82ರ ಆಟೋ ಡ್ರೈವರ್, ನಾ ಕಂಡ ರಿಯಲ್ ಹೀರೋ.!

ನಂಗೆ ಸ್ಫೂರ್ತಿಯಾದ ವ್ಯಕ್ತಿಯ ಪುಟ್ಟ ಸ್ಟೋರಿ ಇದು. ಈ ಸ್ಟೋರಿಯ ಕಥಾನಾಯಕ ಬಾಷ ಅಂತ. ವಯಸ್ಸು 82.
ಇತ್ತೀಚೆಗೆ ನಾನು ಬೆಂಗಳೂರಿನ ಕೆ.ಆರ್ ಪುರಂನಿಂದ ಕೋರಮಂಗಲಕ್ಕೆ ಹೊರಟು ರೋಡ್ ಸೈಡಲ್ಲಿ ಆಟೋಕ್ಕೆ ಕಾಯ್ತಾ ನಿಂತಿದ್ದೆ. ಬರೋ ಎಲ್ಲಾ ಆಟೋದವರು ತುಂಬಾ ಬಾಡಿಗೆ ಕೇಳ್ತಿದ್ರು. ಒನ್ ಟು ಡಬಲ್ ಕೊಟ್ಟು ಹೋಗೋದು ಯಾಕೆ ಅಂತ ಬೇರೆ ಆಟೋಕ್ಕೆ ಕಾಯ್ತಿದ್ದೆ. ಅಷ್ಟೊತ್ತಿಗೆ ಹಿರಿ ವಯಸ್ಸಿನ ಆಟೋ ಚಾಲಕ. ಮಗಳೇ ನೀನು ಎಲ್ಲಿಗೆ ಹೋಗ್ಬೇಕಮ್ಮಾ ಅಂದ್ರು. ನಾನು ನನ್ನ ಡ್ರಾಪ್ ಲೊಕೇಶನ್ ತಿಳಿಸಿದೆ. ಹ, ನಾನು ಡ್ರಾಪ್ ಮಾಡ್ತೀನಿ ಅಂತ ಹೇಳಿದ್ರು. ಆಟೋ ಹತ್ತಿ ಕೂತೆ. ಅವರ ಜೊತೆ ಮಾತಾಡೋಕೆ ಶುರುಮಾಡ್ದೆ.
ನಿಮ್ಗೆ ವಯಸ್ಸೆಷ್ಟು ಅಂತ ಕೇಳ್ದೆ. 82 ಅಂತ ಹೇಳಿದ್ರು. ಈ ವಯಸ್ಸಲ್ಲಿ ಯಾಕೆ ನೀವು ಕೆಲ್ಸ ಮಾಡ್ತಿದ್ದೀರಿ ಅಂತ ಮರು ಪ್ರಶ್ನೆ ಕೇಳ್ದೆ. ‘ನಾನು ಇಂಡಿಪೆಂಡೆಂಟ್ ಆಗಿರೋಕೆ ಇಷ್ಟ ಪಡ್ತೀನಿ. ನನ್ನ ಕೊನೆಯಿಸಿರಿರೋ ತನಕ ನನ್ ಮಕ್ಕಳಿಗೆ ಹೊರೆ ಆಗೋಕೆ ಇಷ್ಟ ಇಲ್ಲ ಅಂತ ಹೇಳಿದ್ರು.
ಅಷ್ಟೊತ್ತಿತೆ ನಾನು ತಲುಪ ಬೇಕಿದ್ದ ಸ್ಥಳಕ್ಕೆ ತಲುಪಿದ್ದೆ. 150 ರೂ ಮೀಟರ್ ಆಗಿತ್ತು. ನಾನು 200 ರೂ ಕೊಟ್ಟು ಚೇಂಜ್ ನೀವೇ ಇಟ್ಕೊಳ್ಳಿ, ನಿಮ್ಮ ಹಾರ್ಡ್ ವರ್ಕ್ ನೇಚರ್ ನಂಗೆ ತುಂಬಾ ಇಷ್ಟ ಆಯ್ತು, ಸ್ಪೂರ್ತಿ ನೀಡ್ತು ಅಂಕಲ್ ಅಂದೆ.

(ಇದರ ಮಧ್ಯೆ ನಾನು ಆಟೋದಲ್ಲಿ ಬರುವಾಗ ನನ್ನ ಗೆಳತಿಗೆ ನಾನು ಬರುವುದು ಲೇಟ್ ಆಯ್ತು ತಿಂಡಿ ಕೂಡ ಮಾಡಿಲ್ಲ, ಅನಾಥ ಮಕ್ಕಳಿಗೆ ನಾನು ಸೇವೆ ಮಾಡುವುದರ ಬಗ್ಗೆ ಮಾತನಾಡುತ್ತಿದ್ದೆ ಅದನ್ನು ಕೇಳಿಸಿ ಕೊಂಡಿದ್ದ ಆಟೋ ಡ್ರೈವರ್)

ಇದು ತಗೋ ಮಗಳೇ 50ರೂ ಇದನ್ನು ಅನಾಥ ಮಕ್ಕಳಿಗೆ ಊಟಕ್ಕೆ ಏನಾದರೂ ಕೊಡು ಇಷ್ಟೆ ನನ್ನ ಕಷ್ಟ ಪಟ್ಟ ಹಣದಲ್ಲಿ ನನಗೆ ಸಹಾಯ ಮಾಡಲು ಆಗೋದು ಅಂತ 50ರೂ ಸೇರಿಸಿ ಕೊಟ್ಟು ಹೋದರು.
ನಂಗೆ ನಿಜಕ್ಕೂ ಆಶ್ಚರ್ಯ ಆಯ್ತು, ಜಾಸ್ತಿ ಹಣ ಕೇಳೋರ ನಡುವೆ ಇಂಥವರೂ ಇದ್ದಾರಲ್ಲ ಅಂತ. ಇವರ ಸ್ವಾಭಿಮಾನಕ್ಕೆ ಧನ್ಯವಾದಗಳು…
ಎ ಬಿಗ್ ಸೆಲ್ಯೂಟ್ ಟು ಯು ಬಾಷಾ ಅಂಕಲ್ .

ರೇಷ್ಮಾ ಜಗದೀಶ್ ಅವರು ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿರುವ ರಿಯಲ್ ಕಥೆ ಇದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top