RCB IPL ಕಪ್ ಗೆಲ್ಲೋದಿಲ್ಲ

ಐಪಿಎಲ್ 2020ಯಲ್ಲಿ ಸತತ ಸೋಲಿನ ನಡುವೆಯು ರನ್ ರೇಟ್ ಲೆಕ್ಕದಲ್ಲಿ ಆರ್‍ಸಿಬಿ ಪ್ಲೇ ಆಫ್‍ಗೆ ತಲುಪಿದ್ದು, ಈ ಬಾರಿಯು ಕಪ್ ಗೆಲ್ಲುವ ವಿಶ್ವಾಸ ಕಳೆದುಕೊಂಡೆವು ಅನ್ನೋವಾಗಲೇ ಪ್ಲೇ ಆಫ್‍ಗೆ ತಲುಪಿ ಕಪ್ ಗೆಲ್ಲುವ ಆಸೆಯನ್ನು ಇನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಇನ್ನು ಆರ್‍ಸಿಬಿ ಅಭಿಮಾನಿಗಳು ಈ ಬಾರಿ ಕಪ್ ಗೆದ್ದು ಬರಲೇ ಬೇಕು ಅನ್ನೋ ಬಯಕೆಯನ್ನು ಇಟ್ಟುಕೊಂಡಿದ್ದಾರೆ. ಆದ್ರೆ ಇದೀಗ ಆರ್‍ಸಿಬಿ ಅಭಿಮಾನಿಗಳ ಆಸೆಗೆ ದೋಸೆ ಹಾಕುವ ಮಾತುಗಳನ್ನು ಹೇಳಿದ್ದಾರೆ ಮಾಜಿ ಸ್ಟಾರ್ ಕ್ರಿಕೆಟರ್. ಹೌದು ಮಾಜಿ ಕ್ರಿಕೆಟರ್ ಒಬ್ಬರು ಈ ಬಾರಿ ಐಪಿಎಲ್ ಅನ್ನು ಆರ್‍ಸಿಬಿ ಗೆಲ್ಲುತ್ತದೆ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ. ಈ ರೀತಿ ಹೇಳಿರೋದು ಬೇರೆ ಯಾರು ಅಲ್ಲ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್, ಹೌದು ಸತತ ಸೋಲಿನ ನಡುವೆಯು ಆರ್‍ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪಿದ್ದು ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆದ್ರೆ ಮೈಕಲ್ ವಾನ್ ಮಾತ್ರ ಈ ಬಾರಿ ಆರ್‍ಸಿಬಿ ಕಪ್ ಗೆಲ್ಲುವುದಿಲ್ಲ ಅಂತ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರೋ ವಾನ್, ನಾನು ಐಪಿಎಲ್ ಪ್ರಾರಂಭದಿಂದಲೂ ಹೇಳುತ್ತಿದ್ದೇನೆ. ಆರ್‍ಸಿಬಿ ಈ ಬಾರಿ ಕಪ್ ಗೆಲ್ಲುವುದು ಅನುಮಾನ ಅಂತ. ಏಕೆಂದರೆ ಅವರು ಟೂರ್ನಿಯಲ್ಲಿ ಕಪ್ ಗೆಲ್ಲೋ ರೀತಿ ಪ್ರದರ್ಶನವನ್ನು ತೋರುತ್ತಿಲ್ಲ, ಹಾಗಾಗಿ ಈ ಬಾರಿಯು ಆರ್‍ಸಿಬಿ ಕಪ್ ಗೆಲ್ಲುವುದಿಲ್ಲ ಎಂದು ಹೇಳಿದ್ದು, ಇನ್ನು 2020ರಲ್ಲಿ ಏನೂ ಬೇಕಾದರೂ ಆಗಬಹುದು, ವಿರಾಟ್ ಎಡಗೈನಲ್ಲಿ ಬ್ಯಾಟಿಂಗ್ ಮಾಡಿ ಗೆಲ್ಲಿಸಬಹುದು ಆದ್ರೆ ಅದು ಕಷ್ಟ ಎಂದು ವ್ಯಂಗ್ಯಮಾಡಿದ್ದಾರೆ.

ಆರ್‍ಸಿಬಿಯಲ್ಲಿ ಒತ್ತಡದ ನಡುವೆಯೂ ಉತ್ತಮವಾಗಿ ಆಡುವ ಆಟಗಾರರಿದ್ದಾರೆ. ಅವರ ಬ್ಯಾಟಿಂಗ್ ಲೈನಪ್ ತುಂಬಾನೇ ಚೆನ್ನಾಗಿದೆ, ಆರ್‍ಸಿಬಿ ಪರವಾಗಿ ಮಾತನಾಡಬೇಕಾದರೆ ಆಟಗಾರರತು ತಾಳ್ಮೆಯ ಜೊತೆಯಲ್ಲಿ ಆಕ್ರಮಣಕಾರಿಯಾಗಿ ಆಡಿದ್ರೆ ಮಾತ್ರ ಒಳ್ಳೇದಾಗಲಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.

ಹಾಗಾದ್ರೆ ಮೈಕಲ್ ವಾನ್ ಹೇಳಿದ ಮಾತಿನಲ್ಲಿ ಸತ್ಯಾಂಶ ಇದ್ಯಾ, ಆರ್‍ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top