ಕೈಯಲ್ಲಿ ಗನ್ನು..ಲುಕ್ಕಲ್ಲಿ ರಗಡ್ಡು..ರಾಬರ್ಟ್‌ ಬಂದ ರೆಡಿಯಾಗ್ರಲೇ..!

robert first look

ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್‌ ಆರ್ಭಟ ಶುರು.. ಬಾ..ಬಾ..ನಾನ್‌ ರೆಡಿ ಅನ್ನೋ ಡೈಲಾಗೂ.. ಕೈಯಲ್ಲಿ ಗನ್ನು.. ಲುಕ್ಕಲ್ಲಿ ರಗಡ್ಡು.. ಇದು ರಾಬರ್ಟ್‌ ಫಸ್ಟ್‌ ಲುಕ್‌ನ ಹೈಲೆಟ್ಟು.. ಕ್ರಿಸ್‌ಮಸ್‌ ಹಬ್ಬಕ್ಕಾಗಿ ರಿಲೀಸ್‌ ಆಗಿರೋ ರಾಬರ್ಟ್‌ ಚಿತ್ರದ ಫಸ್ಟ್‌ ಲುಕ್‌ ನೋಡಿ ಬಾಸು ಸೂಪರ್‌..ರಾಬರ್ಟ್‌ ಲುಕ್‌ ಸೂಪರ್‌ ಡೂಪರ್‌ ಅಂತ ಹೇಳ್ತಿದ್ದಾರೆ. ರಿಲೀಸ್‌ ಆದ ಕೆಲವೇ ನಿಮಿಷಗಳಲ್ಲಿ ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ವೀವ್ಸ್ ಪಡೆಯುತ್ತಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿ ಬರೋದು ಗ್ಯಾರಂಟಿ.. ಅಭಿಮಾನಿಗಳಿಗೆ ಕ್ರಿಸ್‌ಮಸ್‌ಗೆ ಭರ್ಜರಿ ಗಿಫ್ಟ್‌ ನೀಡಿರೋ ರಾಬರ್ಟ್‌ ಟೀಂ.. ಫಸ್ಟ್‌ ಲುಕ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ದಾಖಲೆ ಬರೆಯೋಕೆ ನಾನ್‌ ರೆಡಿ ಅನ್ನೊ ರೀತಿ ಇದೆ ಅಂತಿದ್ದಾರೆ. ಚಿತ್ರರಸಿಕರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top