RCB ಈ ರಣತಂತ್ರ ಮಾಡಿದ್ರೆ ಗೆಲ್ಲೋದು ಪಕ್ಕಾ

ಐಪಿಎಲ್ 2020ಯಲ್ಲಿ ಕೊನೆಯಲ್ಲಿ ಸತತ ನಾಲ್ಕು ಸೋಲಿನ ನಡುವೆಯು ರನ್‍ರೇಟ್ ಮೂಲಕ ಆರ್‍ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪಿದ್ದು, ಪ್ಲೇ ಆಫ್‍ನಲ್ಲಿ ಸನ್‍ರೈಸರ್ಸ್ ಹೈದರಬಾದ್ ವಿರುದ್ಧ ಎಲಿಮನೇಟರ್ ಪಂದ್ಯವನ್ನು ಆರ್‍ಸಿಬಿ ಆಡಲಿದೆ. ಆರ್‍ಸಿಬಿ ಕಳೆದ ನಾಲ್ಕು ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿ ಮಾಡಿದ್ರೆ ಈ ಬಾರಿ ಕಪ್ ಗೆಲ್ಲುವ ಕನಸು ಕನಸಾಗೇ ಉಳಿದುಬಿಡುತ್ತೇ, ಹಾಗಾದ್ರೆ ಹೈದರಬಾದ್ ವಿರುದ್ಧದ ಪಂದ್ಯವನ್ನು ಗೆಲ್ಲಲು ಮಾಡಬೇಕಾಗಿರೋ ರಣತಂತ್ರವೇನು ಅನ್ನೋದನ್ನ ನಾವ್ ಇವತ್ತು ನೋಡೋಣ, ನೀವೂ ಆರ್‍ಸಿಬಿ ಅಭಿಮಾನಿಗಳಾಗಿದ್ರೆ ಆರ್‍ಸಿಬಿ ಈ ಬಾರಿ ಕಪ್ ಗೆದ್ದು ಬರಲಿ ಅಂತ ಕಾಮೆಂಟ್ ಮೂಲಕ ವಿಶ್ ಮಾಡಿ, ಹೌದು ಎಲಿಮೆನೇಟರ್ ಪಂದ್ಯದಲ್ಲಿ ಆರ್‍ಸಿಬಿ ಹೈದರಬಾದ್ ಅನ್ನು ಅಬುದಾಬಿ ಸ್ಟೇಡಿಯಂನಲ್ಲಿ ಎದುರಿಸುತ್ತಿದ್ದು, ಪಂದ್ಯ ಗೆಲ್ಲಬೇಕು ಅಂದ್ರೆ ವಿರಾಟ್ ಕೊಹ್ಲಿ ಪಡೆ ರಣತಂತ್ರವನ್ನು ಹೂಡಬೇಕಾಗುತ್ತದೆ. ಆರ್‍ಸಿಬಿ ಈ ಪಂದ್ಯದಲ್ಲಿ ಈ ರೀತಿ ಮಾಡೋದ್ರಿಂದ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಬಹುದಾಗಿದೆ. ಹಾಗಾದ್ರೆ ಆರ್‍ಸಿಬಿ ಮಾಡಬೇಕಾಗಿರೋ ಕೆಲಸವೇನು ಅನ್ನೋದನ್ನ ನಾವ್ ಇವತ್ತು ನೋಡೋಣ.

ಹೈದರಬಾದ್ ವಿರುದ್ಧದ ಪಂದ್ಯ ಆರ್‍ಸಿಬಿ ಆಡ್ತಾ ಇರೋದು ಅಬುದಾಬಿ ಸ್ಟೇಡಿಯಂನಲ್ಲಿ ಆಗಿರೋದ್ರಿಂದ ಈ ಪಿಚ್ ಸ್ಪಿನ್ನರ್‍ಗಳಿಗೆ ಅನುಕೂಲ ಆಗೋದ್ರಿಂದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಹಬಾಸ್ ಅಹಮದ್ ಅವರನ್ನು ಈ ಪಂದ್ಯದಲ್ಲಿ ಆಡಿಸೋದ್ರಿಂದ ಸ್ಪಿನ್‍ನಲ್ಲಿ ಬಲ ಬರುವ ಜೊತೆಯಲ್ಲಿ ತಂಡಕ್ಕೆ ಅನುಕೂಲ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಎರಡನೇ ತಂತ್ರ ನೋಡೋದಾದ್ರೆ ತಂಡದಲ್ಲಿ ಜೋಸೆಫ್ ಫಿಲಿಪೆ ಬದಲಿಗೆ ಮೊಯೀನ್ ಅಲಿಯವರನ್ನು ಆಡಿಸೋದ್ರಿಂದ ತಂಡಕ್ಕೆ ಒಂದಿಷ್ಟು ಬಲ ಸಿಗುವ ಜೊತೆಯಲ್ಲಿ ಮೊಯೀನ್ ಅಲಿ ಯಾವ ಕ್ರಮಾಂಕದಲ್ಲಿ ಬೇಕಾದ್ರು ಬ್ಯಾಟಿಂಗ್ ಮಾಡೋ ಸಾಮಥ್ರ್ಯ ಹೊಂದಿರೋದ್ರ ಜೊತೆಯಲ್ಲಿ ತಂಡಕ್ಕೆ ಮತ್ತೊಬ್ಬ ಸ್ಪಿನ್ನರ್ ದೊರಕುತ್ತಾರೆ ಅಬುದಾಬಿ ಸ್ಪಿನ್ನರ್‍ಗಳಿಗೆ ಅನುಕೂಲ ಆಗೋದ್ರಿಂದ ಮೊಯಿನ್ ಅಲಿ ಅವರನ್ನು ತಂಡದಲ್ಲಿ ಆಡಿಸೋದು ಉತ್ತಮ ಅಂತಾನೇ ಹೇಳಬಹುದು.

