RCB ಬಿಟ್ಟು ಮೂರು ವರ್ಷ ಆದ್ರೂ ಗೇಲ್ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ

ಐಪಿಎಲ್‍ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರೋ ತಂಡ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಪ್ ಗೆಲ್ಲಿ ಬಿಡಲಿ, ಆ ತಂಡದ ಮೇಲಿರೋ ಅಭಿಮಾನ ಮಾತ್ರ ಯಾವತ್ತು ಕಮ್ಮಿಯಾಗಿಲ್ಲ,ಇನ್ನು ಆರ್‍ಸಿಬಿ ತಂಡದಲ್ಲಿ ಆಡೋ ಆಟಗಾರರು ಅಷ್ಟೇ ತಂಡದ ಮೇಲಿನ ಪ್ರೀತಿಯನ್ನ ಆಗಾಗೇ ತೋರಿಸುತ್ತಿರುತ್ತಾರೆ,ಇದೀಗ ಆರ್‍ಸಿಬಿ ತಂಡವನ್ನು ಬಿಟ್ಟು ಮೂರು ವರ್ಷಗಳೇ ಕಳೆದಿದ್ರು, ಆರ್‍ಸಿಬಿ ಮೇಲಿನ ಪ್ರೀತಿ ಮಾತ್ರ ಹೋಗಿಲ್ಲ ಈ ಆಟಗಾರರ ಮತ್ತು ಆಟಗಾರರನ ಮನೆಯವರಿಗೆ. ಹೌದು ಯುನಿವರ್ಸಲ್ ಬಾಸ್ ಅಂತಾನೇ ಕರೆಸಿಕೊಳ್ಳೋ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಮತ್ತು ಅವರ ಕುಟುಂಬದವರಿಗೆ ಈಗಲೂ ಆರ್‍ಸಿಬಿ ಅಂದ್ರೆ ಅಚ್ಚುಮೆಚ್ಚು, ಹೌದು ಕ್ರಿಸ್ ಗೇಲ್ ಆರ್‍ಸಿಬಿ ಪರ ಆಟವಾಡುವಾಗಲಿಂದಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು, ಇದೀಗ ಆರ್‍ಸಿಬಿ ಪರ ಆಡದೇ ಇದ್ದರು ಸಹ ಗೇಲ್ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ ಆರ್‍ಸಿಬಿ ಅಭಿಮಾನಿಗಳಿಗೆ, ಇದೀಗ ಗೇಲ್ ಮತ್ತು ಕುಟುಂಬ ಆರ್‍ಸಿಬಿ ಮೇಲಿನ ತಮ್ಮ ಅಭಿಮಾನವನ್ನು ತೋರಿದ್ದಾರೆ.ತಂಡ ತೊರೆದು ಮೂರು ವರ್ಷಗಳೇ ಆಗಿದ್ದರು, ಆರ್‍ಸಿಬಿ ಮೇಲೆ ಅದೇ ಪ್ರೀತಿ ಇದ್ದು, ಇತ್ತಿಚೆಗೆ ಗೇಲ್ ತಮ್ಮ ತಂದೆಯ ಹುಟ್ಟುಹಬ್ಬವನ್ನು ಆಚರಿಸಿದ್ದು, ಹುಟ್ಟುಹಬ್ಬದ ವೇಳೆ ಗೇಲ್ ತಂದೆ ಆರ್‍ಸಿಬಿ ಕ್ಯಾಪ್ ತೊಟ್ಟು ತಮ್ಮ ಬರ್ತ್‍ಡೇ ಅನ್ನು ಆಚರಿಸಿದ್ರು,ಆ ಮೂಲಕ ಆರ್‍ಸಿಬಿ ಮೇಲಿರೋ ತಮ್ಮ ಅಭಿಮಾನ ಹಾಗೇ ಇದೆ ಅನ್ನೋದನ್ನ ಅಭಿಮಾನಿಗಳಿಗೆ ತೋರಿಸಿದ್ದಾರೆ. ಇನ್ನು ಈಗಾಗಲೇ ಆರ್‍ಸಿಬಿ ಅಭಿಮಾನಿಗಳು ಸಹ ಮುಂದಿನ 2021ರ ಐಪಿಎಲ್‍ನಲ್ಲಿ ಯೂನಿವರ್ಸಲ್ ಬಾಸ್ ಆರ್‍ಸಿಬಿ ಪರ ಕಣಕ್ಕೆ ಇಳಿಯಬೇಕು ಅನ್ನೋ ಮಾತುಗಳನ್ನು ಸಹ ಹೇಳುತ್ತಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ಕ್ರೇಜ್ ದೊಡ್ಡಮಟ್ಟದಲ್ಲಿ ಇದ್ದು, ಅದರಲ್ಲು ಟಿ20 ಹವಾ ಅಂತೂ ಜೋರಾಗೆ ಇದೆ, ಅದರಲ್ಲೂ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನಂತೂ ಊಟ ಹಬ್ಬದ ರೀತಿ ಸೆಲೆಬ್ರೆಟ್ ಮಾಡ್ತಾರೆ, ಇದೀಗ ಟೀಂ ಇಂಡಿಯಾದ ವಾಲ್ ಅಂತಾನೇ ಕರೆಸಿಕೊಳ್ಳುತ್ತಿದ್ದ, ರಾಹುಲ್ ದ್ರಾವಿಡ್ ಟಿ 20 ವಿಚಾರವಾಗಿ ಸಲಹೆಯೊಂದನ್ನು ನೀಡಿದ್ದಾರೆ. ಹೌದು ಪ್ರಪಂಚದಲ್ಲಿ ಕ್ರಿಡಾ ಪಟುಗಳಿಗೆ ಒಲಂಪಿಕ್‍ನಲ್ಲಿ ಭಾಗವಹಿಸಬೇಕು ಅನ್ನೋ ಆಸೆ ಇದ್ದೇ ಇರುತ್ತದೆ, ಇನ್ನು ಒಲಂಪಿಕ್‍ನಲ್ಲಿ ಎಲ್ಲಾ ವಿಧವಾದ ಕ್ರೀಡೆಗೂ ಅವಕಾಶವಿದ್ದು, ಸದ್ಯ ಕ್ರಿಕೆಟ್‍ಗೆ ಒಲಂಪಿಕ್‍ನಲ್ಲಿ ಯಾವುದೇ ಅವಕಾಶವಿರುವುದಿಲ್ಲ, ಇದೀಗ ರಾಹುಲ್ ದ್ರಾವಿಡ್ ಒಲಂಪಿಕ್‍ನಲ್ಲಿ ಟಿ 20 ಕ್ರಿಕೆಟ್ ಸೇರ್ಪಡೆಗೆ ಸಲಹೆಯನ್ನು ನೀಡಿದ್ದಾರೆ. ಟಿ20 ಕ್ರಿಕೆಟ್ ಅನ್ನು ಹಲವಾರು ದೇಶಗಳಲ್ಲಿ ಆಡುತ್ತಿದ್ದಾರೆ. ಹಾಗಾಗಿ ಒಲಂಪಿಕ್‍ನಲ್ಲಿ ಟಿ20 ಕ್ರಿಕೆಟ್ ಅನ್ನು ಸೇರ್ಪಡೆ ಮಾಡಿದ್ರೆ ಅದ್ಭುತವಾಗಿ ಇರುತ್ತದೆ ಅಂತ ಹೇಳಿದ್ದಾರೆ.

