RCB ಕಪ್ ಗೆಲ್ಲುತ್ತೆ, ವಿರಾಟ್,ರೋಹಿತ್ ಅಭಿಮಾನಿಗಳು ಫುಲ್ ಖುಷ್

ಐಪಿಎಲ್ 2020 ಈಗಾಗಲೇ ಪ್ಲೇ ಆಫ್ ಹಂತಕ್ಕೆ ತಲುಪಿದ್ದು, ಈ ಬಾರಿ ಆರ್‍ಸಿಬಿ ಕಪ್ ಗೆಲ್ಲಬೇಕು ಅಂದ್ರೆ ಇದೀಗ ಮೂರು ಮ್ಯಾಚ್‍ಗಳನ್ನು ಗೆಲ್ಲಬೇಕಾಗಿದೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾದಲ್ಲಿ ಇರೋ ಆರ್‍ಸಿಬಿ ತಂಡ ಮತ್ತ ಆರ್‍ಸಿಬಿ ಅಭಿಮಾನಿಗಳಿಗೆ ಎಬಿಡಿ ಹೇಳಿರೋ ಆ ಒಂದು ಮಾತು ಇನ್ನಷ್ಟು ಖುಷಿ ಕೊಟ್ಟಿದೆ. ಹೌದು ಆರ್‍ಸಿಬಿ ಭರವಸೆಯ ಆಟಗಾರ ಎಬಿ ಡಿವಿಲಿಯರ್ಸ್ ನಮಗೆ ಇರುವ ಮೂರು ಪಂದ್ಯಗಳನ್ನು ಗೆದ್ದು ನಾವು ಮೊದಲ ಬಾರಿಗೆ ಕಪ್ ಗೆಲ್ಲುತ್ತೇವೆ ಅನ್ನೋ ಮೂಲಕ ಆರ್‍ಸಿಬಿ ಅಭಿಮಾನಿಗಳಲ್ಲಿ ಜೋಶ್ ನೀಡಿದ್ದಾರೆ. ನಾವು ಸತತ ಸೋಲುಗಳನ್ನು ಕಂಡಿರಬಹುದು ಅವುಗಳನ್ನು ಮರೆತು ಮುಂದಿನ ಮೂರು ಪಂದ್ಯಗಳನ್ನು ಗೆದ್ದು ಕಪ್ ಗೆದ್ದು ಆರ್‍ಸಿಬಿ ಅಭಿಮಾನಿಗಳ ಮುಖದಲ್ಲಿ ಸಂತಸವನ್ನು ತರುತ್ತೇವೆ ಎಂದು ಹೇಳಿದ್ದಾರೆ. ಐಪಿಎಲ್ ಶುರುವಿನಿಂದ ಆರ್‍ಸಿಬಿ ಅಭಿಮಾನಿಗಳು ನಮ್ಮ ಹೆಚ್ಚಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿ ಕಪ್ ಗೆದ್ದು ಅವರನ್ನು ಖುಷಿ ಪಡಿಸೋದು ನಮ್ಮ ಜವಾಬ್ದಾರಿ ಎಂದು ಹೇಳುವ ಮೂಲಕ ಕಪ್ ಗೆಲ್ಲುವ ವಿಶ್ವಾಸ ಮಾತುಗಳನ್ನು ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ಮುಗಿಯುತ್ತಿದ್ದಂತೆ ಇನ್ನೊಂದು ಐಪಿಎಲ್‍ಗೆ ವರ್ಷಗಳು ಕಾಯಬೇಕಾದ ಅವಶ್ಯಕತೆ ಇಲ್ಲ, ಕೇವಲ ಆರು ತಿಂಗಳ ಅಂತರದಲ್ಲಿ ಮತ್ತೊಂದು ಐಪಿಎಲ್ ಹಬ್ಬ ಕ್ರಿಕೆಟ್ ಪ್ರಿಯರಿಗೆ ಶುರುವಾಗಲಿದೆ. ಹೌದು ಐಪಿಎಲ್ 2020 ಕೊರೋನಾ ಹಾವಳಿಯಿಂದ ಆರು ತಿಂಗಳು ತಡವಾಗಿ ಶುರುವಾಗಿದ್ದು, ಅತ್ಯಂತ ಯಶಸ್ವಿಯಾಗಿ ಮುಗಿಸಿವ ಹಂತಕ್ಕೆ ಬಂದಿದ್ದಾರೆ. ಇದೀಗ ಮುಂದಿನ ಐಪಿಎಲ್ ಬಗ್ಗೆ ಬಿಸಿಸಿಐ ಅಧ್ಯಕ್ಷ ದಾದಾ ಸೌರವ್ ಗಂಗೂಲಿ ಮಾಹಿತಿಯನ್ನು ಬಿಟ್ಟಿಕೊಟ್ಟಿದ್ದಾರೆ. ಈ ಬಾರಿ ಕೊರೋನಾ ಹಾವಳಿಯಿಂದ ಯುಎಇಯಲ್ಲಿ ಐಪಿಎಲ್ ಪ್ರೇಕ್ಷಕರಿಲ್ಲದೇ ಆಯೋಜನೆ ಮಾಡಲಾಯಿತು ಐಪಿಎಲ್ 2021 ಅನ್ನು ಪ್ರತಿ ಬಾರಿಯಂತೆ ಏಪ್ರಿಲ್‍ನಲ್ಲಿ ಭಾರತದಲ್ಲಿಯೇ ಆಯೋಜನೆ ಮಾಡಲು ಯೋಜನೆಯನ್ನು