ದುಡ್ಡೊಂದಿದ್ದರೆ ಎಲ್ಲವೂ ತನ್ನಿಂದ್ ತಾನೇ ಬರುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ..!

renu mondal story in kannada

ಹಣವಿದ್ದರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಗಾದೆ ಮಾತಿದೆ, ಅದು ಅಕ್ಷರ ಸಹ ನಿಜ, ದುಡ್ಡಿದ್ರೆನೆ ದುನಿಯಾ ಅನ್ನೋ ಕಾಲ ಇದು, ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಈ ಸ್ಟೋರಿ.. ಈ ಹಿಂದೆ ನಾವು ನಮ್ಮ ಕನ್ನಡ ನ್ಯೂಸ್ ಲೈವ್‍ನಲ್ಲಿ `ರೆನು ಮಂಡಲ್’ ಅನ್ನೋ ಮಹಿಳೆ ಬಗ್ಗೆ ಸ್ಟೋರಿ ಹೇಳಿದ್ವಿ, ಆಕೆ ಕೊಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಹಾಡು ಹೇಳಿ ಬಿಕ್ಷೇ ಬೇಡುತ್ತಿರೋ ಸ್ಟೋರಿಯನ್ನು, ಆ ಮಹಿಳೆ ನಂತರದಲ್ಲಿ ತಾನು ಹಾಡಿದ ಹಾಡು ವೈರಲ್ ಆಗಿ ಆಕೆಯನ್ನು ಗುರುತಿಸಿ ಕೆಲವೊಂದು ರಿಯಾಲಿಟಿ ಶೋಗೂ ಕರೆದಿದ್ದರು, ಅದೃಷ್ಟ ಮತ್ತು ಟ್ಯಾಲೆಂಟ್ ಇವೆರಡು ಇದ್ರೆ ರಾತ್ರೋ ರಾತ್ರಿ ಸ್ಟಾರ್ ಆಗಬಹುದು ಅನ್ನೋದಕ್ಕೆ ರೆನು ಮಂಡಲ್ ಸಾಕ್ಷಿ, ಹೌದು ರೆನು ಮಂಡಲ್ ಅವರನ್ನು 10 ವರ್ಷಗಳ ಹಿಂದೆ ತನ್ನ ಹೆತ್ತ ಮಗಳೇ ನಡು ನೀರಿನಲ್ಲಿ ಕೈ ಬಿಟ್ಟು ನಡು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಳು, ತಾಯಿಯ ಕೈನಲ್ಲಿ ಇನ್ನು ಏನೂ ಆಗೋಲ್ಲ ಆಕೆ ಉಪಯೋಗ ಇನ್ನು ನನಗಿಲ್ಲ ಅನ್ನೋ ರೀತಿ ಬಿಟ್ಟು ಹೋಗಿದ್ದ ಮಗಳು ಈಗ ಆಕೆಯನ್ನು ಹುಡುಕಿಕೊಂಡು ತಾಯಿ ಮಡಿಲು ಸೇರಲು ಆಸೆ ಪಡುತ್ತಿದ್ದಾಳೆ, ಕಾರಣ ಇಷ್ಟೇ ದುಡ್ಡು,ಫೇಮು..

ಹೌದು ರೆನು ಮಂಡಲ್' ಇಂಡಿಯಾದಲ್ಲಿ ಸ್ಟಾರ್ ಆಗಿದ್ದಾರೆ, ಅದು ಸಿಂಗಿಂಗ್ ಮೂಲಕ, ಈ ಹಿಂದೆ ರೈಲ್ವೇ ಸ್ಟೇಷನ್‍ನಲ್ಲಿ ಹಾಡು ಹಾಡಿ ವೈರಲ್ ಆಗಿದ್ದ ಈಕೆಯ ಹಾಡು ಕೇಳಿಹಿಮೇಶ್ ರೇಶಮಿಯಾ’ ಈಕೆಯ ಬಳಿ ತಮ್ಮ ಸಿನಿಮಾಗೆ ಹಾಡು ಹಾಡಿಸಿದ್ದಾರೆ, ಅದು ಸಹ ಈಗ ಯಾವ ಮಟ್ಟಕ್ಕೆ ವೈರಲ್ ಆಗಿದೆ ಅಂದ್ರೆ ಸೋಶಿಯಲ್ ಮೀಡಿಯಾದಲ್ಲಿ ನಂಬರ್ ಒನ್ ಟ್ರೆಂಡಿಂಗ್‍ನಲ್ಲಿದೆ, ಇನ್ನು ಹಿಮೇಶ್ ರೇಶಮಿಯಾ ಜೊತೆ ರೆನು ಮಂಡಲ್ ಹಾಡಿರೋ `ತೇರಿ ಮೇರಿ ಪ್ರೇಮ್ ಕಹಾನಿ’ ಹಾಡು ಕೇಳಿದ ಸಂಗೀತ ಪ್ರೀಯರು ಏನ್ ವಾಯ್ಸ್ ಗುರು ಅಂತಾನು ಹೇಳ್ತಾ ಇದ್ದಾರೆ, ಇನ್ನು ಇದೇ ವೇಳೆ ಹಿಮೇಶ್ ರೇಶಮಿಯಾ ರೆನು ಮಂಡಲ್‍ಗೆ ಈ ಹಾಡು ಹಾಡಿದ್ದಕ್ಕೆ ಖುಷಿಯಲ್ಲಿ 7 ಲಕ್ಷ ರೂಪಾಯಿ ಹಣವನ್ನು ಸಹ ಸಂಭಾವನೆ ರೂಪದಲ್ಲಿ ನೀಡಿದ್ದಾರೆ. ಈ ವಿಷಯ ತಿಳಿದ ಮಗಳು ಈಗ ತನ್ನ ತಾಯಿಯೇ ನನಗೆ ಸರ್ವಸ್ವ, ತಾಯಿ ಇಲ್ಲದೇ ಏನು ಇಲ್ಲ ಅನ್ನೋ ನಾಟಕವನ್ನು ಆಡೋಕೆ ಶುರುಮಾಡಿ, 10 ವರ್ಷಗಳಿಂದ ದೂರ ತಳ್ಳಿದ್ದ ತಾಯಿಯನ್ನು ಈಗ ಹತ್ತಿರ ಸೇರಿಸಿಕೊಳ್ಳಲು ತವಕಿಸುತ್ತಿದ್ದಾಳೆ, ಅದಕ್ಕೆ ಹೇಳೋದು ದುಡ್ಡಿದ್ರೆ ದುನಿಯಾ, ಇಲ್ಲ ಅಂದ್ರೆ ತೆಪ್ಪಗಿರೋ ಮುನಿಯಾ ಅಂತ, ಅದೇನೆ ಇದ್ರೂ ದುಡ್ಡಿನ ಹಿಂದೆ ಹೋದೋರಾ ಕಥೆಯೂ ದುರಂತ ಅಂತ್ಯ ಕಂಡಿರುವುದನ್ನು ಈ ಜಗತ್ತು ನೋಡಿರೋದು ಕೂಡ ಸತ್ಯ..ಹಾಗಾಗಿ ಈ ದುಡ್ಡು ಇದ್ರೂ ಕಷ್ಟ ಇಲ್ಲದಿದ್ರು ಕಷ್ಟ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top