RCB ಗೆ ವಿರಾಟ್ ಕೊಹ್ಲಿ ಇನ್ಮೆಲೆ ಓಪನರ್

ಐಪಿಎಲ್ 2020ಯಲ್ಲಿ ಈ ಬಾರಿ ಆರ್‍ಸಿಬಿ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಈಗಾಗಲೇ ಆಡಿರೋ 9 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದ ಮೂಲಕ ಪ್ಲೇ ಆಫ್ ಹಂತಕ್ಕೆ ಬಂದು ನಿಂತಿದೆ. ಇದೀಗ ಆರ್‍ಸಿಬಿ 10ನೇ ಪಂದ್ಯವನ್ನು ಕೆಕೆಆರ್ ವಿರುದ್ಧ ನಾಳೆ ಆಡ್ತಾ ಇದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ವಿಶ್ವಾದಲ್ಲಿದ್ರೆ, ಇತ್ತ ಸೋಲಿನ ಸೇಡು ತೀರಿಸಿಕೊಳ್ಳು ತವಕದಲ್ಲಿದೆ. ಆರ್‍ಸಿಬಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕಣಕ್ಕೆ ಇಳಿಯಲಿದೆ. ಹೌದು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಡಗೈ ಬ್ಯಾಟ್ಸಮನ್ ಪಾರ್ಥಿವ್ ಪಟೇಲ್ ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ. ಈ ಬಗ್ಗೆ ಆರ್‍ಸಿಬಿ ಕೂಡ ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಬರುವ ಮುಂದಿನ ಚಾಲೆಂಜ್‍ಗೆ ರೆಡಿ ಎಂದು ಹೇಳುವ ಮೂಲಕ ಟ್ವೀಟರ್‍ನಲ್ಲಿ ಪಾರ್ಥಿವ್ ಪಟೇಲ್ ಆಡೋದು ಪಕ್ಕಾ ಆಗಿದೆ.

ಇನ್ನು ಪಾರ್ಥಿವ್ ಟೀಂಗೆ ಎಂಟ್ರಿ ಕೊಡೋದ್ರಿಂದ ತಂಡದಿಂದ ಗುರುಕಿರತ್ ಅವರನ್ನು ಕೈಬಿಡೋದು ಬಹುತೇಕ ಖಚಿತ ಅಂತ ಹೇಳಲಾಗುತ್ತಿದೆ. ಇನ್ನು ತಂಡದಲ್ಲಿ ಓಪನಿಂಗ್ ಬ್ಯಾಟ್ಸಮನ್ ಆರೋನ್ ಪಿಂಚ್ ಉತ್ತಮ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಫಿಂಚ್ ಬದಲಿಗೆ ಜೋಸೆಫ್ ಫಿಲಿಫ್ಸ್ ಅಥವಾ ಮೋಹಿನ್ ಅಲಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಇನ್ನು ಅರೋನ್ ಪಿಂಚ್ ಬೆಂಜ್ ಕಾಯುವುದರಿಂದಾಗಿ ಆರ್‍ಸಿಬಿ ಓಪನರ್ ಆಗಿ ವಿರಾಟ್ ಕೊಹ್ಲಿ ದೇವದತ್ ಪಡಿಕಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಅಂತ ಹೇಳಲಾಗುತ್ತಿದ್ದು, ಎಡಗೈ ಮತ್ತು ಬಲಗೈ ಕಾಂಬೀನೇಷನ್‍ಗಾಗಿ ವಿರಾಟ್ ಈ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇನ್ನು ತಂಡದಲ್ಲಿ ಶಹಬಾಸ್ ಅಹಮ್ಮದ್ ಮುಂದುವರೆಯಲಿದ್ದಾರೆ. ಈ ಮೂಲಕ ತಂಡದಲ್ಲಿ ಕೊಂಚ ಬದಲಾವಣೆಯೊಂದಿಗೆ ಆರ್‍ಸಿಬಿ ಕೆಕೆಆರ್ ವಿರುದ್ಧ ಕಣಕ್ಕಿಳಿಯುತ್ತಿದ್ದರೆ. ಇತ್ತ ಕೆಕೆಆರ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ, ಹೌದು ಕಳೆದ ಪಂದ್ಯದಲ್ಲಿ ಕೆಕೆಆರ್‍ನ ಅಲ್‍ರೌಂಡರ್ ಆಟಗಾರ ರಸೆಲ್ ಗಾಯಗೊಂಡಿದ್ದು ನಾಳಿನ ಪಂದ್ಯದಲ್ಲಿ ಆಡೋದು ಅನುಮಾನವಾಗಿದೆ. ಇನ್ನು ಅವರ ಜಾಗಕ್ಕೆ ಸುನೀಲ್ ನರೇನ್ ಆಡೋದು ಪಕ್ಕಾ ಆಗಿದೆ.

ಒಟ್ಟಿನಲ್ಲಿ ನಾಳಿನ ಪಂದ್ಯ ಎರಡು ತಂಡಕ್ಕೂ ಮಹತ್ವದಾಗಿದ್ದು, ನಾಳಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡದಲ್ಲಿ ಕೆಲವೊಂದು ಬದಲಾವಣೆಯೊಂದಿಗೆ ದೇವದತ್ ಪಡಿಕಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರ ಕಾದುನೋಡಬೇಕು.

ನಿಮ್ಮ ಪ್ರಕಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಬರಬೇಕ, ಫಿಂಚ್ ಬದಲಿಗೆ ತಂಡದಲ್ಲಿ ಯಾವ ವಿದೇಶಿ ಆಟಗಾರ ಸ್ಥಾನ ಪಡೆಯಬೇಕು, ಪಾರ್ಥಿವ್ ಪಟೇಲ್ ಆಗಮನದಿಂದ ತಂಡಕ್ಕೆ ಬಲತಂದು ಕೊಡಲಿದ್ಯ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top