ರಾಬರ್ಟ್‍ಗೆ ಫಿಕ್ಸ್ ಆದ್ಲೂ ನಾಯಕಿ..! ಆಕೆ ಯಾರು ಗೊತ್ತಾ..?

robert kannada movie latest update

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಸುದೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಹೆಸರು ಅನೌನ್ಸ್ ಆದಾಗ್ಲಿಂದಲೂ ಹೈಪ್ ಕ್ರಿಯೆಟ್ ‌ಆಗಿತ್ತು. ಇನ್ನು ರಾಬರ್ಟ್ ನಲ್ಲಿ‌ ದರ್ಶನ್ ಗೆ ಜೋಡಿಯಾಗಿ ಯಾರು ಹೆಜ್ಜೆ ಹಾಕ್ತಾರೆ ಅನ್ನೋ ಕುತೂಹಲ‌ ಎಲ್ಲರಲ್ಲೂ ಮನೆಮಾಡಿತ್ತು, ಆದ್ರೆ ಈಗ ಅದಕ್ಕೆಲ್ಲ ತೆರೆಬಿದ್ದಿದೆ. ರಾಬರ್ಟ್ ಚಿತ್ರ ತಂಡದ ಮೂಲಗಳ ಪ್ರಕಾರ ರಾಬರ್ಟ್ ಗೆ ಪಂಜಾಬಿ ಬ್ಯೂಟಿ ಆಯ್ಕೆಯಾಗಿದ್ದಾಳೆ‌. ಹೌದು ದರ್ಶನ್ ಜೊತೆ ಹೆಜ್ಜೆಹಾಕೋಕೆ ಪಂಜಾಬಿ ಬೆಡಗಿ ‘ಮೆಹ್ರಿನ್ ಕೌರ್ ಪಿರ್ಜಾದಾ ‘ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. Read : ರಾಬರ್ಟ್‍ಗೆ ಫಿಕ್ಸ್ ಆದ್ಲೂ ನಾಯಕಿ..! ಆಕೆ ಯಾರು ಗೊತ್ತಾ..?

robert movie actress

ಇನ್ನು ಮೆಹ್ರಿನ್ ಈ ಹಿಂದೆ ವಿಜಯ್ ದೇವರಕೊಂಡ, ನಾನಿ ಮತ್ತು ರವಿತೇಜಾ ಜೊತೆ ಹೆಜ್ಜೆ ಹಾಕಿದ್ದಾರೆ. ಇನ್ನು ಇತ್ತಿಚೆಗೆ 100ಕೋಟಿ ಕ್ಲಬ್ ಸೇರಿದ್ದ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಎಫ್ ಟೂ’ ಚಿತ್ರದಲ್ಲಿ ಮೆಹ್ರಿನ್ ಮೋಡಿ ಮಾಡಿದ್ರು. ಇನ್ನು ದರ್ಶನ್ ಸಿನಿಮಾ ಶುರುವಾಯ್ತು ಅಂದ್ರೆ ಅಲ್ಲಿ ನಾಯಕಿ ಯಾರು ಅನ್ನೋ ಹೈಪ್‌ ಕೂಡ ಇರುತ್ತೆ, ಈಗ ಪಂಜಾಬಿ ಬೆಡಗಿ ಮೆಹ್ರಿನ್ ಆಯ್ಕೆಯಾಗಿದ್ದು ದರ್ಶನ್ ಜೊತೆ ತೆರೆಮೇಲೆ ಹೇಗೆ ಮೋಡಿ ಮಾಡ್ತಾರ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top