RCBಯಲ್ಲಿ ವಿರಾಟ್ ನಾಯಕತ್ವದ ಬಗ್ಗೆ ಹಾಡಿ ಹೊಗಳಿದ ಆಸ್ಟ್ರೇಲಿಯಾ ಆಟಗಾರ

ಐಪಿಎಲ್ 2020 ಮುಕ್ತಾಯವಾಗಿ, ಮುಂಬೈ ಇಂಡಿಯನ್ಸ್ 5ನೇ ಬಾರಿ ಚಾಂಪಿಯನ್ಸ್ ಆಗಿದ್ದು ಆಯ್ತು, ಇನ್ನು ಈ ಬಾರಿಯು ಆರ್‍ಸಿಬಿ ಕಪ್ ಗೆಲ್ಲಲಿಲ್ಲ ಅನ್ನೋ ಕೊರಗು ಅಭಿಮಾನಿಗಳಲ್ಲಿ ಹಾಗೇ ಉಳಿದುಬಿಟ್ಟಿತು, ಹೀಗಿರಬೇಕಾದ್ರೆ ಉತ್ತಮ ಪ್ರದರ್ಶನ ತೋರಿದ್ರು ಆರ್‍ಸಿಬಿ ಕಪ್ ಗೆಲ್ಲದೇ ಇರಲು ವಿರಾಟ್ ಕೊಹ್ಲಿಯವರ ನಾಯಕತ್ವವೇ ಕಾರಣ ಅನ್ನೋ ಮಾತುಗಳನ್ನ ಕ್ರಿಕೆಟ್ ಪಂಡಿತರು ಸೇರಿದಂತೆ, ಕ್ರಿಕೆಟ್ ಅಭಿಮಾನಿಗಳು ಸಹ ಹೇಳೋದಕ್ಕೆ ಶುರುಮಾಡಿದ್ರು, ಇನ್ನು ಕೆಲವ್ರು ಕೇವಲ ನಾಯಕನ ಮೇಲೆ ತಂಡದ ಎಲ್ಲಾ ಆಟಗಾರರು ನಂಬಿಕೊಳ್ಳ ಬಾರದು, ಒಂದು ತಂಡ ಗೆಲ್ಲಬೇಕಾದ್ರೆ ಕೇವಲ ನಾಯಕನ ಜವಾಬ್ದಾರಿ ಪ್ರಮುಖವಾಗುವುದಿಲ್ಲ ಜೊತೆಗೆ ತಂಡದ ಉಳಿದ ಆಟಗಾರರು ನಾಯಕನಿಗೆ ಸಾಥ್ ನೀಡಬೇಕು ಆಗ ಮಾತ್ರ ತಂಡಗೆಲ್ಲಲು ಸಾಧ್ಯ ಅಂತ ಕೆಲವ್ರು ಹೇಳಿದ್ರು, ಇದೀಗ ವಿರಾಟ್ ಕೊಹ್ಲಿ ಆರ್‍ಸಿಬಿ ತಂಡದಲ್ಲಿ ನಾಯಕತ್ವವನ್ನು ನಿರ್ವಹಿಸಿದ ಬಗ್ಗೆ ಸಹ ಆಟಗಾರ ಹಾಡಿಹೊಗಳಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಇದ್ದ ಶ್ರೇಷ್ಟತೆ ಬಗ್ಗೆ ಮಾತನಾಡಿದ್ದಾರೆ. ಹೌದು ಆಸ್ಟ್ರೇಲಿಯಾ ತಂಡದ ನಾಯಕ, ಆರ್‍ಸಿಬಿ ತಂಡ ಓಪನಿಂಗ್ ಬ್ಯಾಟ್ಸಮನ್ ಆದ ಆರೋನ್ ಫಿಂಚ್ ಇದೀಗ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಹಾಡಿಹೊಗಳಿದ್ದಾರೆ. ಆರ್‍ಸಿಬಿ ನಾಯಕನಾಗಿ ವಿರಾಟ್ ಕೊಹ್ಲಿಯವರ ನಿರ್ಧಾರ ನನಗೆ ಅಚ್ಚರಿಯನ್ನು ಮೂಡಿಸಿತ್ತು, ಅವರು ಎದುರಾಳಿ ತಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಬದಲಿಗೆ ತಮ್ಮ ತಂಡದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರು. ತಂಡದಲ್ಲಿ ಆಡುತ್ತಿದ್ದ ಎಲ್ಲಾ ಆಟಗಾರರ ಮೇಲೆ ವಿಶ್ವಾಸವನ್ನು ಇಡುತ್ತಿದ್ದರು. ಹೀಗಿದ್ದಾಗ ತಂಡದ ಗೆಲುವಿನ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ, ಜೊತೆಗೆ ತಂಡದಲ್ಲಿ ಆಟಗಾರರ ಮನೋಬಲವೂ ಹೆಚ್ಚುತ್ತದೆ ಎಂದು ಆರೋನ್ ಫಿಂಚ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಹಾಡಿ ಹೊಗಳಿದ್ದಾರೆ.

