RCB ಸೋಲಿಗೆ ಇಲ್ಲಿದೆ ಪ್ರಮುಖ ಕಾರಣ

IPL 2020 ಯ ಆರ್ ಸಿ ಬಿ ಮತ್ತು ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಹೈದರಬಾದ್ ಉತ್ತಮ ಪ್ರದರ್ಶನದೊಂದಿಗೆ ಗೆಲುವು‌ ಸಾಧಿಸಿದ್ದು, ಪ್ಲೇ ಆಫ್ ಅಸೆಯನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ.ಇನ್ನು ಪ್ಲೇ ಆಫ್ ಹಂತ ತಲುಪುವ ವೇಳೆಯಲ್ಲಿ ಆರ್ ಸಿ ಬಿ ಹೀನಾಯವಾಗಿ ಸೋಲೋ ಮೂಲಕ ನಿರಾಸೆಯನ್ನು ಮೂಡಿಸುತ್ತಿದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿ ಬಿ ಹೀನಾಯವಾಗಿ ಸೋಲಲು ಪ್ರಮುಖ ಕಾರಣವನ್ನು ನೋಡೋದಾದ್ರೆ,ಆರ್ ಸಿ ಬಿ ಗೆ ಆರಂಭಿಕ ಬ್ಯಾಟ್ಸಮನ್ ಉತ್ತಮ ರನ್ ಕಲೆಹಾಕುವಲ್ಲಿ ಯಡವಿದ್ದು ,ಬಹುಬೇಗನೆ ವಿಕೆಟ್ ಒಪ್ಪಿಸಿದ್ದು ತಂಡದ ಹಿನ್ನೆಡೆಗೆ ಪ್ರಮುಖ ಕಾರಣವಾಯ್ತು, ನಾಯಕನ ಆಟ ಆಡಬೇಕಾಗಿದ್ದ ಕೊಹ್ಲಿ ಬೇಗನೆ ವಿಕೆಟ್ ಒಪ್ಪಿಸಿದ್ದು ತಂಡದ ಸೋಲಿಗೆ ಪ್ರಮುಖ‌ ಕಾರಣವಾದ್ರೆ,ತಂಡದ ಅಪತ್ಭಾಂಧವ ಎಬಿಡಿ ತಂಡಕ್ಕೆ ಆಸರೆಯಾಗದೆ ಇದ್ದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು,ಇನ್ನು ತಂಡದ ಮಿಡಲ್ ಆರ್ಡರ್ ನಲ್ಲಿ ಗುರ್‌ಕಿರತ್ ಮತ್ತು ವಾಷಿಂಗ್ಟನ್‌ ತಂಡಕ್ಕೆ ಸಾಥ್ ನೀಡದೇ ಇದ್ದದ್ದು ಸಹ ತಂಡ ಕಡಿಮೆ ರನ್ ಕಲೆ ಹಾಕಬೇಕಾದ್ರೆ,ಇತ್ತ ಗುರ್ ಕಿರತ್ ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಟಿ 20ಯಲ್ಲಿ ಟೆಸ್ಟ್ ಪ್ಲೇಯರ್ ಆಗಿದ್ದು ತಂಡದ ಸೋಲಿಗೆ ಬಹು ಪ್ರಮುಖ ಕಾರಣ ಅಂತಾನೇ ಹೇಳಬಹುದು.ಇನ್ನು ಬೌಲಿಂಗ್ ವಿಭಾಗದಲ್ಲಿ ಉದಾನ ಮತ್ತು‌ ಚಹೆಲ್ ಉತ್ತಮ ಬೌಲಿಂಗ್ ನಡೆಸಿದ್ರು‌ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬಂದ ಸೈನಿ‌ ದುಬಾರಿಯಾಗಿದ್ದು ಹೈದರಬಾದ್ ಸುಲಭವಾಗಿ ಗೆಲುವು‌ ಸಾಧಿಸಲು ಸಹಾಯವಾಯ್ತು,ಇನ್ನು ತಂಡದಲ್ಲಿ ಯಾವೊಬ್ಬ ಆಟಗಾರನು ಉತ್ತಮ ಪ್ರದರ್ಶನ ನೀಡದೇ ಇರೋದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದ್ದು,ತಂಡದ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಎಡವುತ್ತಿರೋದು ತಂಡದ ಹೀನಾಯ ಸೋಲಿಗೆ ಪ್ರಮುಖ ಕಾರಣ ಅಂತಾನೇ ಹೇಳ ಬಹುದು‌

ನಿಮ್ಮ ಪ್ರಕಾರ ಆರ್ ಸಿ ಬಿ ಹೀನಾಯ ಸೋಲಿಗೆ ಕಾರಣವೇನು ಈ ಸೋಲಿನ ಹೊಣೆಯನ್ನು ಯಾರಿಗೆ ಕಟ್ಟುತ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top