RCB ಇವತ್ತು ಗೆಲ್ಲೋದು ಪಕ್ಕಾ..SRHಗೆ ಶುರುವಾಯ್ತು ತಲೆನೋವು

IPL 2020ಯ ಇವತ್ತಿನ ಪಂದ್ಯದಲ್ಲಿ ಆರ್ ಸಿ ಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗ್ತಾ ಇದ್ದು, ಈಗಾಗಲೇ ರನ್ ರೇಟ್ ಮೂಲಕ ಪ್ಲೇ ಆಫ್ ಹಂತದಲ್ಲಿ ಇರೋ ಆರ್ ಸಿ ಬಿ ಇವತ್ತಿನ ಪಂದ್ಯ ಗೆಲ್ಲಯವ ಮೂಲಕ ಟಾಪ್ 2 ನಲ್ಲಿ‌ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು‌ ತಯಾರಿ ನಡೆಸುತ್ತಿದ್ದಾರೆ. ಇನ್ನು ಹೈದರಬಾದ್ ತಂಡದ ವಿರುದ್ಧ ಪಂದ್ಯಗೆಲ್ಲಲು ಆರ್ ಸಿ ಬಿಗೆ ಅವಕಾಶಗಳು ಸಹ ಹೆಚ್ಚಾಗಿದೆ. ಶಾರ್ಜಾದಲ್ಲಿ ಇಂದು ನಡೆಯುತ್ತಿದ್ದು, ಈಗಾಗಲೇ ಆರ್ ಸಿ ಬಿ ಶಾರ್ಜಾದಲ್ಲಿ ಆಡಿರೋ ಎರಡು ಪಂದ್ಯದಲ್ಲಿ ಒಂದರಲ್ಲಿ‌ ಜಯಸಾಧಿಸಿದೆ.ಇನ್ನು ಹೈದರಬಾದ್ ಇಲ್ಲಿ ಆಡಿರೋ ಪಂದ್ಯದಲ್ಲಿ ಸೋಲನ್ನು ಕಂಡಿದೆ.ಇನ್ನು ಹೈದರಬಾದ್ ವಿರುದ್ಧ ಆರ್ ಸಿ ಬಿ ಮೊದಲ ಪಂದ್ಯದಲ್ಲಿ ಗೆಲುವನ್ನು‌ ಸಾಧಿಸಿದ್ದು ಅದೇ ಗೆಲುವಿನ‌ ಉತ್ಸಹದಲ್ಲಿ ಆರ್ ಸಿ ಬಿ ಇದೆ.ಇನ್ನು ಎರಡು‌ ತಂಡದಲ್ಲೂ ಗಾಯದ ಸಮಸ್ಯೆ ಎದುರಾಗಿದ್ದು ಕಳೆದ ಪಂದ್ಯದಲ್ಲಿ ಹೈದರಬಾದ್ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವೃದ್ಧಿಮಾನ್ ಗಾಯಗೊಂಡಿದ್ದು ಬಹುತೇಕ ಅನುಮಾನವಾಗಿದೆ.ಇದು ಆರ್ ಸಿ ಬಿ ವರವಾಗಿದ್ರೆ,ಇನ್ನು ಆರ್ ಸಿ ಬಿಯ ಪ್ರಮುಖ ಬೌಲರ್ ನವದೀಪ್‌ಸೈನಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಾಸ್ ಆಗೋ‌ ಲಕ್ಷಣಗಳಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲ್ಲಿದ್ದಾರಾ ಕಾದುನೋಡಬೇಕು.

ಹಾಗಾದ್ರೆ ಇವತ್ತಿನ ಪಂದ್ಯದಲ್ಲಿ ಆರ್ ಸಿ ಬಿ ಯಾವ ರೀತಿ ಪ್ರದರ್ಶನ ನೀಡಲಿದೆ.ಈ ಬಾರಿ ಆರ್ ಸಿ ಬಿ ಕಪ್ ಗೆಲ್ಲಲಿದ್ಯಾ ಕಾಮೆಂಟ್ ಮಾಡಿ‌ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top