RCB ಫ್ಯಾನ್ಸ್ ಗೆ ಭರ್ಜರಿ ಬಿರಿಯಾನಿ ಆಫರ್

ಈ ಬಾರಿಯ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡ್ತಾ ಇರೋ ಆರ್ ಸಿ ಬಿ..ಉತ್ತಮ ಆಟದೊಂದಿಗೆ ಫ್ಯಾನ್ಸ್ ಗಳಿಗೆ ಮನೋರಂಜನೆ ನೀಡೋ ಜೊತೆಯಲ್ಲಿ ಅಂಕಪಟ್ಟಿಯಲ್ಲೂ ನಾಲ್ಕನೇ ಸ್ಥಾನದೊಂದಿಗೆ ಈ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ.ಇನ್ನು ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಅಭಿಮಾನಿಗಳಿ ಜೋಶ್ ಬೀಡಿರೋ ಆರ್ ಸಿ ಬಿ ತಮ್ಮ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದೆ.ಇನ್ನು ಆರ್ ಸಿ ಬಿ ಅಭಿಮಾನಿಗಳು ಸಹ ತಮ್ಮ ತಂಡ ಉತ್ತಮ ಪ್ರದರದಶನ ನೋಡ್ತಾ ಇರೋದ್ರಿಂದ ಸಖತ್ ಖುಷಿಯಾಗಿದ್ದು ಇದೀಗ ಆರ್ ಸಿ ಬಿ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ನಲ್ಲಿ ಭರ್ಜರಿ ಆಫರ್ ನೀಡಿದ್ದಾರೆ.ಅದರಲ್ಲೂ ಕರ್ನಾಟಕದ ಆರ್ ಸಿ ಬಿ ಅಭಿಮಾನಿಗಳಿ ಇದು ಭರ್ಜರಿ ಆಫರ್ ಆಗಿದ್ದು, ಈ ಆಫರ್ ಅನ್ನು ನೀವು ಸಹ ತೆಗೆದುಕೊಳ್ಳ ಬಹುದು ಹೌದು ಮೈಸೂರಿನ ನಾಟಿ ಹಟ್ ಹೋಟೆಲ್ ನಲ್ಲಿ ಮಾಲೀಕ ಸ್ವರೂಪ್ ಭರ್ಜರಿ ಆಫರ್ ನೀಡಿದ್ದು, ಆರ್ ಸಿ ಬಿ ಮ್ಯಾಚ್ ಇರೋ ದಿನ ನೀವೇನಾದ್ರು ಈ ಹೋಟೆಲ್ ಗೆ ಹೋದ್ರೆ 200 ರೂಪಾಯಿ ಬಿರಿಯಾನಿ ಕೇವಲ 49ರೂಪಾಯಿಗೆ ಸಿಗಲಿದೆ. ಈ ಆಫರ್ ಕೇವಲ ಆರ್ ಸಿ ಬಿ ಮ್ಯಾಚ್ ವೇಳೆ ಇದ್ದು ಸಂಜೆ 6 ಗಂಟೆಯಿಂದ ರಾತ್ರಿ 10 ರ ವರೆಗೆ ಈ ಆಫರ್ ಇರಲಿದೆ.ಇನ್ನು ಪ್ರತಿ ಆರ್ ಸಿ ಬಿ ಮ್ಯಾಚ್ ವೇಳೆ ಇರಲಿದ್ದು .ಆರ್ ಸಿ ಬಿ ಫೈನಲ್ ತಲುಪಿದರೆ ಅಲ್ಲಿಯವರೆಗೂ ಈ ಆಫರ್ ಇರಲಿ..ಹಾಗಾದ್ರೆ ನೀವು ಈ ಹೋಟೆಲ್ ಭೇಟಿ ನೀಡಿ..ಈ ಹೋಟೆಲ್ ಫುಲ್ ಆರ್ ಸಿ ಬಿ ಮಯವಾಗಿಯೂ ಇದೆ..ಈ ಆಫರ್ ಬಗ್ಗೆ ನೀವ್ ಏನ್ ಹೇಳ್ತಿರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top