RCB ಆಪತ್ಭಾಂದವ ABD ಗೆ ಇದೆಂತ ಅವಮಾನ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರೋ ಟೀಂ ಇಂಡಿಯಾಗೆ ಗಾಯದ ಮೇಲೆ ಗಾಯದ ಸಮಸ್ಯೆಗಳು ಶುರುವಾಗಿದೆ, ಈಗಾಗಲೇ ಶಮಿ,ಉಮೇಶ್ ಯಾದವ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದು, ಇದೀಗ ಆ ಜಾಗಕ್ಕೆ ಕನ್ನಡಿಗ ಕೆಎಲ್ ರಾಹುಲ್ ಕೂಡ ಸೇರ್ಪಡೆಯಾಗಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಆಡದೇ ಬೆಂಚ್ ಕಾದಿದ್ದ ಕನ್ನಡಿಗ, ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡೋದು ಪಕ್ಕಾ ಅಂತಾನೇ ಹೇಳಲಾಗುತ್ತಿತ್ತು, ಆದ್ರೆ ಶನಿವಾರ ಅಭ್ಯಾಸ ನಡೆಸುವ ವೇಳೆ ರಾಹುಲ್ ಮೊಣಕೈಗೆ ಗಾಯವಾಗಿದ್ದು , ಇದೀಗ ಮುಂದಿನ ಎರಡು ಪಂದ್ಯಕ್ಕೂ ರಾಹುಲ್ ಹೊರಬಿದ್ದಿದ್ದಾರೆ. ಟೆಸ್ಟ್‍ಗೆ ಮರಳಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದ ರಾಹುಲ್ ಇದೀಗ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಆ ಬೌಲರ್ ಬೌಲಿಂಗ್ ಮಾಡುವ ವೇಳೆ ಎಬಿಡಿ ವಿಲಿಯರ್ಸ್ ಅಳುತ್ತಿದ್ದ ಎಂದು ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ. ಹೌದು ಕ್ರಿಕೆಟ್ ಜಗತ್ತಿನ 360 ಡಿಗ್ರಿ ಅಂತಾನೇ ಖ್ಯಾತಿ ಹೊಂದಿರೋ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಆರ್‍ಸಿಬಿ ತಂಡದ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಆ ಒಬ್ಬ ಬೌಲರ್ ಬೌಲಿಂಗ್ ಮಾಡುತ್ತಿದ್ದರೆ ಆಟ ಕಣ್ಣೀರು ಹಾಕುತ್ತಾ ಬ್ಯಾಟಿಂಗ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಎಬಿಡಿ ಕ್ರಿಸ್‍ಗೆ ಬರುತ್ತಿದ್ದಾರೆ ಎಂದ್ರೆ ಬೌಲರ್‍ಗಳಿಗೆ ಒಂದು ರೀತಿಯಲ್ಲಿ ನಡುಕ ಶುರುವಾಗುತ್ತೆ, ಯಾವುದೇ ರೀತಿಯ ಬಾಲ್ ಹಾಕಲಿ ಆತ ಮೈದಾನದ ಮೂಲೆ ಮೂಲೆಗೆ ಬಾಲ್ ಅನ್ನು ಕಳುಹಿಸುತ್ತಾರೆ. ಆದ್ರೆ ಇದೀಗ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿಕೆಯೊಂದನ್ನು ನೀಡಿದ್ದು, ಕ್ರಿಕೆಟ್ ಪ್ರಿಯರು ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕೋ ಅಥವಾ ಗಂಭೀರವಾಗಿ ತೆಗೆದುಕೊಳ್ಳ ಬೇಕೋ ಅನ್ನೋ ಅನುಮಾನದಲ್ಲಿ ಇದ್ದಾರೆ. ಹಾಗಾದ್ರೆ ಅಖ್ತರ್ ಹೇಳಿದ್ದಾದ್ರು ಏನೂ ಅಂತ ನೋಡೋದಾದ್ರೆ, ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮದ್ ಆಸಿಫ್ ಬೌಲಿಂಗ್ ಮಾಡುವ ವೇಳೆ ಆತನ ಬೌಲಿಂಗ್ ಎದುರಿಸಲು ಆಗದೆ ಕೆಲ ಬ್ಯಾಟ್ಸಮನ್‍ಗಳು ಕಣ್ಣೀರಿಡುತ್ತಿದ್ದರು ಅಂತ ಹೇಳಿದ್ದು,

ಇನ್ನು ಮಿಸ್ಟರ್ 360 ಡಿಗ್ರಿ ಎಬಿಡಿ ವಿಲಿಯರ್ಸ್ ಅಂತೂ ಮೊಹಮದ್ ಆಸಿಫ್ ಬೌಲಿಂಗ್ ಮಾಡುವ ವೇಳೆ ಅತ್ತೇ ಬಿಡುತ್ತಿದ್ದ ಅನ್ನೋ ಮಾತುಗಳನ್ನು ಹೇಳಿದ್ದು, ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಅಖ್ತರ್ ಹೇಳಿದ ಈ ಮಾತನ್ನು ಯಾವರೀತಿ ಪರಿಗಣಿಸಬೇಕು ಅನ್ನೋ ಅನುಮಾನದಲ್ಲಿ ಇದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಖತ್ ವೈರಲ್ ಆಗಿದ್ದು, 2021ರ ಮೊದಲ ಜೋಕ್ ಇದೆ ಅನ್ನೋ ಮೂಲಕ ಅಖ್ತರ್ ಹೇಳಿಕೆಗೆ ಕೆಲವ್ರು ಕಾಲೆಳೆಯುತ್ತಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಮೊಹಮದ್ ಆಸೀಫ್ ಬೌಲಿಂಗ್‍ನಲ್ಲಿ ಎಬಿಡಿ ಬ್ಯಾಟಿಂಗ್ ಮಾಡಲು ಕಣ್ಣೀರಿಡುತ್ತಿದ್ದರ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top