
ಐಪಿಎಲ್ 2021ಕ್ಕೆ ಇನ್ನು ಕೇವಲ 4 ತಿಂಗಳುಗಳು ಬಾಕಿ ಇದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ತಯಾರಿಯನ್ನು ನಡೆಸುತ್ತಿದ್ದಾರೆ. ಅದರಲ್ಲೂ ಆರ್ಸಿಬಿ ತಂಡ ಮುಂದಿನ ಐಪಿಎಲ್ ಸೀಸನ್ಗೆ ಸಖತ್ ತಯಾರಿಯನ್ನು ನಡೆಸುತ್ತಿದ್ದು, ಈಗಾಗಲೇ ಟ್ಯಾಲೆಂಟ್ ಹಂಟ್ ಕ್ಯಾಂಪ್ ಕೂಡ ಆರ್ಸಿಬಿ ಶುರುಮಾಡಿದೆ. ಹೀಗಿರಬೇಕಾದ್ರೆ ಮುಂದಿನ ಐಪಿಎಲ್ಗಾಗಿ ಮಿನಿ ಆಕ್ಷನ್ ನಡೆಯುತ್ತಿದ್ದು, ಆರ್ಸಿಬಿ ತಂಡ ಯಾವೆಲ್ಲಾ ಆಟಗಾರರನ್ನು ಕೈ ಬಿಡಲಿದೆ, ಕೈ ಬಿಟ್ಟ ಆಟಗಾರರಿಂದ ಎಷ್ಟು ಹಣ ಆರ್ಸಿಬಿ ಉಳಿತಯವಾಗಲಿದೆ ಆ ಹಣದಿಂದ ಮಿನಿ ಆಕ್ಷನ್ನಲ್ಲಿ ಯಾವರೀತಿಯ ಆಟಗಾರರನ್ನು ಬಿಡ್ಬಾಡ ಬಹುದು ಅನ್ನೋದನ್ನ ನಾವ್ ಇವತ್ತು ನೋಡೋಣ.
ಮೊದಲಿಗೆ ಆರ್ಸಿಬಿ ತನ್ನ ತಂಡದಿಂದ ಕೈ ಬಿಡುತ್ತಿರೋ ಆಟಗಾರ ಅಂದ್ರೆ ಅದು ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್, ಸ್ಟೇನ್ ಈಗಾಗಲೇ ಐಪಿಎಲ್ಗೆ ವಿದಾಯ ಹೇಳಿದ್ದು, ಮುಂದಿನ ಐಪಿಎಲ್ನಲ್ಲಿ ಆಡುವುದಿಲ್ಲ ಅನ್ನೋದನ್ನ ಹೇಳಿಯಾಗಿದೆ. ಕಳೆದ ಐಪಿಎಲ್ನಲ್ಲಿ ಡೇಲ್ ಸ್ಟೇನ್ ಅನ್ನು 2 ಕೋಟಿಗೆ ಬಿಡ್ ಮಾಡಿ ಖರೀದಿ ಮಾಡಿತ್ತು, ಇದೀಗ ಅವರ ಸ್ಥಾನ ಖಾಲಿಯಾಗಿದ್ದು ಆರ್ಸಿಬಿಗೆ 2 ಕೋಟಿ ಉಳಿತಾಯವಾಗಲಿದೆ.
ಇನ್ನು ಆರ್ಸಿಬಿ ಕೈ ಬಿಡುತ್ತಿರೋ ಎರಡನೇ ಆಟಗಾರ ಅಂದ್ರೆ ಅದು ಅರೋನ್ ಫಿಂಚ್, ಆರ್ಸಿಬಿ ತುಂಬಾ ನಂಬಿಕೆ ಇಟ್ಟು ಖರೀದಿ ಮಾಡಿದ ಆಟಗಾರ ಅಂದ್ರೆ ಅದು ಫಿಂಚ್ ಆದ್ರೆ ಫಿಂಚ್ ಕಳೆದ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಸದೆ ತಂಡಕ್ಕೆ ಮತ್ತು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದ್ದಾರೆ. 4.4 ಕೋಟಿಗೆ ಖರೀದಿ ಮಾಡಿರೋ ಫಿಂಚ್ ಅವರನ್ನು ಈ ಬಾರಿ ಆರ್ಸಿಬಿ ತಂಡದಿಂದ ಕೈ ಬಿಡಲಿದೆ.
