
ಐಪಿಎಲ್ ಶುರುವಾಗಲು ಇನ್ನು ಮೂರು ತಿಂಗಳು ಬಾಕಿ ಇದೆ.. ಹೀಗಿರುವಾಗಲೇ ಆರ್ಸಿಬಿ ತಂಡಕ್ಕೆ ಇದೀಗ ಮೇಲಿಂದ ಮೇಲೆ ಸಿಹಿಸುದ್ದಿಗಳು ಸಿಕ್ತಾನೆ ಇದೆ, ಇದೀಗ ಆಸ್ಟ್ರೇಲಿಯಾದಿಂದಲೂ ಸಹ ಆರ್ಸಿಬಿ ತಂಡಕ್ಕೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಈಗಾಗಲೇ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ಬಿಸಿಸಿಐ ತಯಾರಿಯನ್ನು ನಡೆಸ್ತಾ ಇದೆ, ಈಗಾಗಲೇ ಜನವರಿ 21ರ ಒಳಗೆ ತಂಡದಿಂದ ಕೈಬಿಡುವ ಆಟಗಾರರ ಪಟ್ಟಿಯನ್ನು ನೀಡಬೇಕಾಗಿದೆ. ಈಗಾಗಲೇ ಈ ವಿಚಾರವಾಗಿ ಯಾವ ತಂಡದಲ್ಲಿ ಯಾವ ಆಟಗಾರರನ್ನು ಬಿಡಬೇಕು ಅನ್ನೋ ಲೆಕ್ಕಾಚಾರಗಳು ಐಪಿಎಲ್ ಪ್ರಿಯರಲ್ಲಿ ಜೋರಾಗಿ ನಡೀತಾದೆ. ಹೀಗಿರಬೇಕಾದ್ರೆ ಇದೀಗ ಆರ್ಸಿಬಿ ತಂಡದಿಂದ ಯಾರನ್ನು ಕೈಬಿಡಬೇಕು ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ.
ಆದ್ರೆ ಆಟಗಾರರನ್ನು ಕೈಬಿಡುವ ಲೆಕ್ಕಾಚಾರದಲ್ಲಿ ಈ ಒಬ್ಬ ಆಟಗಾರರನ್ನು ಕೈಬಿಟ್ಟು ಮತ್ತೆ ತಪ್ಪು ಮಾಡಬಾರದು ಅನ್ನೋದು ಇದೀಗ ಆರ್ಸಿಬಿ ಅಭಿಮಾನಿಗಳ ಮಾತಾಗಿದೆ. ಹೌದು ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಪರ ಕೆಲವು ಪಂದ್ಯಗಳನ್ನು ಆಡಿದ್ದ ಜೋಸೆಫ್ ಫಿಲಿಪೆಯನ್ನು ಯಾವುದೇ ಕಾರಣಕ್ಕೂ ತಂಡದಿಂದ ಕೈಬಿಡಬಾರದು ಅನ್ನೋ ಮಾತುಗಳು ಕೇಳಿಬರ್ತಾ ಇದೆ. ಯಾಕಂದ್ರೆ ಆರ್ಸಿಬಿ ತಂಡಕ್ಕೆ ಆರಂಭಿಕ ಆಟಗಾರನಾಗಿ ಪಡಿಕಲ್ ಜೊತೆಯಲ್ಲಿ ಉತ್ತಮ ಆರಂಭ ತಂದುಕೊಡಲ್ಲಿದ್ದಾರೆ ಅನ್ನೋ ಭರವಸೆಯನ್ನು ಫಿಲಿಫೆ ಇದೀಗ ನೀಡಿದ್ದಾರೆ.
