RCB ಟೀಂನಲ್ಲಿರೋ ಈ ಹುಡುಗಿ ಯಾರು..?

ಐಪಿಎಲ್ ಹವಾ ಜೋರಾಗಿದ್ದು, ಕ್ರಿಕೆಟ್ ಪ್ರಿಯರು ತಮ್ಮ ತಮ್ಮ ಟೀಂಗಳು ಗೆಲ್ಲಬೇಕು ಅಂತ ಸಪೋರ್ಟ್ ಮಾಡ್ತಿದ್ದಾರೆ. ಅದ್ರಲ್ಲೂ ಆರ್‍ಸಿಬಿ ತಂಡ ಈ ಬಾರಿಯಾದ್ರು ಕಪ್ ಗೆಲ್‍ಬೇಕು ಅಂತ ಅಭಿಮಾನಿಗಳು ತುಂಬಾನೇ ಆಸೆ ಇಟ್ಕೊಂಡಿದ್ದಾರೆ. ಈಗಾಗ್ಲೇ ಆಡಿರೋ ಮೂರು ಮ್ಯಾಚ್‍ನಲ್ಲಿ ಎರಡು ಮ್ಯಾಚ್ ಗೆದ್ದು ಅಭಿಮಾನಿಗಳಿಗೆ ಭರವಸೆ ಮೂಡಿಸಿದ್ದಾರೆ. ಹೀಗಿರಬೇಕಾದ್ರೆ ಆರ್‍ಸಿಬಿ ತಂಡದಲ್ಲಿರೋ ಒಬ್ಬ ವ್ಯಕ್ತಿ ಬಗ್ಗೆ ಇದೀಗ ಎಲ್ಲರ ತಲೆ ಕೆಡಿಸಿದೆ, ಹೌದು ಆರ್‍ಸಿಬಿ ಪ್ರತಿ ಮ್ಯಾಚ್ ಗೆದ್ದಾಗಲು ಈ ಬಾರಿಯ ಐಪಿಎಲ್‍ನಲ್ಲಿ ಆ ವ್ಯಕ್ತಿಯಿಂದ ಸೆಲೆಬ್ರೆಷನ್ ಜೋರಾಗೆ ಇರುತ್ತೆ..

ಇನ್ನು ಆ ವ್ಯಕ್ತಿ ಆರ್‍ಸಿಬಿ ತಂಡವನ್ನು ಹುರುದುಂಬಿಸುವುದನ್ನು ನೋಡಿ ಯಾರು ಇದು ಅನ್ನೋ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಇನ್ನು ಆ ವ್ಯಕ್ತಿ ಮಹಿಳೆ ಆಗಿರೋದ್ರಿಂದಾಗಿ ಕುತೂಹಲ ಹೆಚ್ಚಾಗಲು ಕಾರಣವಾಗಿದೆ. ಹೌದು ಪ್ರತಿ ಮ್ಯಾಚ್ ಗೆದ್ದಾಗಲು ಆರ್‍ಸಿಬಿ ತಂಡದ ಜೊತೆ ಸೇರಿ ಸೆಲೆಬ್ರೆಷನ್ ಮಾಡುತ್ತಿರೋ ಆ ಹುಡಿಗಿ ಯಾರು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಆಕೆ ಹೆಸರು ನವನೀತ ಗೌತಮ್, ಐಪಿಎಲ್‍ನಲ್ಲಿ ಮೊದಲ ಮಹಿಳಾ ಸಪೋರ್ಟಿಂಗ್ ಸ್ಟಾಫ್ ಆಗಿದ್ದು, ಈಕೆ ಆರ್‍ಸಿಬಿ ತಂಡದಲ್ಲಿ ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡ್ತಾ ಇದ್ದು, ಇವರು ಆರ್‍ಸಿಬಿ ತಂಡದಲ್ಲಿ ಆಟಗಾರರ ಫಿಟ್‍ನೆಸ್‍ಗಾಗಿ ಕೆಲಸ ಮಾಡ್ತಿದ್ದಾರೆ.

ಇವರ ಸಲಹೆ ಮೇರೆಗೆ ಆಟಗಾರರು ಫಿಟ್‍ನೆಸ್ ಕಾಯ್ದುಕೊಳ್ತಾ ಇದ್ದು, ಈ ಹಿಂದೆ ಇವರು ಏಷಿಯಾ ಕಪ್ ವೇಳೆ ಮಹಿಳಾ ಬಾಸ್ಕೆಟ್ ಬಾಲ್ ಟೀಂಗೆ ಮಸಾಜ್ ಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ರು, ಇನ್ನು ಟೊರೆಂಟೋ ಟಿ20 ಲೀಗ್‍ನಲ್ಲೂ ಇವರು ಕಾರ್ಯನಿರ್ವಹಿಸಿದ್ದು, ಈ ಹಿಂದೆ ಐಪಿಎಲ್ ಸಮಯದಲ್ಲಿ ನವನೀತ ಆರ್‍ಸಿಬಿ ಅಭಿಮಾನಿಯಾಗಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ರು.

ಮಸಾಜ್ ಥೆರಪಿಸ್ಟ್ ಕಾರ್ಯನಿರ್ವಹಿಸುತ್ತಿರೋ ನವನೀತ ಗೌತಮ್‍ಗೆ ಆರ್‍ಸಿಬಿಯಲ್ಲಿ ವಿರಾಟ್ ಕೊಹ್ಲಿ ಫೇವರೆಟ್ ಪ್ಲೇಯರ್ ಕೂಡ ಹೌದು. ಇನ್ನು ನವನೀತ ಗೌತಮ್ ಒಬ್ಬ ಕ್ರಿಕೆಟ್ ಪ್ಲೇಯರ್ ಆಗಬೇಕು ಅನ್ನೋದು ತಂದೆ ಆಸೆಯಾಗಿತ್ತು, ಆದ್ರೆ ಆ ಆಸೆ ನೆರವೇರಲಿಲ್ಲ, ಆದ್ರೆ ಇದೀಗ ಕ್ರಿಕೆಟ್ ಟೀಂನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡ್ತಾ ಇರೋದು ತುಂಬಾನೇ ಖುಷಿ ನೀಡಿದೆ ಎಂದು ನವನೀತ ಹೇಳಿಕೊಂಡಿದ್ದಾರೆ. ಸದ್ಯ ಆರ್‍ಸಿಬಿ ತಂಡದ ಡಕೌಟ್‍ನಲ್ಲಿ ಮಿಂಚ್ತಾ ಇರೋ ನವನೀತ ಗೌತಮ್ ಆರ್‍ಸಿಬಿ ಅಭಿಮಾನಿಗಳ ಹಾಟ್‍ಫೇವರಿಟ್ ಕೂಡ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top