ವಿರಾಟ್ ಕೊಹ್ಲಿಯ ಆರ್‍ಸಿಬಿ ನಾಯಕತ್ವದ ಬಗ್ಗೆ ಫಿಂಚ್ ಹೊಗಳುವ ಜೊತೆಯಲ್ಲಿ ವಿರಾಟ್ ಕೊಹ್ಲಿ ವಿಚಾರವಾಗಿ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಆಟಗಾರರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯವರನ್ನು ಹೆಚ್ಚು ಕೆಣಕುವ ಪ್ರಯತ್ನಕ್ಕೆ ಹೋಗ ಬೇಡಿ, ಎರಡು ತಂಡದಲ್ಲೂ ಬಲಿಷ್ಠ ಆಟಗಾರರಿದ್ದು ಕೆಣಕುವುದೇ ಆದರೆ ಅದಕ್ಕೊಂದು ಮಿತಿ ಇರಲಿ ಯಾವುದೇ ಕಾರಣಕ್ಕೂ ಅದನ್ನು ದಾಟುವ ಪ್ರಯತ್ನವನ್ನು ಮಾಡಬೇಡಿ,ಕೊಹ್ಲಿಯನ್ನು ಕೆಣಕ್ಕಿದ್ದೇ ಆದರೆ ಅವರು ಎದುರಾಳಿಗಳ ಮೇಲೆ ಅಷ್ಟೇ ಪ್ರಭಾವಯುತವಾಗಿ ತಮ್ಮ ಬಲಿಷ್ಠ ಬ್ಯಾಟಿಂಗ್ ಬಲದಿಂದ ತಿರುಗಿ ಬೀಳುವ ಸಾಧ್ಯತೆಗಳಿವೆ ಹಾಗಾಗಿ ಎಚ್ಚರಿಕೆಯಿಂದ ಆಡಿ ಎಂದು ಆಸ್ಟ್ರೇಲಿಯಾದ ಟೆಸ್ಟ್ ತಂಡದ ಆಟಗಾರರಿಗೆ ಅರೋನ್ ಫಿಂಚ್ ಸಲಹೆಯನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರ ದಾಖಲೆಯನ್ನು ಮಾಡುತ್ತಿಲ್ಲ, ತಮ್ಮ ಬ್ಯಾಟಿಂಗ್ ಮೂಲಕ ರನ್ ಹೊಳೆ ಹರಿಸಿ ದಾಖಲೆ ಮೇಲೆ ದಾಖಲೆ ಬರೆಯೋ ಕಿಂಗ್ ಕೊಹ್ಲಿ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್‍ನಲ್ಲಿ ಯಾವ ಫಾರ್ಮೆಟ್‍ನಲ್ಲೂ ಅಗ್ರಸ್ಥಾನವನ್ನು ಏರಲು ಈ ವರ್ಷ ಸಾಧ್ಯವಾಗಿಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಹೌದು ಟ್ವೀಟರ್‍ನಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಚರ್ಚೆಯಾದ ಆಟಗಾರ ಆಗಿದ್ದು ಆ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಮೊದಲ ಸ್ಥಾನಗಳಿಸಿದ್ದಾರೆ. ವಿರಾಟ್ ಧೋನಿ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಸೋಶಿಯಲ್ ಮೀಡಿಯಾದಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದು, ಧೋನಿ ಎರಡನೇ ಸ್ಥಾನದಲ್ಲಿ ಇದ್ದಾರೆ, ಇನ್ನು ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ.

https://youtu.be/WNrjH3hM4XY
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top