
ಐಪಿಎಲ್ 2020ಯ ಹೈ ವೋಲ್ಟಾಜ್ ಮ್ಯಾಚ್ ಅಂದ್ರೆ ಅದು ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಸಖತ್ ಸ್ಟಾರ್ಟ್ ನೊಂದಿಗೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇರೋ ಆರ್ಸಿಬಿ ಒಂದು ಕಡೆಯಾದ್ರೆ, ಸೋಲಿನ ಸುಳಿ ಆಟಗಾರರ ಒಳ್ಳೇ ಪ್ರದರ್ಶನ ಇಲ್ಲದೇ ಚಿಂತೆಯಲ್ಲಿರೋ ಚೆನ್ನೈ ತಂಡ.
ಈ ಎರಡು ತಂಡಗಳ ಪಂದ್ಯ ಅಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಇಂಡಿಯಾ ಪಾಕ್ ಮ್ಯಾಚ್ ಇದ್ದ ಹಾಗೇ, ಅದರಲ್ಲೂ ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ಚೆನ್ನೈ ವಿರುದ್ಧ ಮ್ಯಾಚ್ ಗೆಲ್ಲಲೇ ಬೇಕು ಅನ್ನೋ ಹಠಕ್ಕೆ ಬೀಳುತ್ತಾರೆ. ಈಗಾಗಲೇ ಆರ್ಸಿಬಿ ಕೂಡ ಲಾಂಗ್ ಗ್ಯಾಪ್ನ ನಂತರ ಶನಿವಾರ ಚೆನ್ನೈ ವಿರುದ್ಧ ಸಖತ್ ತಯಾರಿ ನಡೆಸಿಕೊಂಡು ಆರ್ಸಿಬಿ ಬರ್ತಾ ಇದೆ.
ಇನ್ನು ಚೆನ್ನೈ ವಿರುದ್ಧ ಪಂದ್ಯದಲ್ಲಿ ಆರ್ಸಿಬಿಗೆ ಬಲ ನೀಡಲು ಕ್ರಿಸ್ ಮಾರಿಸ್ ಕೂಡ ಕಣಕ್ಕೆ ಇಳಿಯಲ್ಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕ್ರಿಸ್ ಮಾರಿಸ್ ಗುಣಮುಖರಾಗಿದ್ದು, ನೆಟ್ನಲ್ಲಿ ಹೆಚ್ಚು ಸಮಯ ಪ್ರಾಕ್ಟಿಸ್ನಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಪ್ರಾಕ್ಟಿಸ್ ಮ್ಯಾಚ್ನಲ್ಲಿ ಉತ್ತಮ ಆಟ ಆಡೋ ಮೂಲಕ ನಾಯಕ ವಿರಾಟ್ ಮತ್ತು ಮೈಕ್ ಹಸನ್ ಗಮನ ಸೆಳೆದಿದ್ದು, ತಂಡಕ್ಕೆ ಬಲ ತಂದುಕೊಡೋ ಭರವಸೆಯನ್ನು ನೀಡಿದ್ದಾರೆ. ಇನ್ನು ಈಗಾಗಲೇ ತಂಡದಲ್ಲಿ ಕ್ರಿಸ್ ಮಾರಿಸ್ ಯಾರ ಬದಲಿಗೆ ಕಣಕ್ಕೆ ಇಳಿಯಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದ್ದು, ಇದೀಗ ಮಾರಿಸ್ ಈಸೂರು ಉದಾನ ಬದಲಿಗೆ ಕಣಕ್ಕೆ ಇಳಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಈಸೂರು ಉದಾನ ವಿಕೆಟ್ ತೆಗೆಯುವಲ್ಲಿ ಯಶಸ್ವಿಯಾದ್ರು ರನ್ ನೀಡುವುದರಲ್ಲಿ ಮಾತ್ರ ಕಂಟ್ರೋಲ್ಗೆ ಸಿಗದ ಕಾರಣ ಉದಾನ ಬದಲಿಗೆ ಕ್ರಿಸ್ ಮಾರಿಸ್ ಅಖಾಡಕ್ಕೆ ಇಳಿಯಲ್ಲಿದ್ದಾರೆ ಈ ಮೂಲಕ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಮಹತ್ವದ ಬದಲಾವಣೆಯೊಂದಿಗೆ ಗ್ರೌಂಡ್ಗೆ ಇಳಿಯಲ್ಲಿದ್ದು, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಂಡು ಯಾವ ರೀತಿ ಆಡಲಿದೆ ಕಾದುನೋಡ ಬೇಕು. ನಿಮ್ಮ ಪ್ರಕಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಆಡೋ 11 ಆಟಗಾರರು ಯಾರು..ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದು ಬೀಗಲಿದ್ಯಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.