ದಸರಾದಲ್ಲಿ ಮೋಡಿ ಮಾಡಲಿದ್ದಾರೆ `ತೇರಿ ಮೇರಿ’ ರೇನು ಮೊಂಡಲ್..!

renu mondal in mysore dasara

ಮೈಸೂರು ದಸರಾಗೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು ನಾಡಿನಾದ್ಯಂತ ದಸರಾ ಸಂಭ್ರಮ ಜೋರಾಗಿದೆ, ಇನ್ನು ಈ ಬಾರಿ ದಸರಾ ಮಹೋತ್ಸವದಲ್ಲಿ ಅನೇಕ ವಿಶೇಷತೆಗಳಿದ್ದು ಅದರಲ್ಲಿ ಪ್ರಮುಖವಾಗಿ, ರೈಲ್ವೇ ಸ್ಟೇಷನ್‍ನಲ್ಲಿ ಹಾಡುತ್ತಾ ಜೀವನ ಸಾಗಿಸುತ್ತಿದ್ದ ಮಹಿಳೆ ರಾತ್ರೋ ರಾತ್ರಿ ಸ್ಟಾರ್ ಆಗಿ ತೇರಿ ಮೇರಿ ಅನ್ನೋ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದ ರೇನು ಮೊಂಡಲ್, ಸದ್ಯ ಬಾಲಿವುಡ್ ಸೆನ್ಷೇಷನ್, ಹಿಮೇಶ್ ರೇಷಮಿಯಾ ಜೊತೆ ಎರಡು ಆಲ್ಬಂಗಳಲ್ಲಿ ಹಾಡಿರೋ ರಾನು ಮೊಂಡಲ್, ಈಗ ನಮ್ಮ ನಾಡ ಹಬ್ಬ ಮೈಸೂರು ದಸರಾದಲ್ಲೂ ಬಂದು ಹಾಡೋ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಅಕ್ಟೋಬರ್ 1ರಿಂದ ಅಕ್ಟೋಬರ್ 6ರ ವರೆಗೆ ಯುವ ದಸರಾ ನಡೆಯಲಿದ್ದು. ಉದ್ಘಾಟನಾ ದಿನ ಅಂದರೆ ಅಕ್ಟೋಬರ್ 1 ರಂದು ರೇನು ಮೊಂಡಲ್ ಕಾರ್ಯಕ್ರಮವನ್ನು ನೀಡಲಿದ್ದಾರೆ. ಇನ್ನು ದಸರಾ ಉಪ ಸಮಿತಿ ಯುವ ದಸರಾ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದಿಸಲು ನಿರ್ಧರಿಸಿದ್ದು, ಯುವ ಜನತೆಗೆ ಸಾಧನೆ ಸಂದೇಶವನ್ನು ಸಾರುವ ಸಲುವಾಗಿ ರೇನು ಮೊಂಡಲ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ದಸರಾ ಉಪ ಸಮಿತಿ ತಿಳಿಸಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top