
ಗಾಲಿ ಜನಾರ್ಧನ ರೆಡ್ಡಿ ಮಗಳು ಬ್ರಹ್ಮಿಣೀ ಮಗುವಿಗೆ ಬಣ್ಣದ ತೊಟ್ಟಿಲು ಸಿದ್ಧವಾಗಿದೆ, ಅರೆ ಇದರಲ್ಲೇನೂ ವಿಶೇಷ ಅಂತ ನೀವೂ ಯೋಚನೆ ಮಾಡುತ್ತಿರ ಬಹುದು , ಹೌದು ಈ ಬಣ್ಣದ ತೊಟ್ಟಿಲು ಸಿದ್ಧವಾಗಿರೋದು ಬಣ್ಣದ ತೊಟ್ಟಿಲುಗಳಿಗೆ ಫೇಮಸ್ ಆಗಿರೋ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ, ಇಲ್ಲಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಸಹ ಹೊಂದಿದೆ. ಮೂರು ತಿಂಗಳ ಹಿಂದೆಯೇ ಕಲಾವಿದ ಮಾರುತಿ ಎಂಬುವವರು ತೊಟ್ಟಿಲನ್ನು ತಯಾರಿಸುತ್ತಿದ್ದು, ತೊಟ್ಟಿಲಿನಲ್ಲಿ ಬಾಲ ಶ್ರೀಕೃಷ್ಣ ಲೀಲೆಗಳನ್ನು ತಮ್ಮ ಕೈಚಳದಲ್ಲಿ ತೋರಿಸಿದ್ದು, ಈ ತೊಟ್ಟಿಲನ್ನು ಮಾಡಲು ಹಾವೇರಿ ಜಿಲ್ಲೆಯ ವನಿತಾ ಗುತ್ತಲ ಎಂಬುವವರು ಜನಾರ್ಧನ ರೆಡ್ಡಿ ಮೊಮ್ಮಗುವಿಗಾಗಿ ರೆಡಿಮಾಡಿಸಿದ್ದಾರೆ. ಒಟ್ಟು 90000 ವೊತ್ತದ ಈ ತೊಟ್ಟಿಲು ಇಂದು ಬೆಂಗಳೂರಿಗೆ ತೆಗೆದುಕೊಂಡು ಬರಲಾಗುತ್ತಿದೆ.

ಇನ್ನು ಈ ಹಿಂದೆಯೂ ಸಹ ಅನೇಕ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕಲಘಟಗಿಯಲ್ಲಿ ಬಣ್ಣದ ತೊಟ್ಟಿಲನ್ನು ರೆಡಿಮಾಡಿಸಿದ್ದಾರೆ. ಇನ್ನು ರೆಬೆಲ್ ಸ್ಟಾರ್ ಅಂಬರೀಷ್ ಯಶ್ ಮತ್ತು ರಾಧಿಕಾ ಪಂಡಿತ್ ಮಗಳಿಗೆ ಇಲ್ಲಿಂದಲೇ ತೊಟ್ಟಿಲನ್ನು ತರಿಸಿಕೊಟ್ಟಿದ್ದರು. ಇನ್ನು ರಾಜ್ ಫ್ಯಾಮಿಲಿಗೂ ಸಹ ಇವರೇ ತೊಟ್ಟಿಲನ್ನು ರೆಡಿಮಾಡಿಕೊಡುವುದು.