RCB ತಂಡಕ್ಕೆ ಬರಲಿದ್ದಾರೆ ಈ ಮೂವರು ವಿದೇಶಿ ಆಟಗಾರರು.

ಐಪಿಎಲ್ 2020ಯಲ್ಲಿ ಕಪ್ ಗೆಲ್ಲದೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಆರ್‍ಸಿಬಿ ತಂಡ ಮುಂದಿನ ಐಪಿಎಲ್‍ಗಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ತಾ ಇದೆ. ಐಪಿಎಲ್ ಮುಗಿಯುತ್ತಿದ್ದಂತೆ ಮೈಕ್ ಹಸನ್ ಮತ್ತು ಆರ್‍ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಮುಂದಿನ ಐಪಿಎಲ್‍ಗಾಗಿ ಈಗಿನಿಂದಲೇ ತಯಾರಿಯನ್ನು ನಡೆಸುತ್ತೇವೆ ಅಂತಾನೂ ಹೇಳಿದ್ರು, ಇನ್ನು 2021ರ ಐಪಿಎಲ್ ಶುರುವಾಗಲು ಇನ್ನು ಕೇವಲ 4 ತಿಂಗಳುಗಳಿದ್ದು, ಇದೀಗ ಎಲ್ಲಾ ತಂಡಗಳು ಆಟಗಾರರ ವರ್ಗಾವಣೆಯಲ್ಲಿ ಉತ್ಸುಕತೆಯನ್ನು ತೋರುತ್ತಿದೆ. ಇನ್ನು ಈ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ನಡೆಯಲಿದೆ, ಹೀಗಾಗಿ ಆರ್‍ಸಿಬಿ ಪ್ರಾಂಚೈಸಿಗಳು ಇದೀಗ ಈ ಮೂರು ವಿದೇಶಿ ಆಟಗಾರರ ವರ್ಗಾವಣೆ ಮೇಲೆ ಕಣ್ಣಿಟ್ಟಿದೆ. ಹಾಗಾದ್ರೆ ಆ ಮೂರು ವಿದೇಶಿ ಆಟಗಾರರು ಯಾರು ಅನ್ನೋದ್ರ ಡಿಟೈಲ್ಸ್ ನಾವ್ ಇವತ್ತು ನೋಡೋಣ.

ಮೊದಲನೆಯದಾಗಿ ಆಸ್ಟ್ರೇಲಿಯಾದ ಆಟಗಾರ ಕ್ರಿಸ್ ಲೀನ್, ಹೌದು 13ನೇ ಆವೃತ್ತಿಯ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಇದ್ದ ಕ್ರಿಸ್ ಲೀಸ್ ಈ ಬಾರಿಯ ಐಪಿಎಲ್‍ನಲ್ಲಿ ಒಂದು ಪಂದ್ಯವನ್ನು ಸಹ ಮುಂಬೈ ಪರ ಆಡಲು ಕಣಕ್ಕೆ ಇಳಿಯಲಿಲ್ಲ, ಮುಂಬೈ ಇಂಡಿಯನ್ಸ್ ತಂಡದ ಪ್ರಾರಂಭಿಕ ಬ್ಯಾಟಿಂಗ್ ಲೈನಪ್ ಸ್ಟ್ರಾಂಗ್ ಇದ್ದುದ್ದರಿಂದ ಕ್ರಿಸ್ ಲೀನ್‍ಗೆ ಆಡಲು ಅವಕಾಶಗಳು ಸಿಗಲಿಲ್ಲ, ಹೀಗಾಗಿ ಆರ್‍ಸಿಬಿ ಇದೀಗ ಕ್ರಿನ್ ಲೀನ್ ಮೇಲೆ ಕಣ್ಣಿಟ್ಟಿದೆ. ಈ ಬಾರಿಯ ಐಪಿಎಲ್‍ನಲ್ಲಿ ಆರ್‍ಸಿಬಿಯಲ್ಲಿ ಪಡಿಕಲ್ ಮತ್ತು ಫಿಂಚ್ ಜೋಡಿ ಅಷ್ಟೇನೂ ಕಮಾಲ್ ಮಾಡದ ಕಾರಣ ಆರಂಭಿಕ ಆಟಗಾರನ ಅವಶ್ಯಕತೆ ಇರೋದ್ರಿಂದ ಕ್ರಿಸ್ ಲೀನ್ ಮೇಲೆ ಇದೀಗ ಆರ್‍ಸಿಬಿ ಮುಂದಿನ ಐಪಿಎಲ್‍ಗಾಗಿ ಕಣ್ಣಿಟ್ಟಿದೆ.

