ಈ ಬಾರಿ ಯಶ್ ತಮ್ಮ ಬರ್ತ್ ಡೇ ಮನೆಯಲ್ಲಿ ಆಚರಿಸೋಲ್ಲ..!

ಜನವರಿ 8ರಂದು ಹುಟ್ಟುಹಬ್ಬದಂದು ಯಶ್ 5000ತೂಕದ ಕೇಕ್ ಅನ್ನು ಕತ್ತರಿಸಲಿದ್ದಾರೆ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಈ ಬಾರಿಯ ಯಶ್ ಬರ್ತ್ ಡೇ ಸಖತ್ ಸ್ಪೆಷಲ್ ಆಗಿ ಇರಲಿದೆ..ಇನ್ನು ತಮ್ಮ ಬಾಸ್ ಬರ್ತ್ ಡೇ ಇನ್ನಷ್ಟು ಸ್ಪೆಷಲ್ ಮಾಡುವ ಸಲುವಾಗಿ ಅಭಿಮಾನಿಗಳು ಸಹ ಒಂದಿಷ್ಟು ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ.

5000ಕೆಜಿಯ ಕೇಕ್ ತಯಾರಿ..!
ಜನವರಿ 8ರಂದು ಹುಟ್ಟುಹಬ್ಬದಂದು ಯಶ್ 5000ತೂಕದ ಕೇಕ್ ಅನ್ನು ಕತ್ತರಿಸಲಿದ್ದಾರೆ.ಈ ಮೂಲಕ ಯಶ್ ಹೆಸರಿಗೆ ಮತ್ತೊಂದು ಹೊಸ ದಾಖಲೆ ಸೇರಿಕೊಳ್ಳಲಿದೆ.ಅಲ್ಲದೇ ಈ ಕೇಕ್ ಅನ್ನು ಯಶ್ ಅಭಿಮಾನಿ ವೇಣುಗೌಡ ಅವರು ತಯಾರು ಮಾಡಿಸುತ್ತಿದ್ದು, ಈ ರೀತಿ ಅತಿ ದೊಡ್ಡ ಕೇಕ್ World’s Biggest Cake ಇರುವುದೇ ವಿಶೇಷ..

ಮನೆಯಲ್ಲಿ ಅಚರಿಸೋಲ್ಲ ಯಶ್ ಬರ್ತ್ ಡೇ..!

ಇನ್ನು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಈ ಬಾರಿ ಮನೆಯಲ್ಲಿ ಆಚರಿಸುತ್ತಿಲ್ಲ.. ಸಾವಿರಾರು ಅಭಿಮಾನಿಗಳು ಯಶ್ ಬರ್ತ್ ಡೇಯನ್ನು ಮನೆಯ ಬಳಿ ಬಂದು ಆಚರಿಸಿ ಸಂಭ್ರಮಾಚರಣೆ ಮಾಡುತ್ತಿದ್ದರು,ಅಲ್ಲದೇ ಈ ಬಾರಿ ಸಂಖ್ಯೆ ಜಾಸ್ತಿಯಾಗುವ ಹಿನ್ನಲೆಯಲ್ಲಿ ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಬರ್ತ್ ಡೇ ನಡೆಯಲಿದೆ. ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಸ್ಥಳ ಬದಲು ಮಾಡಲಾಗಿದೆ. ಇನ್ನು ಜನವರಿ 7ರ ರಾತ್ರಿ ಯಿಂದ ಜನವರಿ 8ರ ಸಂಜೆ ವರೆಗೂ ಯಶ್ ಬರ್ತ್ ಡೇ ಸೆಲೆಬ್ರೆಷನ್ ಇರಲಿದ್ದು ಅಭಿಮಾನಿಗಳಿಗೆ‌ ಮುಕ್ತ ಆಹ್ವಾನವನ್ನು ಸಹ ನೀಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top