RCB ಪ್ಲೇ ಆಫ್ ಗೆ ಇಲ್ಲಿದೆ ದೊಡ್ಡ ಲೆಕ್ಕಾಚಾರ

IPL ನಲ್ಲಿ ಆರ್ ಸಿ ಬಿ ನಿನ್ನೆ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋತ ನಂತರ ಇದೀಗ ಆರ್ ಸಿ ಬಿ ಪ್ಲೇ ಆಫ್ ಗೆ ಎಂಟ್ರಿ ನೀಡಲಿದ್ಯಾ ಇಲ್ವಾ ಅನ್ನೋ ಲೆಕ್ಕಾಚರಗಳು ಶುರುವಾಗ ತೊಡಗಿದೆ. ಈಗಾಗಲೇ ಸತತ ಸೋಲಿನಿಂದ ಪ್ಲೇ ಆಫ್ ಹಾದಿಯನ್ನು ಕಠಿಣ‌ಮಾಡಿಕೊಂಡಿರೋ ಆರ್ ಸಿ ಬಿ ನಾಳೆ ನಡೆಯಲಿರೋ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಲೆಕ್ಕಾಚಾರದಲ್ಲಿ ಇದೆ. ಇನ್ನು ಆರ್ ಸಿ ಬಿ ತಾನು ಗೆಲ್ಲು ಲೆಕ್ಕಾಚಾರದ ಜೊತೆಯಲ್ಲಿ ಉಳಿದ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರವನ್ನು ಹಾಕಬೇಕಾಗುತ್ತದೆ. ಈಗಾಗಲೇ ಮುಂಬೈ ತಂಡ ಆಡಿರೋ 13 ದ್ಯದಲ್ಲಿ 9 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಪ್ಲೇ ಆಫ್ ಗೆ ಈಗಾಗಲೇ ಎಂಟ್ರಿ ಕೊಟ್ಟಿದೆ.ಇನ್ನು ಚೆನ್ನೈ ಟೂರ್ನಿಯಿಂದ ಈಗಾಲೇ ಹೊರ ಬಿದ್ದಿದ್ದು,ಉಳಿದ ಆರು ತಂಡಗಳು ಪ್ಲೇ ಆಫ್ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದೆ. ಸದ್ಯ ಆರ್ ಸಿ ಬಿ ಅಂಕಪಟ್ಟಿಯಲ್ಲಿ ಎರನೇ ಸ್ಥಾನದಲ್ಲಿದ್ದು,ಮೂರನೇ ಸ್ಥಾನದಲ್ಲಿ ಡೆಲ್ಲಿ,ನಾಲ್ಕರಲ್ಲಿ ಹೈದರಬಾದ್ ,ಐದರಲ್ಲಿ ಪಂಜಾಬ್ ತಂಡವಿದೆ. ಈಗಾಗಲೇ ಪ್ಲೇ ಆಫ್ ಗೆ ಯಾವ ತಂಡ ಎಂಟ್ರಿಕೊಡಲಿದೆ ಅನ್ನೋದು ಹೇಳೋಕೆ ಕಷ್ಟವಾಗಿದ್ದು. ಇದೀಗ ಉಳಿದ ಪಂದ್ಯಗಳಲ್ಲಿ ಎಲ್ಲಾ ತಂಡಗಳು ಗೆದ್ದು ಪ್ಲೇ ಆಫ್ ಗೆ ಎಂಟ್ರಿಕೊಡೋದಕ್ಕೆ ತಯಾರಿ ನಡೆಸುತ್ತಿದೆ. ಇತ್ತ ಆರ್ ಸಿ ಬಿ ಕೂಡ ಲೆಕ್ಕಾಚಾರಗಳನ್ನು ಹಾಕುತ್ತಿದ್ದು,ಇಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್, ಮುಂಬೈ ವಿರುದ್ಧ ಹೈದರಬಾದ್ ಸೋತರೇ ಮಾತ್ರ ಆರ್ ಸಿ ಬಿ ಪ್ಲೇ ಆಫ್ ಹೋಗಲು ಅವಕಾಶವಿದ್ದು,ಈ ಎರಡು ತಂಡಗಳು ಗೆಲುವನ್ನು ಸಾಧಿಸಿದ್ದೇ ಆದಲ್ಲಿ ಆರ್ ಸಿಬಿ ನಾಳಿನ ಪಂದ್ಯದಲ್ಲಿ ಗೆಲುವನ್ನು ಸಾಧಿಸಲೇ ಬೇಕಾದ ಪರಿಸ್ಥಿತಿ ಉಂಟಾಗಲಿದೆ.ಇನ್ನು ಪಂಜಾವ್ ಮತ್ತು ಹೈದರಬಾದ್ ತಂಡ ಗೆದ್ದರೇ ಇತ್ತ ಡೆಲ್ಲಿ ತಂಡಕ್ಕೂ ಕೂಡ ಗೆಲ್ಲುವ ಅನಿವಾರ್ಯತೆ ಇದ್ದರೆ,ಈ ಎರಡು ತಂಡಗಳು ಅಕಸ್ಮಾತ್ ಸೋತರೆ ಇಬ್ಬರಲಿ ಯಾರೇ ಗೆದ್ದರು ಸಹ ಎರಡು ತಂಡಗಳು ಪ್ಲೇ ಆಫ್ ಗೆ ಎಂಟ್ರಿಕೊಡಲಿದೆ. ಇನ್ನು ಅಂಕಪಟ್ಟಿಯಲ್ಲಿ ಕೊನೆಯಲ್ಲಿ ಇರೋ ಕೆಕೆಆರ್ ಮತ್ತು ಆರ್ ಆರ್ ದೊಡ್ಡ ಅಂತರದಲ್ಲಿ ಗೆಲುವನ್ನು ಸಾಧಿಸಿ ಪ್ಲಸ್ ರನ್ ರೇಟ್ ಪಡೆದುಕೊಂಡರೇ ಪ್ಲೇ ಆಫ್ ಹಂತಕ್ಕೆ ತಲುಪಬಹುದು.ಒಟ್ಟಿನಲ್ಲಿ ಒಂದು ನಡೆಯಲಿರೋ ಎರಡು ತಂಡಗಳ ಫಲಿತಾಂಶದ ಮೇಲೆ ರನ್ ರೇಟ್ ಲೆಕ್ಕಾಚಾರಗಳು ಶುರುವಾಗಲಿದೆ.ಇನ್ನು ಆರ್ ಸಿ ಬಿ‌ ಕೂಡ ಹೊಸ ಲೆಕ್ಕಾಚಾರವನ್ನು ಹಾಕದೇ ನಾಳಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವನ್ನು ಸಾಧಿಸೋ‌ ಮೂಲಕ ಪ್ಲೇ ಆಫ್ ಗೆ ಎಂಟ್ರಿಕೊಡೋ ಲೆಕ್ಕಾಚಾರವನ್ನು ಹಾಕಬೇಕಾಗಿದೆ.

ಹಾಗಾದ್ರೆ ಆರ್ ಸಿ ಬಿ ಈ ಬಾರಿ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಎಂಟ್ರಿಕೊಡಲಿದ್ಯಾ..ನಿಮ್ಮ ಪ್ರಕಾರ ಮುಂಬೈ ಬಿಟ್ಟು ಉಳಿದ ಯಾವ‌ ಮೂರು ತಂಡಗಳು ಪ್ಲೇ ಆಫ್ ಗೆ ಎಂಟ್ರಿ ಕೊಡಲಿದೆ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top