ಹಾಕಿಕೊಂಡಿದ್ದೇವೆ. ಕೊರೋನಾಗೆ ಆವೇಳೆ ವ್ಯಾಕ್ಸಿನ್ ಭಾರತಕ್ಕೆ ಬರುವ ವಿಶ್ವಾಸ ಇದೆ ಹಾಗಾಗಿ ಏಪ್ರಿಲ್‍ನಲ್ಲಿ ಐಪಿಎಲ್ ಆಯೋಜನೆ ಮಾಡಲು ತಯಾರಿ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದು, ಇತ್ತ ಐಪಿಎಲ್ ಬಿಗ್ ಆಕ್ಷನ್ ಬಗ್ಗೆ ಇನ್ನು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ, ಮುಂದಿನ ದಿನಗಳಲ್ಲಿ ಆಕ್ಷನ್ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ದಾದಾ ಸೌರವ್ ಗಂಗೂಲಿ ಹೇಳಿದ್ದಾರೆ.

ಐಪಿಎಲ್ ಹಬ್ಬದ ನಡುವೆ ಇದೀಗ ಟೀಂ ಇಂಡಿಯಾದ ಟಾಪ್ ಬಾಟ್ಸ್‍ಮನ್‍ಗಳಾದ ವಿರಾಟ್ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳಿಗೆ ಖುಷಿ ಕೊಡೋ ಸುದ್ದಿಯೊಂದು ಹೊರಬಿದ್ದಿದೆ. ಹೌದು ಇಂಟರ್‍ನ್ಯಾಷನಲ್ ರ್ಯಾಕಿಂಕ್ ಪಟ್ಟಿ ಐಸಿಸಿ ಬಿಡುಗಡೆಯಾಗಿದ್ದು ಟಾಪ್ ಎರಡು ಸ್ಥಾನದಲ್ಲಿ ಭಾರತೀಯ ಆಟಗಾರರು ಮೆರೆಯುತ್ತಿದ್ದಾರೆ. ನಾಕ ವಿರಾಟ್ ಕೊಹ್ಲಿ 871 ಪಾಯಿಂಟ್‍ನೊಂದಿಗೆ ಮೊದಲ ಸ್ಥಾನದಲ್ಲಿ ಇದ್ರೆ, 855 ಪಾಯಿಂಟ್‍ನೊಂದಿಗೆ ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಕೊರೋನಾ ಹಾವಳಿಯಿಂದಾಗಿ ಯಾವುದೇ ಟೂರ್ನಿಗಳು ನಡೆಯದೇ ಇದ್ದು, ಇದೀಗ ಒಂದೊಂದೆ ಟೂರ್ನಿ ಆರಂಭವಾಗಿದ್ದು, ಇದೀಗ ಐಸಿಸಿ ರ್ಯಾಕಿಂಕ್ ಪಟ್ಟಿ ಬಿಡಿಗಡೆ ಮಾಡಿದೆ. ವಿರಾಟ್ ಮತ್ತು ರೋಹಿತ್ ಮೊದಲ ಎರಡು ಸ್ಥಾನ ಪಡೆದಿದ್ರೆ, ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೋಲ್ಟ್ ಮೊದಲ ಸ್ಥಾನದಲ್ಲಿದ್ರೆ, ಭಾರತದ ಬೌಲರ್ ಜಸ್ಪ್ರೀತ್ ಬುಮ್ರಾ 719 ಪಾಯಿಂಟ್ ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಒಂದು ಕಡೆ ರ್ಯಾಕಿಂಗ್‍ನಲ್ಲಿ ಎರಡನೇ ಸ್ಥಾನದಲ್ಲಿ ಮೆರೆಯುತ್ತಿದ್ದರೆ, ಆಸ್ಟ್ರೇಲಿಯಾ ಪ್ರವಾಸ ಹೊರಟಿರೋ ಟೀಂ ಇಂಡಿಯಾದಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡಕ್ಕೆ ರೋಹಿತ್ ಶರ್ಮಾ ಆಯ್ಕೆಯಾಗಿಲ್ಲ, ಇನ್ನು ರೋಹಿತ್ ಆಯ್ಕೆ ಆಗದ ಬಗ್ಗೆ ಅನೇಕ ಪ್ರಶ್ನೆಗಳು ಸಹ ಎದ್ದಿದ್ದವು, ಇನ್ನು ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಮಾತನಾಡಿ ರೋಹಿತ್ ಫುಲ್ ಫಿಟ್‍ನೆಸ್ ಸಾಧಿಸಿದ್ರೆ ಖಂಡಿತಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಹೇಳಿದ್ರು, ಇನ್ನು ಭವಿಷ್ಯದ ದೃಷ್ಟಿಯಿಂದ ಗಂಗೂಲಿ ಸಲಹೆಯನ್ನು ನೀಡಿದ್ರು, ತಂಡಕ್ಕೆ ಕಂಬ್ಯಾಕ್ ಮಾಡಲು ಅವರು ಅವರಸ ಪಡುವುದು ಬೇಡ, ಆವರಿಗೆ ಮತ್ತೊಮ್ಮೆ ಗಾಯಗೊಳ್ಳುವುದನ್ನು ನೋಡಲಂತು ನಾನು ಬಯಸುವುದಿಲ್ಲ. ಸಂಪೂರ್ಣ ಫಿಟ್ ಆಗದೇ ಅವರು ಮೈದಾನಕ್ಕೆ ಇಳಿಯೋದು ಸರಿಯಲ್ಲ ಮತ್ತೊಮ್ಮೆ ಗಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಆ ತಪ್ಪು ಮಾಡದಿರಿ ಎಂದು ಗಂಗೂಲಿ ಹೇಳಿದ್ದಾರೆ. ಇನ್ನು ಟೀಂ ಇಂಡಿಯಾದ ಫಿಸಿಯೋ ನಿತಿನ್ ಪಟೇಲ್ ಕೂಡ ರೋಹಿತ್ ಶರ್ಮಾ ಅವರಿಗೆ ಮೂರು ವಾರಗಳ ವಿಶ್ರಾಂತಿ ಪಡೆಯುವಂತೆ ಸಲಹೆಯನ್ನು ನೀಡಿದ್ರು, ಆದ್ರೆ ರೋಹಿತ್ ಗಂಗೂಲಿ ಮತ್ತು ಫಿಸಿಯೋ ಸಲಹೆಯನ್ನ ದಿಕ್ಕರಿಸಿ, ಐಪಿಎಲ್‍ನಲ್ಲಿ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದು ನಂತರ ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ರು, ಹೀಗಾಗಿ ರೋಹಿತ್ ಶರ್ಮಾ ಗಂಗೂಲಿಯವರ ಸಲಹೆಯನ್ನು ದಿಕ್ಕರಿಸಿ ಮೈದಾನಕ್ಕೆ ಇಳಿದಿದ್ದಾರೆ ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಾ ಇದೆ.

ಒಟ್ಟಿನಲ್ಲಿ ಕ್ರೀಡಾ ಜಗತ್ತಿನಲ್ಲಿ ಸದ್ಯ ಒಂದಿಲ್ಲೊಂದು ಸುದ್ದಿಗಳು ಹೊರ ಬರ್ತಾನೆ ಇರ್ತಾವೆ, ಸದ್ಯ ರೋಹಿತ್,ಕೊಹ್ಲಿ ಅಭಿಮಾನಿಗಳಿಗೆ ರ್ಯಾಕಿಂಗ್ ವಿಚಾರದಲ್ಲಿ ಖುಷಿ ನೀಡಿದ್ದರೆ, ರೋಹಿತ್ ಗಾಯದ ಸಮಸ್ಯೆಯಿಂದ ಬೇಗ ಹೊರಬರಲಿ ಅನ್ನೋ ಆಶಯ ಮತ್ತೊಂದು ಕಡೆ, ಇದೆಲ್ಲದರ ನಡುವೆ ನಮ್ಮ ಆರ್‍ಸಿಬಿ ಈ ಬಾರಿ ಕಪ್ ಗೆಲ್ಲಲಿ ಅಂತ ಅಭಿಮಾನಿಗಳು ಅಂದುಕೊಳ್ಳುತ್ತಿದ್ರೆ, ಇತ್ತ ಎಬಿ ಡಿವಿಲಿಯರ್ಸ್ ನಾವು ಮೂರು ಮ್ಯಾಚ್ ಗೆದ್ದು ಕಪ್ ಗೆಲ್ತೀವಿ ಅನ್ನೋ ಮೂಲಕ ಈ ಬಾರಿ ಕಪ್ ನಮ್ದೆ ಅಂತಿದ್ದಾರೆ. ನೀವೂ ಹಾಗಾದ್ರೆ ಜೋರಾಗಿ ಕಪ್ ನಮ್ದೆ ಅಂತ ಹೇಳಿ ಕಾಮೆಂಟ್ ಬಾಕ್ಸ್‍ನಲ್ಲಿ ಆರ್‍ಸಿಬಿ ಗೆಲ್ಲುತ್ತೆ ಕಪ್ ನಮ್ದೆ ಅಂತ ಕಾಮೆಂಟ್ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top