RCB ನನ್ನ ನೆಚ್ಚಿನ ತಂಡ ಎಂದ ಕನ್ನಡಿಗ ಕೆಎಲ್ ರಾಹುಲ್..

ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್‍ನಲ್ಲಿರೋ ಪಂಜಾಬ್ ತಂಡದ ನಾಯಕ ಐಪಿಎಲ್ ಟಾಪ್ ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಆರೆಂಜ್ ಕ್ಯಾಪ್ ತನ್ನ ಬಳಿ ಇರಿಸಿಕೊಂಡಿದ್ದಾರೆ. ಒಂದು ಶತಕ ಸೇರಿದಂತೆ 540 ರನ್‍ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಆರ್‍ಸಿಬಿ ವಿರುದ್ಧದ ಶತಕ ಸಿಡಿಸೋ ಮೂಲಕ ಈ ಐಪಿಎಲ್‍ನಲ್ಲಿ ಮೊದ ಶತಕ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ರು, ಉತ್ತಮ ಬ್ಯಾಟಿಂಗ್ ಮತ್ತು ಜವಾಬ್ದಾರಿಯು ನಾಯಕ ಪ್ರದರ್ಶನ ನೀಡ್ತಾ ಇರೋ ಕೆಎಲ್ ರಾಹುಲ್ ಭವಿಷ್ಯದ ಟಿಂ ಇಂಡಿಯಾದ ಕ್ಯಾಪ್ಟನ್ ಅಂತಾನೇ ಹೇಳಲಾಗುತ್ತಿದೆ. ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡ ಪ್ಲೇ ಆಫ್‍ಗಾಗಿ ಸಖತ್ ಫೈಟ್ ಕೊಡ್ತಾ ಇದೆ.

ಇದೀಗ ಕೆಎಲ್ ರಾಹುಲ್ ಐಪಿಎಲ್‍ನಲ್ಲಿ ತಮ್ಮ ಅನಿಸಿಕೆಯೊಂದನ್ನು ಹೇಳಿಕೊಂಡಿದ್ದಾರೆ. ಹೌದು ಕೆಎಲ್ ರಾಹುಲ್‍ಗೆ ಐಪಿಎಲ್‍ನಲ್ಲಿ ನೆಚ್ಚಿನ ತಂಡ ಅಂದ್ರೆ ಅದು ಆರ್‍ಸಿಬಿ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಆರ್‍ಸಿಬಿ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದಿರೋ ರಾಹುಲ್ ತಂಡ ಇನ್ನು ಈ ಬಾರಿಯ ಐಪಿಎಲ್ ರಾಹುಲ್ ಶತಕ ಗಳಿಸಿದ್ದು ಕೂಡ ಆರ್‍ಸಿಬಿ ತಂಡದ ಎದುರೇ ಆಗಿದೆ.ಇನ್ನು ರಾಹುಲ್ ಶತಕ ಸಿಡಿಸಿದ ವೇಳೆ ಹೆಚ್ಚೇನೂ ಸಂಭ್ರಮಿಸಿರಲಿಲ್ಲ, ಇದೀಗ ಶತಕ ಸಿಡಿಸಿದಾಗ ಯಾಕೆ ಹೆಚ್ಚು ಸಂಭ್ರಮಿಸಲಿಲ್ಲ ಅನ್ನೋದನ್ನ ರಿವೀಲ್ ಮಾಡಿದ್ದಾರೆ.` ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್‍ನಲ್ಲಿ ಆರ್‍ಸಿಬಿ ವಿರುದ್ಧದ ಶತಕ ನನ್ನ ನೆಚ್ಚಿನ ಇನ್ನಿಂಗ್ಸ್, ನಾನು ಶತಕ ಬಾರಿಸಿ ಸಂಭ್ರಮಿಸಲಿಲ್ಲ, ಕಾರಣ ಇಂದಿನ ನನ್ನ ಯಶಸ್ಸಿನಲ್ಲಿ ಆರ್‍ಸಿಬಿ ಪಾಲು ಸಾಕಷ್ಟಿದೆ. ಆರ್‍ಸಿಬಿ ನನ್ನ ನೆಚ್ಚಿನ ತಂಡ ಅಂತ ಹೇಳಿಕೊಂಡಿದ್ದಾರೆ.

ಇನ್ನು ಕೆಎಲ್ ರಾಹುಲ್ ಆರ್‍ಸಿಬಿ ಪರವಾಗಿ ಐಪಿಎಲ್‍ನಲ್ಲಿ ಆಡಿದ್ದು 2013ರಲ್ಲಿ ಆರ್‍ಸಿಬಿ ಪರವಾಗಿ ಐಪಿಎಲ್‍ನಲ್ಲಿ ಪಾದಾರ್ಪಣೆಯನ್ನು ಮಾಡಿದ್ರು. 2016ರಲ್ಲೂ ಸಹ ಆರ್‍ಸಿಬಿ ಪರ ಆಡಿದ್ದ ಕೆಎಲ್ ರಾಹುಲ್ ಇಲ್ಲಿಂದಲೇ ತಾವೊಬ್ಬ ಅದ್ಭುತ ಕ್ರಿಕೆಟ್ ಪ್ಲೇಯರ್ ಅನ್ನೋದನ್ನ ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು, ಹೀಗಾಗಿ ಕೆಎಲ್ ರಾಹುಲ್‍ಗೆ ಆರ್‍ಸಿಬಿ ನೆಚ್ಚಿನ ತಂಡವಾಗಿದ್ದು, ತಾವು ಆರ್‍ಸಿಬಿ ವಿರುದ್ಧ ಶತಕ ಸಿಡಿಸಿದಾಗಲು ಸಹ ಹೆಚ್ಚು ಸಂಭ್ರಮಿಸದೆ ಇರಲು ಕಾರಣ ಅನ್ನೋದನ್ನ ರಾಹುಲ್ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top