ಆರ್ಸಿಬಿ ಈ ಬಾರಿ ತಂಡದಿಂದ ಗುರುಕಿರತ್ ಮಾನ್ ಅವರನ್ನು ಕೈಬಿಡಲಿದೆ.ಕಳೆದ ಐಪಿಎಲ್ನಲ್ಲಿ ಗುರುಕಿರತ್ ಅವರ ಪ್ರದರ್ಶನ ನೋಡಿ ಸ್ವತಃ ಆರ್ಸಿಬಿ ಮ್ಯಾನೆಂಜ್ಮೆಂಟ್ ಕೂಡ ಬೇಸರವಾಗಿದ್ದು, ಅವರನ್ನು ಈ ಬಾರಿ ತಂಡದಿಂದ ಕೈ ಬಿಡಲಿದೆ ಗುರುಕಿರತ್ ಕಳೆದ ಸೀಸನ್ನಲ್ಲಿ 50 ಲಕ್ಷ ರೂಪಾಯಿಗೆ ಆರ್ಸಿಬಿ ಪಾಲಾಗಿದ್ರು.
ಉಮೇಶ್ ಯಾದವ್ ಅವರನ್ನು ಸಹ ಈ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ತಂಡದಿಂದ ಕೈ ಬಿಡುತ್ತಿದ್ದ ಕಳೆದು ಎರಡು ಮೂರು ಸೀಸನ್ನಲ್ಲಿ ಯಾದವ್ ಕಳಪೆ ಪ್ರದರ್ಶನ ನೀಡಿದ್ದು, ಉಮೇಶ್ ಯಾದವ್ಗೆ ಆರ್ಸಿಬಿ ವರ್ಷಕ್ಕೆ 4.2 ಕೋಟಿ ಹಣವನ್ನು ನೀಡುತ್ತಿದ್ದು, ಉಮೇಶ್ ಅವರನ್ನು ತಂಡದಿಂದ ಕೈ ಬಿಟ್ಟು ಉಮೇಶ್ ಬದಲಿಗೆ ಉತ್ತಮ ಬೌಲರ್ ಬಿಡ್ ಮಾಡೋ ಪ್ಲಾನ್ನಲ್ಲಿ ಆರ್ಸಿಬಿ ಇದೆ..
ತಂಡದಲ್ಲಿ ಕೈಬಿಡಲಿರೋ ಮತ್ತೊಬ್ಬ ಆಟಗಾರ ಅಂದ್ರೆ ಅದು ಕ್ರಿಸ್ ಮೋರಿಸ್ ಆರ್ಸಿಬಿ ಮೋರಿಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು, ಕೊಟ್ಟ ಅವಕಾಶದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಆದ್ರೆ ತಂಡದಲ್ಲಿ ದುಬಾರಿ ಮೊತ್ತಕ್ಕೆ ಮೋರಿಸ್ ಇರೋದ್ರಿಂದ ಅವರನ್ನು ಕೈ ಬಿಟ್ಟು ಮತ್ತೆ ಅವರನ್ನು ಬಿಡ್ಡಿಂಗ್ನಲ್ಲಿ ಖರೀದಿ ಮಾಡೋ ಪ್ಲಾನ್ನಲ್ಲಿ ಆರ್ಸಿಬಿ ಇದೆ.
