RCB ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಎಬಿ ಡಿವಿಲಿಯರ್ಸ್‌..

ಐಪಿಎಲ್‌ 2020ಯಲ್ಲಿ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲಲಿದೆ ಅನ್ನೋ ವಿಶ್ವಾಸದಲ್ಲಿದ್ದ ಆರ್‌ಸಿಬಿ ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ತಂಡ ಪ್ಲೇ ಆಫ್‌ ಹಂತದಲ್ಲಿ ಸೋಲನ್ನು ಕಾಣುವ ಮೂಲಕ ನಿರಾಸೆಯುಂಟಾಗಿದೆ. ಇದೀಗ ಆರ್‌ಸಿಬಿ ಆಟಗಾರರು ಈ ವಿಚಾರವಾಗಿ ಹೃದಯಸ್ಪರ್ಶಿ ಮಾತುಗಳನ್ನು ಅಭಿಮಾನಿಗಳಿಗೆ ಹೇಳುತ್ತಿದ್ದು, ವಿರಾಟ್‌ ಕೊಹ್ಲಿ ಟೂರ್ನಿಯಿಂದ ಹೊರ ಬಿದ್ದ ನಂತರ ನಮ್ಮನ್ನು ಬೆಂಬಲಿಸಿ ದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದವನ್ನು ಹೇಳಿದ್ರು, ಇದೀಗ ಆರ್‌ಸಿಬಿ ತಂಡದ ಆಪತ್ಭಾಂಧವ ಮಿಸ್ಟರ್‌ 360 ಡಿಗ್ರಿ ಎಬಿಡಿ ವಿಲಿಯರ್ಸ್‌ ಆರ್‌ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿದ್ದಾರೆ.

ಹೌದು ಎಬಿಡಿ ಈ ಬಾರಿಯ ಐಪಿಎಲ್‌ನಲ್ಲಿ ನಾವು ಕಪ್‌ ಗೆದ್ದು ಬೆಂಗಳೂರಿಗೆ ಬರ್ತೀವಿ ಅನ್ನೋ ಮಾತುಗಳನ್ನು ಹೇಳಿದ್ರು, ಇದು ಅಭಿಮಾನಿಗಳಿಗೆ ಖುಷಿಯನ್ನು ನೀಡಿತ್ತು, ಇನ್ನು ಆ ನಿಟ್ಟಿನಲ್ಲಿ ಎಬಿಡಿ ಕೂಡ ತಂಡದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ತಂಡವನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡಿದ್ರು, ಈ ಬಾರಿ ಚೊಚ್ಚಲ ಕಪ್‌ ಗೆಲ್ಲುವ ಕನಸು ಮಾತ್ರ ನನಸಾಗಲಿಲ್ಲ, ಇದೀಗ ಈ ಬಾರಿ ಐಪಿಎಲ್‌ನಲ್ಲಿ ಕಪ್‌ ಗೆಲ್ಲಲು ಸಾಧ್ಯವಾಗದ ಕಾರಣ ಆರ್‌ಸಿಬಿ ಅಭಿಮಾನಿಗಳಿಗೆ ಎಬಿ ಡಿವಿಲಿಯರ್ಸ್‌ ಕ್ಷಮೆಯನ್ನು ಕೇಳಿದ್ದು, ನಿಮ್ಮ ಬೆಂಬಲಕ್ಕೆ, ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಅಂತ ಹೇಳಿದ್ದಾರೆ. ಇನ್ನು ಮುಂದಿನ ಐಪಿಎಲ್‌ನಲ್ಲಿ ನಾನು ಆಟವಾಡುವ ಮನಸ್ಸು ಮಾಡಿದ್ರೆ ನಾನು ಆರ್‌ಸಿಬಿ ತಂಡದಲ್ಲಿ ಮಾತ್ರ ಆಡುತ್ತೇನೆ ಅನ್ನೋ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.

ಒಂದು ಕಡೆ ಎಬಿಡಿ ಆರ್‌ಸಿಬಿ ತಂಡದಲ್ಲಿ ಮಾತ್ರ ಆಡೋದಾಗಿ ಎಬಿಡಿ ಹೇಳಿದ್ರೆ, ಇತ್ತ ಈ ಬಾರಿ ಆರ್‌ಸಿಬಿ ಪರ ಆಡಿದ ಆರೋನ್‌ ಫಿಂಚ್‌ ಕೂಡ ಆರ್‌ಸಿಬಿ ವಿಚಾರವಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ನಾನು ಆಡಿರೋ ಎಂಟು ಪ್ರಾಂಚೈಸಿ ಟೀಂಗಳಲ್ಲಿ ಆರ್‌ಸಿಬಿ ಬೆಸ್ಟ್‌ ಟೀಂ ಅಂತ ಹೇಳಿದ್ದಾರೆ. ಈ ಹಿಂದೆ ಫಿಂಚ್‌ ಬೆಂಗಳೂರಿಗೂ ನನಗೂ ನಂಟಿದೆ ಅನ್ನೋ ಮಾತುಗಳನ್ನು ಹೇಳಿದ್ರು, ನನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಬೆಂಗಳೂರಿನಲ್ಲಿ ಹಾಗಾಗಿ ನನಗೂ ಬೆಂಗಳೂರಿಗೂ ಬಿಡಿಸಲಾರದ ನಂಟಿದೆ ಅಂತಾನೂ ಹೇಳಿದ್ರು…

ಈ ವಿಷಯವಾಗಿ ನಿಮ್ಮ ಅನಿಸಿಕೆ ಏನು.. ಎಬಿಡಿ ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್‌ ಗೆಲ್ಲಿಸಿ ಕೊಡ್ತಾರಾ.. ಫಿಂಚ್‌ಗೂ ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಅವಕಾಶ ನೀಡಬೇಕಾ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top