ಇನ್ನು ಮೂರನೇ ಕ್ರಿಕೆಟ್ ಸ್ಟೋರಿ ನೋಡೋದಾದ್ರೆ ಆರ್‍ಸಿಬಿಯಲ್ಲಿ ಈ ಬಾರಿ ಭರ್ಜರಿ ಪ್ರದರ್ಶನ ನೀಡಿರೋ ದೇವದತ್ ಪಡಿಕಲ್ ಐಪಿಎಲ್‍ನಲ್ಲಿ ವಿಶ್ವದ ಬೆಸ್ಟ್ ಬೌಲರ್‍ಗಳ ಬೌಲಿಂಗ್‍ಗೆ ಲೀಲಾಜಾಲವಾಗಿ ಬ್ಯಾಟಿಂಗ್ ಆಡಿ ಸೈ ಅನಿಸಿಕೊಂಡಿದ್ರು, ಇದೀಗ ಪಡಿಕಲ್ ಆ ಒಬ್ಬ ಬೌಲರ್‍ಗೆ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು ಅಂತ ಹೇಳಿದ್ದಾರೆ. ಟೂರ್ನಿಯಲ್ಲಿ ರಬಡಾ,ಬೂಮ್ರಾ,ಆರ್ಚರ್,ಅಶ್ವಿನ್ ರಂತಹ ಘಟಾನುಘಟಿ ಬೌಲರ್‍ಗಳನ್ನು ಎದುರಿಸಿದ್ದು, ಆದ್ರೆ ಪಡಿಕಲ್‍ಗೆ ಹೈದರಬಾದ್ ತಂಡದ ಪರವಾಗಿ ಆಡಿದ್ದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ತಮಗೆ ಸವಾಲೆನಿಸಿತ್ತ ಅಂತ ಹೇಳಿದ್ದು, ರಶೀದ್ ಖಾನ್ ಉತ್ತಮ ವೇಗದ ಜೊತೆಯಲ್ಲಿ ಸ್ಪಿನ್ ಕೂಡ ಮಾಡುತ್ತಾರೆ, ಹೀಗಾಗಿ ಅವರು ಮಾಡೋ ಬೌಲ್ ಗುರುತಿಸುವುದು ಕಷ್ಟ ಅಂತ ಪಡಿಕಲ್ ಹೇಳಿದ್ದಾರೆ.

ಕ್ರಿಸ್ ಗೇಲ್ ಅವರ ಆರ್‍ಸಿಬಿ ಪ್ರೀತಿ ಬಗ್ಗೆ ಏನ್ ಹೇಳ್ತೀರಾ, ಒಲಂಪಿಕ್‍ನಲ್ಲಿ ಟಿ20 ಟೂರ್ನಿ ಸೇರ್ಪಡೆ ಆಗಬೇಕಾ, ಪಡಿಕಲ್ ಹೇಳಿದಂತೆ ರಶೀದ್ ಖಾನ್ ಬೌಲಿಂಗ್ ಬಗ್ಗೆ ನಿಮ್ಮ ಅನಿಸಿಕೆ ಏನು ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top