ಹೈದರಬಾದ್‍ನಲ್ಲಿ ಓಪನರ್‍ಗಳಾದ ಡೆವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹ ಅವರು ಉತ್ತಮ ಓಪನಿಂಗ್ ಅನ್ನು ತಂಡಕ್ಕೆ ತಂದುಕೊಡುತ್ತಿದ್ದು, ಇವರಿಬ್ಬರನ್ನು ಆದಷ್ಟು ಬೇಗ ಕಟ್ಟಿಹಾಕು ಕೆಲಸವನ್ನು ಕೊಹ್ಲಿಪಡೆ ಮಾಡಬೇಕಾಗುತ್ತದೆ, ಆಗ ಆರ್‍ಸಿಬಿ ಗೆಲುವಿನ ದಾರಿ ಸುಮಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ನಾಲ್ಕನೇ ತಂತ್ರ ನೋಡೋದಾದ್ರೆ ಕ್ರಿಸ್ ಮಾರಿಸ್‍ಗೆ ಬ್ಯಾಟಿಂಗ್‍ನಲ್ಲಿ ಕೊಂಚ ಬಡ್ತಿ ಕೊಡೋ ಮೂಲಕ ರನ್ ಹೊಳೆ ಹರಿಸಲು ಅವಕಾಶ ನೀಡಬೇಕು, ಈಗಾಗಲೇ ಡೆಲ್ಲಿವಿರುದ್ಧ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಮಾರಿಸ್ ಬಂದಿದ್ರು ರನ್ ಗಳಿಸುವಲ್ಲಿ ವಿಫಲವಾಗಿದ್ರು, ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಮಾರಿಸ್‍ಗೆ ಬಡ್ತಿ ನೀಡಿದ್ದೇ ಆದಲ್ಲಿ ತಂಡಕ್ಕೆ ವರದಾನ ಆಗುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಕೊನೆಯದಾಗಿ ಆರ್‍ಸಿಬಿಯಲ್ಲಿ ವಿರಾಟ್ ಮತ್ತು ಎಬಿಡಿ ರನ್ ಹೊಳೆಯನ್ನು ಸಿಡಿದಾಗ ಮಾತ್ರ ಆರ್‍ಸಿಬಿಗೆ ಅನುಕೂಲವಾಗಲಿದ್ದು,ನಾಲ್ಕು ಪಂದ್ಯದಲ್ಲಿ ಈ ಇಬ್ಬರು ಆಟಗಾರರು ರನ್ ಸಿಡಿಸದೇ ಇದ್ದದ್ದು ತಂಡದ ಸೋಲಿಗೆ ಕಾರಣವಾಗಿತ್ತು, ಆದ್ದರಿಂದ ಇವರಿಬ್ಬರ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಇನ್ನು ವಿರಾಟ್ ಹೆಚ್ಚಿನ ಜವಾಬ್ದಾರಿ ಪಡೆದುಕೊಂಡು ಮೊಯೀನ್ ಅಲಿ ಆಡಿಸೋ ಮೂಲಕ ವಿರಾಟ್ ಓಪನರ್ ಆಗಿ ಬಂದು ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮ ವಹಿಸಿದ್ದೇ ಆದಲ್ಲಿ ತಂಡಕ್ಕೆ ಅನುಕೂಲ ಆಗೋದ್ರಲ್ಲಿ ಯಾವುದೇ ಅನುಮಾವಿಲ್ಲ.

ಇದಿಷ್ಟು ಆರ್‍ಸಿಬಿ ತಂಡ ಹೈದರಬಾದ್ ವಿರುದ್ಧ ಹಾಕಿಕೊಳ್ಳ ಬೇಕಾದ ರಣತಂತ್ರವಾಗಿದ್ದು, ನಿಮ್ಮ ಪ್ರಕಾರ ಆರ್‍ಸಿಬಿ ಯಾವೆಲ್ಲಾ ಬದಲಾವಣೆಗಳನ್ನು ಮಾಡಿಕೊಂಡು ಹೈದರಬಾದ್ ವಿರುದ್ಧ ಸೆಣೆಸಾಡಬೇಕು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top