RCB ಈ ಬಾರಿ ಯಾವ ಯಾವ ಆಟಗಾರರ ಮೇಲೆ ಕಣ್ಣಿಟ್ಟಿದೆ ಗೊತ್ತಾ..?

ಐಪಿಎಲ್‍ಗೆ ಇನ್ನು 4 ತಿಂಗಳು ಇರುವಾಗಲೇ ಐಪಿಎಲ್ ಹೀಟ್ ಶುರುವಾಗಿದೆ, ಇನ್ನು ಐಪಿಎಲ್ ಪ್ಲೆಯರ್ಸ್ ಬಿಡ್‍ಗೆ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ.. ಈ ನಡುವೆ ಈ ಬಾರಿ RCB ಯಾವ ಯಾವ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಕುತೂಹಲ ಎಲ್ಲಾ RCB ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ 13 ಜನ ಆಟಗಾರರನ್ನು ಇಟ್ಟುಕೊಂಡಿದ್ದು, ಇನ್ನು 12 ಜನ ಆಟಗಾರರನ್ನು ಖರೀದಿಸಬಹುದಾಗಿದೆ. ಇನ್ನು ತಂಡದಲ್ಲಿ 27ಕೋಟಿ 90 ಲಕ್ಷ ರೂಪಾಯಿ ಹಣವಿದ್ದು, ಇದರಲ್ಲಿ ಯಾರ್ಯಾರನ್ನು ಖರೀದಿಸಬಹದು ಅನ್ನೋ ಲೆಕ್ಕಾಚಾರ ಈಗಾಗಲೇ RCBಯಲ್ಲಿ ಶುರುವಾಗಿದೆ. RCBಗೆ ಪ್ರಮುಖವಾಗಿ ಆರಂಭಿಕ ಆಟಗಾರನ ಕೊರತೆ ಇರೋದ್ರಿಂದ ಈ ಬಾರಿ RCB ಕ್ರಿಸ್ ಲೀನ್ ಮತ್ತು ಜೆಸೆನ್ ರಾಯ್ ಮೇಲೆ ಪ್ರಮುಖವಾಗಿ ಕಟ್ಟಿದ್ದು, ಇನ್ನು RCB ವಿಕೆಟ್ ಕೀಪರ್ ಅವಶ್ಯಕತೆ ಸಹ ಹೆಚ್ಚಿದ್ದು, ಈ ಬಾರಿ ರಾಬಿನ್ ಉತ್ತಪ್ಪ ಮೇಲೂ RCB ಕಣ್ಣಿಟ್ಟಿದೆ, ರಾಬಿನ್ ಉತ್ತಪ್ಪ ಲೋಕಲ್ ಪ್ಲೇಯರ್ ಜೊತೆಯಲ್ಲಿ ಉತ್ತಮ ಓಪನಿಂಗ್ ಆಟಗಾರನಾಗಿದ್ದು ಹೀಗಾಗಿ ಈ ಬಾರಿ RCB ರಾಬಿನ್ ಉತ್ತಪ್ಪ ಮೇಲು ಬಿಡ್ ಮಾಡೋಕೆ ಮನಸ್ಸು ಮಾಡಿದೆ.

All set for the #IPLAuction? The Captain has a message for you.#ViratKohli #BidForBold #IPL2020 #PlayBold

Posted by Royal Challengers Bangalore on Monday, 16 December 2019

ಇನ್ನು ಬೌಲಿಂಗ್ ವಿಭಾಗದಲ್ಲಿ ಡೇಲ್ ಸ್ಟೈನ್ ಮತ್ತು ಶೆಲ್ಡನ್ ಕಾಟ್ರೆಲ್ ಆಯ್ಕೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದು, ಇದರ ಜೊತೆಯಲ್ಲಿ ಮ್ಯಾಕ್ಸ್ ವೆಲ್, ವಿಂಡೀಸ್ ಆಟಗಾರರಾದ ಶಾಯ್ ಹೋಪ್ ಮೇಲೆ ಕಣ್ಣಿಟ್ಟಿದ್ದು, ಜೊತೆ ಭರ್ಜರಿ ಫಾರ್ಮ್‍ನಲ್ಲಿರೋ ಹಿಟ್‍ಮೇರ್ ಅವರನ್ನು ಕೂಡ ಮತ್ತೆ ಮರಳಿ ತಂಡಕ್ಕೆ ಕರೆತರೋ ಪ್ಲಾನ್‍ನಲ್ಲಿದೆ RCB, ಅಷ್ಟೇ ಅಲ್ಲದೇ ಈ ಬಾರಿ RCB ತಂಡ ಲೋಕಲ್ ಪ್ಲೇಯರ್ಸ್ ಕಡೆಗೂ ಹೆಚ್ಚಿನ ಗಮನ ಕೊಡಲು ಮನಸ್ಸು ಮಾಡಿದ್ದು ಇದರಿಂದಾಗಿ ರಣಜಿಯಲ್ಲಿ ಮತ್ತು ಮುಷ್ತಕ್ ಅಲಿ ಟ್ರೋಫಿಯಲ್ಲಿ ಗಮನ ಸೆಳೆದ ಆಟಗಾರರ ಮೇಲು ಸಹ ಈ ಬಾರಿ ಕಣ್ಣಿಟ್ಟಿದ್ದು ಈ ಬಾರಿ ಕಪ್ ನಮ್ದೆ ಆಗ ಬೇಕು ಅನ್ನೋ ಹಠದಲ್ಲಿದೆ RCB ತಂಡ, ನಿಮ್ಮ ಪ್ರಕಾರ ಯಾವ ಆಟಗಾರ ಬಂದರೆ RCBಗೆ ಕಪ್ ಗೆಲ್ಲಲು ಸಹಾಯ ಆಗಬಹುದು ಕಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top