RCB ಚೆನ್ನೈ ವಿರುದ್ಧ ಸೋಲೋಕೆ ಕಾರಣ ಇದೇ ಅಂತೆ..

ನಿನ್ನೆ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಚೆನ್ನೈ ವಿರುದ್ಧ ಸೋಲನ್ನು ಅನುಭವಿಸೋ ಮೂಲಕ ಸುಲಭವಾಗಿ ಪ್ಲೇ ಆಫ್ ಗೆ ಹೋಗುವ ಹಾದಿಯಲ್ಲಿ ಕೊಂಚ ಮಟ್ಟಿನ ಹಿನ್ನಡೆಯನ್ನು ಸಾಧಿಸಿದೆ.ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇರೋ ಆರ್ ಸಿ ಬಿ ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದು, ನಿನ್ನೆ ಸೋಲಿನಿಂದ ತಂಡ ಒಂದಿಷ್ಟು ಪಾಠ ಕಲಿಯಬೇಕಾಗಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ ಸಿ ಬಿ ಗೋ ಗ್ರೀನ್ ಕಾನ್ಸ್ಪೆಪ್ಟ್ ಅಡಿ ಹಸಿರು ಜೆರ್ಸಿ ಹಾಕಿ ಕಣಕ್ಕೆ ಇಳಿದಿತ್ತು.ಪ್ರತಿ ಸೀಸನ್ ನಲ್ಲೂ ಹಸಿರು ಜೆರ್ಸಿ ಹಾಕಿ ಗೋ ಗ್ರೀನ್ ಕಾನ್ಸೆಪ್ಟ್ ನಲ್ಲಿ ಕಣಕ್ಕಿಳಿಯೋ ತಂಡಕ್ಕೆ ಹಸಿರು ಬಣ್ಣ ಅಷ್ಟೇನೂ ಯಶಸ್ಸು ತಂದುಕೊಟ್ಟಿಲ್ಲ ಅನ್ನೋ ಮಾತುಗಳನ್ನು ಇದೀಗ ನಿನ್ನೆಯ ಪಂದ್ಯ ಆದ ಮೇಲೆ ಆರ್ ಸಿ ಬಿ ಅಭಿಮಾನಿಗಳು ಹೇಳುತ್ತಿದ್ದಾರೆ. ಕಾಕತಾಳೀಯ ಎಂಬಂತೆ ಆರ್ ಸಿ ಬಿ ಪಂದ್ಯದ ರಿಸಲ್ಟ್ ಕೂಡ ಅದಕ್ಕೆ ಪೂರಕವಾಗೇ ಇದೆ.ಪ್ರತಿ ವರ್ಷವೂ ಗೋ ಗ್ರೀನ್ ಅಭಿಮಾಯನಕ್ಕೆ ಸಪೋರ್ಟ್ ಮಾಡಿಕೊಂಡು ಬರುತ್ತಿರೋ ಆರ್ ಸಿ ಬಿ ಈ ಒಂದು ಪದ್ಧತಿಯನ್ನು 2011ರಿಂದ ನಡೆಸಿಕೊಂಡು ಬರ್ತಾ ಇದೆ. ಆದ್ರೆ ಹಸಿರು ಬಣ್ಣದ ಜೆರ್ಸಿ ತೊಟ್ಟಾಗಲೆಲ್ಲಾ ಆರ್ ಸಿ ಬಿ ಇತಿಹಾಸ ಬಿನ್ನವಾಗಿದೆ.ಹೌದು ಇದುವರೆಗೂ ಆರ್ ಸಿ ಬಿ ನಿನ್ನೆಯ ಪಂದ್ಯವೂ ಸೇರಿದಂತೆ ಒಟ್ಟು ಒಂಭತ್ತು ಸೀಸನ್ ನಲ್ಲಿ ಹಸಿರು ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದಿದೆ. ಆದ್ರೆ ರಿಸಲ್ಟ್ ವಿಚಾರದಲ್ಲಿ ಆರ್ ಸಿ ಬಿ ಹಿನ್ನಡೆ ಆಗಿದೆ. ಈ ಜರ್ಸಿಯಲ್ಲಿ 2011 ಮತ್ತು 2016ರ ಸೀಸನ್ ನಲ್ಲಿ ಮಾತ್ರ ಆರ್ ಸಿ ಬಿ ಗೆಲುವನ್ನು ಸಾಧಿಸಿದ್ದು, ಉಳಿದ ಎಲ್ಲಾ ಸೀಸನ್ ನಲ್ಲೂ ಸೋಲನ್ನು ಅನುಭವಿಸಿದೆ.ಇನ್ನು ಕಾಕತಾಳೀಯ ಎಂಬಂತೆ ಆರ್ ಸಿ ಬಿ 2011 ಮತ್ತು 2016ರಲ್ಲಿ ಐಪಿಎಲ್ ನಲ್ಲಿ ಫೈನಲ್ ಪ್ರವೇಶ ಕೂಡ ಮಾಡಿದೆ.ಈ ಎಲ್ಲಾ ಲೆಕ್ಕಾಚಾರವನ್ನು ನೋಡಿದ ಆರ್ ಸಿ ಬಿ ಅಭಿಮಾನಿಗಳು ಹಸಿರು ಜೆರ್ಸಿ ವಿಚಾರವಾಗಿ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ನಿಮ್ಮ ಪ್ರಕಾರ ಒಂದೊಳ್ಳೇ ಪ್ರಯತ್ನಕ್ಕಾಗಿ ಹಸಿರು ಜೆರ್ಸಿ ಕಾನ್ಸೆಪ್ಟ್ ಆರ್ ಸಿ ಬಿ ಬಳಸುತ್ತಿರೋದು ಉತ್ತಮವಾಗಿದ್ದು,ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಎಡವುತ್ತಿರೋದ್ರಿಂದ ಈ ವಿಚಾರವಾಗಿ ನಿವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top