ಈ ಬಾರಿ ಆರ್ಸಿಬಿ ತಂಡದಲ್ಲಿ ಉತ್ತಮ ಓಪನರ್ ಇದ್ರು ಅವರಿಗೆ ಅವಕಾಶ ಸಿಗದೇ ಇದ್ದ ಆಟಗಾರ ಅಂದ್ರೆ ಅದು ಪಾರ್ಥೀವ್ ಪಟೇಲ್,ಪಾರ್ಥಿವ್ ಈಗಾಗಲೇ ಮುಂಬೈ ತಂಡದ ಟ್ಯಾಲೆಂಟ್ ಹಂಟ್ ಕ್ಯಾಂಪ್ ಸೇರಿಕೊಂಡಿರೋದ್ರಿಂದ 1.7 ಕೋಟಿ ಹಣ ಉಳಿತಾಯವಾಗಲಿದೆ.
ಇನ್ನು ಆಲ್ರೌಂಡರ್ ಕೋಟಾದಲ್ಲಿ ತಂಡದಲ್ಲಿ ಇದ್ದ ಪವನ್ ನೇಗಿ ಕಳೆದ ಸೀಸನ್ನಲ್ಲಿ ಒಂದು ಪಂದ್ಯವನ್ನು ಆಡಲಿಲ್ಲ, ಇನ್ನು ಆರ್ಸಿಬಿ ಕೂಡ ಪವನ್ ನೇಗಿ ವಿಚಾರದಲ್ಲಿ ಒಲವಿಲ್ಲದೇ ಇರೋದ್ರಿಂದ ತಂಡದಿಂದ ಕೈ ಬಿಡಲಿದ್ದು, ಅವರ ಖಾತೆಯಿಂದ 1 ಕೋಟಿ ತಂಡಕ್ಕೆ ಉಳಿಯಲಿದೆ.
ಇನ್ನು ಕೊನೆಯದಾಗಿ ಫಾರಿನ್ ಕೋಟದಲ್ಲಿ ಸ್ಥಾನ ಪಡೆದಿದ್ದ ಇಸೂರು ಉಡಾನ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನವನ್ನು ನೀಡಿಲ್ಲವಾದ್ದರಿಂದ 50 ಲಕ್ಷಕ್ಕೆ ಖರೀದಿ ಮಾಡಿದ್ದ ಆರ್ಸಿಬಿ ಅವರನ್ನು ಕೈ ಬಿಟ್ಟು ಉತ್ತಮ ಬೌಲರ್ ಆಯ್ಕೆ ಮಾಡಿಕೊಳ್ಳುವ ಪ್ಲಾನ್ನಲ್ಲಿ ಇದೆ.
ಈ ಎಲ್ಲಾ ಆಟಗಾರರನ್ನು ಆರ್ಸಿಬಿ ರಿಲೀಸ್ ಮಾಡೋದ್ರಿಂದಾಗಿ ಆರ್ಸಿಬಿಗೆ ಒಟ್ಟು 22.6 ಕೋಟಿ ಖಾತೆಯಲ್ಲಿ ಉಳಿಯಲಿದ್ದು, ಇನ್ನು ಕಳೆದ ಬಾರಿ 4 ಕೋಟಿ ಹಣ ಆರ್ಸಿಬಿ ಬಳಿ ಇದ್ದು ಒಟ್ಟು 27.5 ಕೋಟಿ ಹಣ ಖಾತೆಯಲ್ಲಿ ಇರುವುದರಿಂದ ಈ ಉತ್ತಮ ಮೊತ್ತದಲ್ಲಿ ಆರ್ಸಿಬಿಗೆ ಬೇಕಾಗಿರುವ ಉತ್ತಮ ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
ಹಾಗಾದ್ರೆ ನಿಮ್ಮ ಪ್ರಕಾರ ಆರ್ಸಿಬಿ ಯಾವ ಯಾವ ಆಟಗಾರರನ್ನು ಕೈ ಬಿಡಬೇಕು, ಆರ್ಸಿಬಿ ಬಳಿ ಇರೋ ಇಷ್ಟು ಮೊತ್ತದಲ್ಲಿ ಯಾವೆಲ್ಲಾ ಆಟಗಾರರನ್ನು ಐಪಿಎಲ್ ಮಿನಿ ಆಕ್ಷನ್ನಲ್ಲಿ ಖರೀದಿ ಮಾಡಬಹುದು ಕಾಮೆಂಟ್ ಮಾಡಿ ತಿಳಿಸಿ.