ಸದ್ಯ ಆಸ್ಟ್ರೇಲಿಯಾದಲ್ಲಿ ನಡೀತಾ ಇರೋ ಬಿಗ್ಬ್ಯಾಶ್ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡ್ತಾ ಇರೋ ಜೋಸೆಫ್ ಪಿಲಿಪೆ ಸಿಡ್ನಿ ಸಿಕ್ಸರ್ ತಂಡದ ಪರವಾಗಿ 10 ಪಂದ್ಯಗಳನ್ನು ಆಡಿದ್ದು ಆಡಿದ 10 ಪಂದ್ಯಗಳಿಂದ 337 ರನ್ಗಳನ್ನು ಕಲೆಹಾಕುವ ಮೂಲಕ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ. ಇನ್ನು ಬಿಗ್ಬ್ಯಾಶ್ ಈ ಬಾರಿಯ ಟೂರ್ನಿಯಲ್ಲಿ 145 ಸ್ಟ್ರೈಕ್ರೈಟ್ನಲ್ಲಿ ಬ್ಯಾಟ್ ಬೀಸುತ್ತಿರೋ ಜೋಸೆಫ್ ಫಿಲಿಪೆ ಟೂರ್ನಿಯಲ್ಲಿ ಎರಡು ಅರ್ಧ ಶತಕವನ್ನು ಸಿಡಿಸಿದ್ದಾರೆ, ಈ ಬಾರಿ ಅವರ ಗರಿಷ್ಠ ಮೊತ್ತ 95 ಆಗಿದ್ದು,. ಸದ್ಯ ಭರ್ಜರಿ ಫಾರ್ಮ್ನಲ್ಲಿ ಇದ್ದಾರೆ.
ಆ ಮೂಲಕ ಈ ಬಾರಿಯ ಐಪಿಎಲ್ನಲ್ಲೂ ಫಿಲಿಫೆ ಇದೇ ಪ್ರದರ್ಶನ ತೋರಿದ್ದೇ ಆದಲ್ಲಿ ಆರ್ಸಿಬಿಗೆ ವರವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ, ಈಗಾಗಲೇ ಆರ್ಸಿಬಿಯಲ್ಲಿ ಆರಂಭಿಕ ಆಟಗಾರರಾಗಿ ದೇವದತ್ ಪಡಿಕಲ್ ಜೊತೆಯಲ್ಲಿ ಉತ್ತಮ ಆಟಗಾರ ಬೇಕಾಗಿದ್ದು, ಈ ನಿಟ್ಟಿನಲ್ಲಿ ಜೋಸೆಫ್ ಫಿಲಿಪೆ ಉತ್ತಮ ಆಯ್ಕೆ ಆಂತಾನೇ ಹೇಳಬಹುದು, ಈಗಾಗಲೇ ಪಾರ್ಥಿವ್ ಪಟೇಲ್ ಕ್ರಿಕೆಟ್ಗೆ ಗುಡ್ಬೈ ಹೇಳಿ ಮುಂಬೈ ತಂಡ ಸೇರಿಕೊಂಡಿದ್ದರಿಂದ ಜೋಸೆಫ್ ಫಿಲಿಪೆ ಆರ್ಸಿಬಿ ತಂಡಕ್ಕೆ ಒಬ್ಬ ಉತ್ತಮ ಆರಂಭಿಕನಾಗುವ ಜೊತೆಯಲ್ಲಿ ತಂಡದಲ್ಲಿ ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಬಹುದಾಗಿದೆ.
ಒಟ್ಟಿನಲ್ಲಿ ಒಂದು ಕಡೆ ಬಿಗ್ಬ್ಯಾಶ್ನಲ್ಲಿ ಫಿಲಿಪೆ ಕಮಾಲ್ ಮಾಡುತ್ತಿದ್ರೆ, ಇತ್ತ ಸಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಲ್ರೌಂಡರ್ ಶಿವಂದುಬೆ ಕೂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು, ಈ ಬಾರಿಯ ಐಪಿಎಲ್ಗೂ ಮುಂಚೆಯೇ ಆರ್ಸಿಬಿ ತಂಡಕ್ಕೆ ಶುಭ ಸುದ್ದಿ ಸಿಕ್ತಾ ಇದೆ.
ಹಾಗಾದ್ರೆ ನಿಮ್ಮ ಪ್ರಕಾರ ಬಿಗ್ಬ್ಯಾಶ್ನಲ್ಲಿ ಜೋಸೆಫ್ ಫಿಲಿಪೆ ಅವರ ಪ್ರದರ್ಶನ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಮೇಲೂ ಪರಿಣಾಮ ಬೀರಲಿದ್ಯ ನಿಮ್ಮ ಅನಿಸಿಕೆ ಏನೂ ಕಾಮೆಂಟ್ ಮಾಡಿ ತಿಳಿಸಿ.