ಇನ್ನು ಎರಡನೇ ಆಟಗಾರನನ್ನು ನೋಡೋದಾದ್ರೆ ಅದು ಡೇವಿಡ್ ಮಿಲ್ಲರ್, ಸೌತ್ ಆಫ್ರಿಕಾದ ಎಡಗೈ ಬ್ಯಾಟ್ಸಮನ್ ಆದ ಮಿಲ್ಲರ್ ಒಬ್ಬ ಬೆಸ್ಟ್ ಫಿನಿಷರ್ ಬ್ಯಾಟ್ಸಮನ್ ಈ ಬಾರಿಯ ಐಪಿಎಲ್‍ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದಲ್ಲಿದ್ದ ಮಿಲ್ಲರ್ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ರು, 75 ಲಕ್ಷಕ್ಕೆ ರಾಜಸ್ತಾನ್ ರಾಯಲ್ಸ್ ತಂಡ ಖರೀದಿಸಿದ್ದು, ಕೇವಲ ಒಂದು ಪಂದ್ಯ ಆಡಲು ಮಾತ್ರ ಅವಕಾಶ ನೀಡಿತ್ತು, ಆರ್‍ಸಿಬಿ ಸದ್ಯ ಬೆಸ್ಟ್ ಫಿನಿಶಿಂಗ್ ಆಟಗಾರನ ಅವಶ್ಯಕತೆ ಇದ್ದು, ಇದೀಗ ಡೇವಿಡ್ ಮಿಲ್ಲರ್ ಮೇಲೆ ಆರ್‍ಸಿಬಿ ಕಣ್ಣಿಟ್ಟಿದೆ.

ಇನ್ನು ಮೂರನೇ ಆಟಗಾರ ನೋಡೋದಾದ್ರೆ, ಆರ್‍ಸಿಬಿಗೆ ಮೊದಲಿನಿಂದಲೂ ಕಾಡುತ್ತಿರೋ ಸಮಸ್ಯೆ ಅಂದ್ರೆ ಅದು ಬೌಲಿಂಗ್ ವಿಭಾಗದಲ್ಲಿ, ಪ್ರತಿ ಬಾರಿ ಉತ್ತಮ ಬೌಲರ್ ಆಯ್ಕೆಯಲ್ಲಿ ಆರ್‍ಸಿಬಿ ಎಡವುತ್ತಿದ್ದು, ದೀಗ ಆರ್‍ಸಿಬಿ ವಿಂಡಿಸ್‍ನ ವೇಗದ ಬೌಲರ್ ಓಶಾನೆ ಥಾಮಸ್ ಮೇಲೆ ಕಣ್ಣಿಟ್ಟಿದೆ, ಸದ್ಯ ರಾಜಸ್ತಾನ್ ರಾಯಲ್ಸ್ ಪರ ಆಡುತ್ತಿರೋ ಈ ಬೌಲರ್ ಈ ಬಾರಿಯ ಐಪಿಎಲ್‍ನಲ್ಲಿ ಒಂದು ಪಂದ್ಯವನ್ನು ಆಡಿರಲಿಲ್ಲ, ಎರಡು ಅವೃತ್ತಿಯಿಂದ 4 ಪಂದ್ಯಗಳನಷ್ಟೇ ಆಡಿದ್ದು, ಉತ್ತಮ ಫಾರ್ಮ್‍ನಲ್ಲಿ ಇದ್ದರೂ ತಂಡದಲ್ಲಿ ಆಡುವ ಅವಕಾಶಗಳು ಸಿಕ್ಕಿರಲಿಲ್ಲ,ಇದೀಗ ಆರ್‍ಸಿಬಿ ಬೌಲಿಂಗ್ ವಿಭಾಗವನ್ನು ಸ್ಟ್ರಾಂಗ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಓಶಾನೆ ಥಾಮಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ಲಾನ್‍ನಲ್ಲಿ ಇದೆ. ಇನ್ನು ತಂಡದಲ್ಲಿ ದುಬಾರಿ ಬೌಲರ್‍ಗಳಾದ ಉಮೇಶ್ ಯಾದವ್ ಮತ್ತು ಡೇಲ್ ಸ್ಟೇನ್ ಅವರನ್ನು ಆರ್‍ಸಿಬಿ ತಂಡದಿಂದ ಕೈ ಬಿಡಲು ಚಿಂತನೆಯನ್ನು ನಡೆಸುತ್ತಿದೆ.

ಹಾಗಾದ್ರೆ ನಿಮ್ಮ ಪ್ರಕಾರ ಈ ಮೂವರು ಆಟಗಾರರು ಆರ್‍ಸಿಬಿ ತಂಡಕ್ಕೆ ಬಂದ್ರೆ ತಂಡ ಸ್ಟ್ರಾಂಗ್ ಆಗಲಿದ್ಯಾ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top