲಿ ಬೈಕೇರಿ ಇಬ್ಬರೂ ಆರ್ ಟಿ ನಗರದತ್ತ ಹೊರಟೆವು. ದಾರಿಯಲ್ಲಿ ಮಳೆ ಜೋರಾದಾಗ ನಂಗೆ ಮೆಣಸಿನ ಕಾಯಿ ಬಜ್ಜಿ ತಿನ್ನೋ ಆಸೆಯಾಯ್ತು. ಎಲ್ಲಾದ್ರೂ ಬಜ್ಜಿ ಗಿಜ್ಜಿ ಹಾಕ್ತಾ ಇದ್ರೆ ನಿಲ್ಲಿಸಿ ಅಂದೆ.

ಸುತ್ತ ಮುತ್ತಾ ಕಣ್ಣಾಡಿಸುತ್ತಾ ಹೊರಟೆವು. ಬಿಸಿ ಬಿಸಿ ಬಜ್ಜಿ ಕಾಣಲೇ ಇಲ್ಲ. ಆರ್ ಟಿ ನಗರ ಫಸ್ಟ್ ಮೈನ್, ಫಸ್ಟ್ ಬ್ಲಾಕ್ ಬಳಿ ಬಜ್ಜೆಯ ಸುಹಾಸನೆ ಮೂಗಿಗೆ ಬಡಿಯಿತು.
ತಳ್ಳುಗಾಡಿ ಇಟ್ಕೊಂಡು ಬಿಸಿ ಬಿಸಿ ಬಜ್ಜಿ , ಪಡ್ಡು ಹಾಕುತ್ತಿದ್ದರು. ಮರೆಯಲ್ಲಿ ನೆನೆದು ಚಳಿ ಬೇರೆ ಇತ್ತು. ಬಜ್ಜಿ , ಪಡ್ಡು ಅನ್ನು ಹೊಟ್ಟೆ ತುಂಬುವಷ್ಟು ತಿಂದು ಮನೆಗೆ ಹೋದ್ವಿ‌ .
ನೀವು ನಂಬಿ ಬಿಡಿ ಇವತ್ತಿನವರೆಗೆ ಬೆಂಗಳೂರಲ್ಲಿ ಅಂಥಾ ರುಚಿ ರುಚಿ ಬಿಸಿ ಬಿಸಿ ಬಜ್ಜಿಯನ್ನು ತಿಂದೇ ಇಲ್ಲ.
ಆಲೂ ಬಜ್ಜಿ, ಮೆಣಸಿನ ಕಾಯಿ ಬಜ್ಜಿ, ಕಡ್ಲೆವಡೆ (ಅಂಬೊಡೆ), ಬಾಳೆಕಾಯಿ ಬಜ್ಜಿ, ಪಡ್ಡು ಸಿಗುತ್ತದೆ.
ವೆಂಕಟೇಶ್ ಎಂಬುವವರು ಇಲ್ಲಿನ ಬಜ್ಜಿ ಸ್ಪೆಶಲಿಸ್ಟ್. 2013ರಿಂದ ಈ ಉದ್ಯೋಗ ಮಾಡ್ತಿದ್ದಾರೆ.‌ ಪ್ರತಿದಿನ ಸಂಜೆ 6 ಗಂಟೆಗೆ ತೆರೆಯುತ್ತಾರೆ.
ನಾನು ಬೋಂಡ (ಬಜ್ಜಿ) ತಿನ್ನಬೇಕು ಅನಿಸಿದಾಗಲೆಲ್ಲ ಆರ್ ಟಿ ನಗರದ ಆ ನನ್ನ ಗೆಳೆಯಗೆ ಕಾಲ್ ಮಾಡಿ ವೆಂಕಟೇಶ್ ಅವರ ಬಜ್ಜಿ ಗಾಡಿ ಬಳಿ ಬರ ಹೇಳಿ, ಬೈಕೇರಿ ಅಲ್ಲಿಗೆ ಹೋಗುತ್ತೇನೆ. ನೀವು ಸಹ ಒಮ್ಮೆ ಭೇಟಿ ಕೊಡಿ…ಮತ್ತೆ ಮತ್ತೆ ಅಲ್ಲಿಗೆ ಹೋಗೇ ಹೋಗುತ್ತೀರಿ…! ಅಷ್ಟೊಂದು ರುಚಿ ಆಗಿರುತ್ತದೆ ಬಜ್ಜಿ. ಅದರ ರುಚಿ ಪದಗಳಲ್ಲಿ ಹೇಳಲಾಗದು ಸವಿದೇ ನೋಡಿ.

Famous-Footpath-hotel-in-bengalore

ವಿಳಾಸ : ಆರ್ ಟಿ ನಗರ ಫಸ್ಟ್ ಮೈನ್ , ಫಸ್ಟ್ ಬ್ಲಾಕ್, ಪೂಜಾ ಬೇಕರಿ ಎದುರು.
ಹೋಗಿ ಬಂದು ಅಭಿಪ್ರಾಯ ತಿಳಿಸಿ…

ಪ್ರೇಮ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top